Category: ತೀರ್ಥಯಾತ್ರೆ

2

ರಾಮೇಶ್ವರ, ಕನ್ಯಾಕುಮಾರಿ, ಮಧುರೈ- ಭಾಗ 3

Share Button

ಈ ಕ್ಷೇತ್ರ ತಲುಪಿದಾಗ ಸೂರ್ಯಾಸ್ತಮಾನದ ಸಮಯ. ಆದರೆ ಮೋಡ ಕವಿದ ವಾತಾವರಣದಿಂದಾಗಿ ಹತಾಷರಾದೆವು. ಸಮುದ್ರದಲ್ಲಿ ತೃಪ್ತಿಯಾಗುವವರೆಗೂ ಆಟವಾಡಿ ಕುದುರೆಯೇರಿ ಒಂದು ರೌಂಡ ಸುತ್ತಾಡಿ ಸಿಗುವ ಕುರುಕುಲು ಕಾಫಿ ಹೀರಿ ವ್ಯವಸ್ಥೆಗೊಂಡ ರೂಮು ಸೇರಿಕೊಂಡು ಪವಡಿಸಿದ್ದೇ ಗೊತ್ತಾಗಲಿಲ್ಲ. ಎಲ್ಲಿ ಹೋದರೂ ನಡಿಗೆ ಅನಿವಾರ್ಯ. ಬೆಳಗಿನ ಸೂರ್ಯೋದಯ ವೀಕ್ಷಿಸಲು ಕಡಲ...

2

ಕಾಶಿಯಾತ್ರೆ.. ಗಂಗಾರತಿ.. ಭಾಗ – 3/3

Share Button

ತಂಡದ ಎಲ್ಲಾ ಸದಸ್ಯರು ಬಂದ ಮೇಲೆ ಹೋಟೆಲ್ ಗೆ ವಾಪಸ್ಸಾಗಿ ಊಟ ವಿಶ್ರಾಂತಿ ಮುಗಿಸಿದೆವು. ಅಂದಿಗೆ ನಮ್ಮ ಎರಡು ವಾರದ ಯಾತ್ರೆಯ ಕೊನೆಯ ದಿನವಾಗಿತ್ತು. ಹೆಚ್ಚಿನವರು ಅಂದೇ ರೈಲಿನಲ್ಲಿ ಹೊರಡಲಿದ್ದರು. ಮೈಸೂರಿನಿಂದ ಬಂದಿದ್ದ ಗೆಳತಿ ಭಾರತಿ, ಅಮ್ಮ ಮತ್ತು ನಾನು ಮರುದಿನ ಹೊರಡಲಿದ್ದುದರಿಂದ , ಆ ದಿನ...

4

ಕಾಶಿಯಾತ್ರೆ.. ಗಂಗಾರತಿ.. ಭಾಗ -1/3

Share Button

ಉತ್ತರ ಭಾರತ ಪ್ರವಾಸದಲ್ಲಿದ್ದ ನಮ್ಮ ತಂಡ 27 ಫೆಬ್ರವರಿ 2017 ರಂದು ವಾರಣಾಸಿಯ ದರ್ಶನಕ್ಕೆ ಅಣಿಯಾಗಿತ್ತು. ಅಲ್ಲಿ ನಾವು ಉಳಕೊಂಡಿದ್ದ ಹೋಟೆಲ್ ನ ಹೆಸರು ಪದ್ಮಿನಿ ಇಂಟರ್ನ್ಯಾಶನಲ್. ನಮ್ಮ ಟ್ರಾವೆಲ್ಸ್ ನ ಮುಖ್ಯಸ್ಥ ಗಿರೀಶ್ ಅವರು ಎಲ್ಲರನ್ನೂ ಉದ್ದೇಶಿಸಿ “ ನಾವಿನ್ನು ಕಾಶಿಗೆ ಹೋಗ್ತೀವಿ. ಅಲ್ಲಿ ಕ್ಯಾಮೆರಾ,...

0

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 8

Share Button

 ಮರಳಿ ಪೋಖ್ರಾದತ್ತ… ಹಿಂತಿರುಗಿ ಬರುವ ದಾರಿಯಲ್ಲಿ ಭಾರತಿ ಮತ್ತು ನಾನು ಹೋಟೆಲ್ ಒಂದರಲ್ಲಿ ನೂಡಲ್ಸ್, ಸಾಂಡ್ ವಿಚ್ ತಿಂದು   ಜೀಪಿನತ್ತ ಬಂದೆವು.  ನಮ್ಮೊಡನೆ ಬಂದಿದ್ದ ಹಿರಿಯರೊಬ್ಬರಿಗೆ ಬಹಳ ಸುಸ್ತಾಗಿತ್ತು. ಅವರಿಗೆ ಸ್ವಲ್ಪ ನೀರು ಕುಡಿಸಿ, ನಮ್ಮ ಬಳಿ ಇದ್ದ ಒಣಹಣ್ಣುಗಳು ಮತ್ತು  ಚಾಕೊಲೇಟ್ ತಿನ್ನಲು ಕೊಟ್ಟೆವು, ನಮ್ಮ...

0

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 7

Share Button

ಬೆಳಗ್ಗೆ 0915 ಗಂಟೆಗೆ ಮುಕ್ತಿನಾಥ ತಲಪಿದೆವು (22/02/2017). ಜೀಪಿನಿಂದ ಇಳಿದ ತಕ್ಷಣ, ಕಡಿಮೆ  ಆಮ್ಲಜನಕದ ಅನುಭವವಾಯಿತು. ಹಿಮ ಹೊದ್ದ ಬೆಟ್ಟಗಳ ನಡುವೆ ಸ್ವಲ್ಪ ಸಮತಟ್ಟಾದ ದಾರಿ ಮತ್ತು ಕೆಲವು ಮೆಟ್ಟಿಲುಗಳುಳ್ಳ ಕಾಲುದಾರಿಯಲ್ಲಿ ಹೆಜ್ಜೆ ಹಾಕಿದೆವು. ನಾಲ್ಕು ಹೆಜ್ಜೆ ಸಡೆಯುವಷ್ಟರಲ್ಲಿ ಸುಸ್ತಾಯಿತು. ಸುಮಾರು 100 ಅಡಿ ನಡೆಯುವಷ್ಟರಲ್ಲಿ ಶರೀರ...

0

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 6

Share Button

ಜೋಮ್ ಸಮ್ ನಿಂದ ಮುಕ್ತಿನಾಥದತ್ತ  .. 22 ಫೆಬ್ರವರಿ 2017 ರಂದು  ಜೋಮ್ ಸಮ್ ನಿಂದ 28  ಕಿ.ಮೀ ದೂರದಲ್ಲಿರುವ  ಮುಕ್ತಿನಾಥಕ್ಕೆ ಹೋಗಬೇಕಿತ್ತು.    06 ಗಂಟೆಯಿಂದ ಸ್ನಾನಕ್ಕೆ ಬಿಸಿನೀರು ಬರುತ್ತದೆ ಅಂತ ಹೋಟೆಲ್ ಮಾಲಿಕ ಹೇಳಿದ್ದರಾದರೂ, ಬಿಸಿನೀರು ಬರಲಿಲ್ಲ.  ಅನಿವಾರ್ಯವಾಗಿ, ಚಳಿಯಿದ್ದರೂ ತಣ್ಣೀರಿನಲ್ಲಿಯೇ ಸ್ನಾನ ಮುಗಿಸಿ, ಕಾಫಿ...

0

ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 5

Share Button

ಜೋಮ್ ಸಮ್ ನಲ್ಲಿ ಒಂದು ದಿನ ಜೋಮ್ ಸಮ್ ನಲ್ಲಿ ಏನಿದೆ ನೋಡೋಣ  ಅಲ್ಲಿದ್ದ  ಒಂದೇ ಬೀದಿಯಲ್ಲಿ ಅತ್ತಿಂದಿತ್ತ ನಡೆದೆವು. ಸುತ್ತಲೂ ಕಂದು ಬಣ್ಣದ ಬೋಳು ಬೆಟ್ಟಗಳು. ಅವುಗಳಲ್ಲಿ ಕೆಲವು ಶಿಖರಗಳು ಹಿಮಾವೃತವಾಗಿ  ಬೆಳ್ಳಿಯ ಹೊದಿಕೆ ಹೊದ್ದಿದ್ದುವು.  ಇದ್ದ ಒಂದೇ ಬೀದಿಯ ಪಾರ್ಶ್ವದಲ್ಲಿ, ಸಣ್ಣ ಶಾಲಾ ಮೈದಾನದಂತೆ...

1

ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು..ಭಾಗ 3

Share Button

  ನನ್ನೊಂದಿಗೆ ಬಂದಿದ್ದ ನನ್ನ ತಾಯಿಗೆ ಪ್ರಯಾಣದಿಂದ ಸುಸ್ತಾಗಿತ್ತು.  ತಲೆನೋವು, ಊಟವೂ ರುಚಿಸಲಿಲ್ಲ ಎಂದು ಆಗಲೇ ವಿಶ್ರಮಿಸಿದ್ದರು. ಹಾಗಾದರೆ ಮುಕ್ತಿನಾಥಕ್ಕೆ ಇಬ್ಬರ ಸಲುವಾಗಿ ಮುಂಗಡ ಕೊಡುವುದೋ ಬೇಡವೋ,  ಆ ರಸ್ತೆಯ ಪ್ರಯಾಣ ಬಹಳ ಕಷ್ಟಕರವಂತೆ, ಅಂದೆ. ‘ಸುಸ್ತು ಅಷ್ಟೆ, ನಿದ್ರೆ ಮಾಡಿದರೆ ಸರಿ ಹೋಗಬಹುದು, ಬುಕ್ ಮಾಡು...

2

ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 2

Share Button

  ಮುಕ್ತಿನಾಥವು ಶಕ್ತಿಪೀಠವೂ ಹೌದು . ಪೌರಾಣಿಕ ಕತೆಯ ಪ್ರಕಾರ, ದಕ್ಷನು ಕೈಗೊಂಡ ಯಜ್ಞಕ್ಕೆ ತನ್ನನ್ನು ಮತ್ತು ಶಿವನನ್ನು ಆಹ್ವಾನಿಸಿದ ಕಾರಣ ಅವಮಾನಿತಳಾದ ಸತಿದೇವಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿದ್ದಳು. ಸತಿಯ ಮೃತ ದೇಹವನ್ನು ಹೊತ್ತುಕೊಂಡು ಶಿವನು ಕಾಡು ಮೇಡು ಅಲೆಯುತ್ತಿದ್ದಾಗ ಆಕೆಯ ಶರೀರದ ಭಾಗಗಳು ಬಿದ್ದ...

3

ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 1

Share Button

ನಮ್ಮ ನೆರೆ ರಾಷ್ಟ್ರವಾದ ನೇಪಾಳದಲ್ಲಿ ಮಾನವ ನಿರ್ಮಿತ ಅನುಕೂಲತೆಗಳು ಕಡಿಮೆ ಇದೆಯಾದರೂ, ಪ್ರಾಕೃತಿಕ ಸೊಬಗು ಮೊಗೆದಷ್ಟೂ ಮುಗಿಯದು. ನೇಪಾಳ ಪ್ರವಾಸದ ದಾರಿಯಲ್ಲಿ ದೃಷ್ಟಿ ಹಾಯಿಸಿದಲ್ಲೆಲ್ಲ ಹಸಿರು ಬೆಟ್ಟ, ಕಂದು ಬಣ್ಣದ ಪರ್ವತ ಅಥವಾ ಹಿಮಕಿರೀಟ ತೊಟ್ಟ ಹಿಮಾಲಯದ ಬೆಟ್ಟಗಳು. ಅಲ್ಲಲ್ಲಿ ಕಾಣಸಿಗುವ ಪ್ರಪಾತಗಳು, ಕಣಿವೆಗಳು. ಇವುಗಳ ಮಧ್ಯೆ ಆಗೊಮ್ಮೆ,...

Follow

Get every new post on this blog delivered to your Inbox.

Join other followers: