ಹಂಚಿ ತಿನ್ನುವ ಗುಣ (ನುಡಿಮುತ್ತು-3)

Share Button

ನಾನು ಚಿಕ್ಕವಳಿದ್ದಾಗ ನನ್ನ ಏಳನೆ ತರಗತಿವರೆಗಿನ ವಿದ್ಯಾಭ್ಯಾಸ ನನ್ನ ಅಜ್ಜನಮನೆಯಲ್ಲಿದ್ದುಕೊಂಡು ಪೂರೈಸಿದ್ದೆ ಎಂದು ಹೇಳಿದ್ದೆನಲ್ಲ ಬಂಧುಗಳೇ…,ಹಣ್ಣು-ಹಂಪಲುಗಳಿದ್ದ ದಿನ ರಾತ್ರಿ ಊಟತೀರಿಸಿದಮೇಲೆ ಅದನ್ನು ಹಂಚುವ ಜವಾಬ್ದಾರಿಕೆ ಅಜ್ಜನದು!. ಅದು ಹೇಗೆ ಕೇಳಿ..,ಬಾವಂದಿರು+ನಾನು ಸಹಿತ ಮೊಮ್ಮಕ್ಕಳನ್ನು ಕರೆದುಬಿಟ್ಟು ಒಬ್ಬೊಬ್ಬರಿಗೆ ಒಂದೊಂದು ಕೆಲಸ.ಹಣ್ಣುಗಳನ್ನು ತೊಳೆದುತರಲು ಒಬ್ಬ, ಚೂರಿ+ಪ್ಲೇಟು ತರಲು.., ಇನ್ನೊಬ್ಬ, ಹೆಚ್ಚಿದ ಹೋಳುಗಳನ್ನು ಪಾಲುಮಾಡಿಡಲು ಮತ್ತೊಬ್ಬ, ಮನೆಯಲ್ಲಿ ಎಷ್ಟು ಮಂದಿಇದ್ದಾರೆಂದು ಎಣಿಕೆ ಮಾಡಲು ಮಗದೊಬ್ಬ ..,ಹೀಗೆ ನೇಮಿಸುವ ಅಜ್ಜ ; ಹೆಚ್ಚಿಟ್ಟ ಹಣ್ಣುಗಳನ್ನು ಹಂಚಲು ಯಾರಿಗೆಲ್ಲ ಯಾರು ಎಂಬುದನ್ನೂ ಸೂಚಿಸುವರು.

ಅಲ್ಲಿ ಆ ಗಳಿಗೆಗೆ ಅಜ್ಜಿಗೆ ಕೊಟ್ಟುಬರಲು ನಾಮುಂದು., ತಾ ಮುಂದು ಎಂದು ನಮಗೆಲ್ಲ ಪೈಪೋಟಿ!!!  ಅದೇನು ಅದರಲ್ಲಿ ವಿಶೇಷ!? ಎಂದು ಓದುಗರಿಗೆ ಅರ್ಥವಾಗಿರಬಹುದು!!. ಮಕ್ಕಳ ಬುದ್ಧಿ….!!!. ಅಜ್ಜಿಗೆಂದು ಕೊಟ್ಟ ಹಣ್ಣುಗಳ ಪೀಸು  ತಂದಿತ್ತ ಮಗುವಿಗೆ ಭಕ್ಷೀಸು!!!.ತುಂಬ ಹೋಳಿದ್ದ ಪಕ್ಷದಲ್ಲಿ ಒಂದು ತೆಗೆದು ತನ್ನ ಬಾಯಿಗೆ ಹಾಕಿದ ಅಜ್ಜಿ..,” ಇದು ನಿನಗಾಯಿತು  ತಿನ್ನು ” ಎನ್ನುವುದು ರೂಢಿ.ಅದಕ್ಕಾಗಿ ಅಜ್ಜಿಗೆ ಕೊಂಡೊಯ್ಯುವ ಉತ್ಸಾಹ!!!.ಕೆಲವು ವೇಳೆ ಅಜ್ಜಿಯೂ ಅದನ್ನೆಲ್ಲ ಎಲ್ಲಾ ಪುಳ್ಳಿಯಂದಿರಿಗೂ ಹಂಚಿಕೊಡುವುದೂ ಇದೆ.

ಅಂದು ಕಲಿತ ಪಾಠ ..,ಅದರ ಮೌಲ್ಯತೆ..,ಬುದ್ಧಿ ಬಲತಮೇಲೆ ಮನಸ್ಸಿಗೆ ಹೊಳೆಯುವುದು ಸುಳ್ಳಲ್ಲ!!.ಆಪ್ತರಿಗೆ ಕೊಡುವ ಉದಾರತೆ.., ಇದರಿಂದಾಗುವ ಧನ್ಯತಾಭಾವ..!!!! ಹಣಕೊಟ್ಟರೆ ಸಿಗದು!!!!. ಮಕ್ಕಳಿಗೆ ಎಳವೆಯಲ್ಲೇ ಈ ಮೌಲ್ಯ ಗುಣಗಳನ್ನು ಅವರ ಎಳೆಮನಸ್ಸಿಗೆ  ಕಾರ್ಯ ರೂಪದಿಂದ ಬಿತ್ತಬೇಕು ಎಂಬುದು ತಾಯಂದಿರಿಗೆ  ನನ್ನ ಸಲಹೆ.. ನನ್ನ ಹಿರಿಯರಿಂದ *ಪೊರವಿ*ಯಲ್ಲೇ  ಬಂದ ಈ- ಸಂಸ್ಕಾರ ಗುಣಗಳು  ನನ್ನ ಜೀವನದುದ್ದಕ್ಕೂ ಬಂದಿದೆ ಎಂದರೆ ತಪ್ಪಾಗದು.

ಈಗ ನಮ್ಮ ಹಿತ್ತಿಲಿನಲ್ಲಿ ಬೆಳೆಯುವ ಮಾವಿನಹಣ್ಣು, ಚಿಕ್ಕು ಮೊದಲಾದ ಹಂಪಲುಗಳನ್ನು ಬೇರೆಯವರಿಗೆ ಕರೆದು ಕೊಡದೆ ತಿನ್ನಲು ನನ್ನ ಮನಸೊಪ್ಪದು.  ಇದೀಗ ಚಿಕ್ಕು ಮಾವುಗಳ ಸೀಸನ್.  ಬಾವಲಿಗಳು ಯತೇಷ್ಟ ತಿಂದು ಕೆಲವನ್ನು ಅರೆಬರೆ  ತಿಂದು ಮರದಬುಡದಲ್ಲಿ ಚೆಲ್ಲಿ ಹೋಗುತ್ತವೆ!!!.ಉಳಿದ ಫಲಗಳು ನಮಗೆ!!!!ಕೆಲವೊಮ್ಮೆ ಅದೆಲ್ಲ ನಾಶವಾಗುತ್ತದಲ್ಲಾ ಎಂಬ ಬೇಜಾರು ಬಂದರೂ ಕ್ಷಣದಲ್ಲೇ ಮನಸ್ಸು ಜಾಗೃತಗೊಳ್ಳುತ್ತದೆ.

ಏನೆಂದರೆ…”ನಮ್ಮ ತೋಟದಲ್ಲಾದ ಫಲಗಳು ಪ್ರಕೃತಿಯಲ್ಲಿರುವ ಹಕ್ಕಿ-ಪಕ್ಷಿಗಳೂ ತಿಂದು ಸಂತೋಷಪಡಲಿ”  ಎಂದು ಸಂತಸದ ಉಸಿರು!!…ಹಣ್ಣುಗಳು ಮಾಗುವಾಗ, ಆಪ್ತ ಮಿತ್ರರಿಗೆ  ಹಂಚಿ ತಿಂದಾಗ ಆಗುವ ,ಸಂತೋಷ, ಧನ್ಯತಾ ಮನೋಭಾವ ಇದೆಯಲ್ಲ ಅದು ವರ್ಣಿಸಲಸದಳ!!..  ಈ ಸಂದರ್ಭದಲ್ಲಿ  ನೆನಪಾದ ಈ ಬರಹ ನಿಮ್ಮ ಮುಂದೆ..
.
-ವಿಜಯಾಸುಬ್ರಹ್ಮಣ್ಯ ,ಕುಂಬಳೆ.

3 Responses

  1. Nayana Bajakudlu says:

    ಬಹಳ ಆಪ್ತ ಬರಹ . ನಿಜ ಹಂಚಿ ತಿನ್ನುವ ಗುಣವನ್ನು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಕಲಿಸಿ ಕೊಡಬೇಕು. ಅದು ನಮ್ಮ ಕರ್ತವ್ಯ ಕೂಡ

  2. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    ನಯನ ಬಜಕ್ಕೂಡ್ಳು ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು.

  3. Shankari Sharma says:

    ಆಪ್ತ ಬರಹ …ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: