Author: Vijaya Subrahmanya
ನಾನು ಚಿಕ್ಕವಳಿದ್ದಾಗ ನನ್ನ ಏಳನೆ ತರಗತಿವರೆಗಿನ ವಿದ್ಯಾಭ್ಯಾಸ ನನ್ನ ಅಜ್ಜನಮನೆಯಲ್ಲಿದ್ದುಕೊಂಡು ಪೂರೈಸಿದ್ದೆ ಎಂದು ಹೇಳಿದ್ದೆನಲ್ಲ ಬಂಧುಗಳೇ…,ಹಣ್ಣು-ಹಂಪಲುಗಳಿದ್ದ ದಿನ ರಾತ್ರಿ ಊಟತೀರಿಸಿದಮೇಲೆ ಅದನ್ನು ಹಂಚುವ ಜವಾಬ್ದಾರಿಕೆ ಅಜ್ಜನದು!. ಅದು ಹೇಗೆ ಕೇಳಿ..,ಬಾವಂದಿರು+ನಾನು ಸಹಿತ ಮೊಮ್ಮಕ್ಕಳನ್ನು ಕರೆದುಬಿಟ್ಟು ಒಬ್ಬೊಬ್ಬರಿಗೆ ಒಂದೊಂದು ಕೆಲಸ.ಹಣ್ಣುಗಳನ್ನು ತೊಳೆದುತರಲು ಒಬ್ಬ, ಚೂರಿ+ಪ್ಲೇಟು ತರಲು.., ಇನ್ನೊಬ್ಬ, ಹೆಚ್ಚಿದ...
ನಾನಾಗ ಪ್ರೈಮೆರಿ ಶಾಲೆ ಕಲಿಯುತ್ತಿದ ದಿನಗಳವು. ಈ ಹಿಂದೆ ಹೇಳಿದಂತೆ ನನ್ನ ಅಜ್ಜನಮನೆಯಿಂದ ಸೋದರಮಾವನ ಮಕ್ಕಳಾದ ಬಾವಂದಿರ ಜೊತೆಗೆ ಕುಂಬಳೆಸೀಮೆಯ ಇಚ್ಲಂಪಾಡಿ ಹಿರಿಯ ಬುನಾದಿ ಕಳತ್ತೂರು ಶಾಲೆಗೆ ಹೋಗುತ್ತಿದ್ದ ಕಾಲ. ಅಜ್ಜನಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ. ಮನೆಯಿಂದ ಶಾಲೆಗೆ ಐದುನಿಮಿಷದ ಹಾದಿ. ಈಗಿನಂತೆ ಆ ಕಾಲದಲ್ಲಿ...
ಅನುಭವ ಮುತ್ತು-1 ನಾನು ಬಾಲ್ಯದಲ್ಲಿ ಏಳನೇ ತರಗತಿ ತನಕ ನನ್ನಜ್ಜನ ಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ ಕೇಶವ ಭಟ್ಟರ ಮನೆಯಿಂದ(ಅವರು ನನ್ನಜ್ಜ) *ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು* ಶಾಲೆಗೆ ಹೋಗಿ ಅಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ.. ನಾನು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಕಾಲ. ನನ್ನ...
1. ಕಸಿಯುತಿರುವಿರಾ ಭಾರತದ ಯೋಧರ ಪ್ರಾಣ| ತುಂಬುತಲಿದೆ ನಿಮ್ಮ ಪಾಪದ ಕೂಪ ಕಾಣ|| ಕ್ಷಮಿಸಳು ಭಾರತಮಾತೆ ನಿಮ್ಮ ಕಾಳುಮರೆ| ಬಿಡದು ಅಮ್ಮಂದಿರ ದಾರುಣ ನೋವಿನ ಮೊರೆ|| 2. ಹಿಂದೂಸ್ಥಾನದಲ್ಲಿ ಪಾಕಿಗಳ ಹಿಂಸಾಚಾರ| ಬೇಕಿದಕೆ ನಮ್ಮ ಒಗ್ಗಟ್ಟಿನ ಘೋರ ಬಹಿಷ್ಕಾರ|| ಇದೆ ಭಾರತದ ಯೋಧರಿಗೂ ಬದುಕುವ ಹಕ್ಕು| ಪಾಕಿಸ್ತಾನಿಗಳೇ...
ಓ…ನನ್ನ ಚಿಗುರಳಿದ ಚೇತನ ಬೇಡವೆಂದರೂ ಮರೆಯುವುದಿಲ್ಲ ,ನಿನ್ನ ಅಮರವೀರ ಕಥನ| ಕಟುಕನ ವಾಮಮಾರ್ಗಕೆ ಬಲಿಯಾಗಿ ತಾಯ್ನೆಲದಲ್ಲಿ ಹೊನ್ನಕ್ಷರದಿ ಬರೆಸಿ ಮರೆಯಾದ ಯೋಧ ನೀನೇ ಧನ್ಯ| ಕಂದಾ ಭೂದೇವಿಮಡಿಲಲ್ಲಿ ಮಲಗಿದಾಗ ದಣಿವರಿದ ನಿನ್ನ ದುಡಿಮೆಗೆ ತಾಯಾಗಿ ಹಾಡಿದಳಲ್ಲ ಚಿರನಿದ್ರೆಗೆ ರಾಗ| ನನ್ನಲ್ಲಿ ಪಿಸುಗುಟ್ಟುತ್ತಿದೆ ನಿನ್ನ ಬಿಸಿಯುಸಿರು ಕಲುಕುತ್ತಿದೆ...
ಪುರಾತನ ಕಾಲದಲ್ಲಿ ಹಿರಣ್ಯಾಕ್ಷನೆಂಬ ರಕ್ಕಸನಿದ್ದನು. ಅವನ ಮಗನಾದ ತಾರಕಾಸುರನೂ ದುಷ್ಟ ರಾಕ್ಷಸ.ಈತನು ಗೋಕರ್ಣ ಕ್ಷೇತ್ರದಿಂದ ಶಿವನ ಕುರಿತು ತಪಸ್ಸು ಮಾಡಿ, ಅವನನ್ನು ಒಲಿಸಿಕೊಂಡನು. ಯಾಕಾಗಿ ನನ್ನನ್ನು ಕುರಿತು ತಪಸ್ಸು ಮಾಡಿದೆ ಎಂದು ಭಕ್ತರಿಗೊಲಿದ ದೇವರು ಕೇಳಬೇಕಲ್ಲವೇ?.ಹಾಗೆಯೇ ಆಯಿತು.ಪರಮೇಶ್ವರನು ತಾರಕಾಸುರನಲ್ಲಿ ನಿನ್ನ ಇಷ್ಟಾರ್ಥವೇನೆಂದು ಕೇಳಲು ತಾರಕಾಸುರನು ನನಗೆ ಮಹಾದೇವನಾದ...
ದೀಪಾವಳಿಗೆ-(ಚುಟುಕ) ಅಂದು ವಾಮನ ತುಳಿದ ಬಲಿಚಕ್ರವರ್ತಿ| ಅವನೆ ದೀಪಾವಳಿಗೆ ನಮಗೆ ನಿಕಟವರ್ತಿ|| ಬಲಿಯ ಬಲಿದಾನ ಜನತೆಗೊಂದು ಮಾದರಿ| ಹೇಳುತ್ತ ತುರಿಯುವೆವು ಹಬ್ಬಕ್ಕೆ ಕೊಬ್ಬರಿ|| ದೀಪದ ಬೆಲೆ-(ಚುಟುಕ) ಮನದ ಜಡ ನೀಗಲು ದೀಪಾವಳಿ ಬೆಳಕು| ಬೇಕು ಕಹಿ ಕತ್ತಲೆಗೆ ಮೋದದ ತಳಕು|| ಬೆಳಕೇ ನಮ್ಮ ಜಡಬೇನೆಗೆ ಮದ್ದು| ಹಿತ-ಮಿತ...
ಕನ್ನಡವ ಕೊಲ್ಲದಿರು ಓ ಪುಟ್ಟ ತಮ್ಮ| ಇಂಗ್ಲಿಷನ್ನೆ ನೆಚ್ಚದಿರು ಓ ಚಿನ್ನ ರನ್ನ|| ದಾರಿಯಲಿ ಬೀದಿಯಲಿ ಪೇಟೆಯಲಿ| ಆಡು-ಮಾತಾಡು ಕನ್ನಡದ ಸೊಲ್ಲು|| ಕನ್ನಡವ ನೆಚ್ಚಿ ಮೇಲ್ಮೆಗೈದಿಹರು| ಕನ್ನಡಕೆ ಹೋರಾಡಿ ಮಡಿದಂತ ವೀರರು|| ಲೋಕಮಾನ್ಯರು ಅವರೆ ನಮ್ಮ ಪೂರ್ವಜರು| ಸವಿಗನ್ನಡಕಾಗಿ ಪ್ರಾಣ ತೆತ್ತವರು|| ಕನ್ನಡವೆ ಪ್ರಾಣ, ಕನ್ನಡವೆ ಮಾನ|...
ಬಾನಂಗಳದಲ್ಲಿ ಹಾರಾಡುವ ವಿಮಾನವನ್ನು ಚಿಕ್ಕಂದಿನಲ್ಲೇ ಮನೆಯಂಗಳದಲ್ಲಿ ನಿಂತು ನೋಡುವಾಗೆಲ್ಲ ನನ್ನ ಮನದೊಳಗೆ ನಾನೂ ವಿಮಾನಯಾನ ಮಾಡಬೇಕೆಂಬ ಅಭಿಲಾಶೆ ಬೇರೂರಿತ್ತು.ಆ ಸನ್ನಿವೇಶ ಎಂದಿಗೆ ಬರುತ್ತೋ ಕಾಯುವಿಕೆ ಮನದಮೂಲೆಯಲ್ಲಿ ತಣ್ಣಗೆ ಕುಳಿತಿತ್ತು.ಕಾಲ ಸಾಗಿತ್ತು.ಮೂಲೆಯಲ್ಲಿ ತಣ್ಣಗಿದ್ದ ಆ ಸನ್ನಿವೇಶ ಹೀಗೊಂದು ದಿನ ಗರಿಕೆದರಿ ಎದ್ದಿತು!.ಹೈದ್ರಾಬಾದ್‌ಗೆ ನಾಲ್ಕು ದಿನಗಳ ಪ್ರವಾಸವನ್ನು ನಿಗದಿಪಡಿಸಿದ ನನ್ನ...
ಯುಗದ ಆದಿಯೇ ಯುಗಾದಿ.ಅರ್ಥಾತ್ ಸಂವತ್ಸರದ ಆರಂಭ.ಋತುರಾಜ ವಸಂತನ ಶುಭಾಗಮನ ದಿನ.ಯುಗಾದಿಯನ್ನು ಹಬ್ಬವನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿ-ಪರಂಪರೆಯ ಕೊಡುಗೆ. ಯುಗಾದಿಯ ವೈಶಿಷ್ಟ್ಯಃ– ಒಂದು ಕುಟುಂಬದಲ್ಲಿ ಒಂದು ಶಿಶುವಿನ ಜನನವಾದಾಗ ಮನೆಮಂದಿಗೆ ಹೇಗೆ ಹರ್ಷೋಲ್ಲಾಸವಾಗುವುದೋ ಅಂತೆಯೇ ನೂತನ ಸಂವತ್ಸರದ ಆಗಮನದ ವೇಳೆಯೂ ಸಡಗರ ಸಂಭ್ರಮ ಪಡುವುದು ರೂಢಿ. ಯುಗಾದಿಯಲ್ಲಿ ಎರಡು...
ನಿಮ್ಮ ಅನಿಸಿಕೆಗಳು…