ಲಹರಿ

ಮರೆವು ಶಾಪವೋ ವರವೋ

Share Button

ವೃದ್ಧಾಪ್ಯ ಬಂದಂತೆ ಸಹಜವಾಗಿ ಮನುಜನಿಗೆ ಮರೆವು ಬರುತ್ತದೆ. ಆದರೆ ಕೆಲವರಿಗೆ ಅಕಾಲದಲ್ಲೂ ಮಿತಿತಪ್ಪಿ ಮರೆವು ಬರುವುದನ್ನು ಕಾಣುತ್ತೇವೆ. ಒಂದು ಕಾರ್ಯಕ್ರಮದಲ್ಲಿ ಕೆಲವಾರು ಹೆಂಗಳೆಯರು ಸೇರಿದಲ್ಲಿ ಮರೆವಿನಬಗ್ಗೆ ತಮ್ಮ ತಮ್ಮ ಅನುಭವವನ್ನ ಹಂಚಿಕೊಳ್ತಾರೆ.

ಕೆಲವರ ಅನುಭವ ಓದಿ— ನನಗೆ ಇತ್ತೀಚಿಗೆ ಕಂಡಾಬಟ್ಟೆ ಮರೆವು ನೋಡಿ!. .ಏನಾದ್ರೂ ಒಳಗಿಂದ ತರುವುದಕ್ಕೆಂದು ಅಡಿಗೆ ಮನೆಗೆ ಹೋದ್ನೋ ;ಅಲ್ಲಿಗೆ ಹೋದಾಗ ಯಾಕೆ ಬಂದೆ? ಎಂದು ವಾಪಾಸು ಯೋಚಿಸುವಂತಾಗುತ್ತದೆ..ಮತ್ತೊಮ್ಮೆ ಹೊರಗೆ ಬಂದು ಯೋಚಿಸಿದರೂ ಬೇಗನೆ ನೆನಪಾಗದು..ಕಣ್ಮುಚ್ಚಿ ಆ ಸಂದರ್ಭದಲ್ಲೇ ಮುಳುಗಿದರೆ ಸೈ.ಮತ್ತೆ ನೆನಪು….ಇದು ಕಿರಣಳ ಅಹವಾಲು!.

“ನಮ್ಮೆಜಮಾನ್ರಿಗೆ ಪೇಟೆಗೆ ಹೊರಟಾಗ ಕೈಚೀಲದೊಂದಿಗೆ ತರಬೇಕಾದ ಸಾಮಾನುಗಳ ಪಟ್ಟಿಯನ್ನು ಕೊಡುವುದಕ್ಕೆ ಮರೆವು!.ನಾನು ಕೊಟ್ಟರೂ ಅದನ್ನ ಬಿಡಿಸಿ ನೋಡೋಕೆ ಅವರಿಗೆ ನೆನಪಾಗದು!!.” ಪಾರ್ವತಮ್ಮನ ಅಹವಾಲು.

ನನಗೆ ಅಡಿಗೆಯಲ್ಲಿ ಸಾರಿಗೆ ಉಪ್ಪೋ ಹುಳಿಯೋ ಹಾಕುವುದಕ್ಕೆ ಮರೆತುಬಿಟ್ಟು ಪತಿರಾಯರಿಂದ. ಅದೆಷ್ಟೋ ಪಿರಿಪಿರಿ ಕೇಳುವಂತಾದರೂ ಮುಂದಿನ ಬಾರಿಗೆ ಸರಿಯಾಗೋದಿಲ್ಲ. ಏನು ಮಾಡುವುದು ರಂಜಿನಿಯ ತಹತಹಿಕೆ,!. ಮತ್ತೆ ಕೆಲವು ಅಮ್ಮಂದಿರು ಮಕ್ಕಳ ಊಟದ ಡಬ್ಬಿ ಮಕ್ಕಳ ನ್ನು ಕಳುಹಿಸುವಾಗ ಮರೆತು ಬಿಟ್ಟು ಮತ್ತೆ ಒದ್ದಾಡ್ತಾ ಶಾಲೆಗೆ ದೌಡಾಯಿಸುವ ಅನುಭವ.

ಇನ್ನೋರ್ವ ಸ್ನೇಹಿತೆಯ ಅನುಭವ ಕೇಳ್ತೀರಾ!!.ಏನೋ ಯೋಚಿಸ್ತಾ ಸ್ನಾನ ಮಾಡ್ತಾಳೆ. ಮೈ ಒರಸಿಗೊಂಡ ಕೂಡಲೇ ಕಾಲಿಂಗ್ ಬೆಲ್ ಬಡಿಯುತ್ತದೆ. ಬಟ್ಟೆ ಹಾಕುವುದಕ್ಕೆ ಮರೆತು ದಡಬಡನೆ ಬಂದು ಬಾಗಿಲು ತೆಗೆದಾಗ ಬಂದವಳು ಕೆಲಸದ ಲಚ್ಚಿ… “ಥೂ..ಇದೆಂತದಮ್ಮಾವ್ರೇ..” ಎಂದಾಗ ವಾಸ್ತವಕ್ಕೆ ಬರ್ತಾಳೆ. ಬಚಾವು ಲಚ್ಚೀ ಮರೆತೆ!. ಬೇರೆಯಾರಾದ್ರೂ ಬಂದಿದ್ರೆ!!!


ಜನರು ಯಾವುದನ್ನು ಮರೆಯಬಾರದೋ ಅದನ್ನು ಮರೆಯುತ್ತಾರೆ. ಯಾವುದನ್ನು ಮರೆಯಬೇಕೋ ಅದನ್ನು ಮರೆಯುವುದಿಲ್ಲ. ಮರೆವು ಕೆಲವರಿಗೆ ವರವಾದರೆ; ಇನ್ನು ಕೆಲವರಿಗೆ ಶಾಪವಾಗಿ ಬಿಡುತ್ತದೆ. ಕೆಲವರದು ಹಿತವಾದ ಮರೆವು ದೇವರ ವರವದು, ಅದೇನೆಂದರೆ; ದುಃಖ, ದುಮ್ಮಾನ, ದ್ವೇಷ ಇದೆಲ್ಲ ಮರೆಯುತ್ತದೆ. ಸಂತೋಷದ ಸಂಗತಿಗಳೆಲ್ಲ ನೆನಪಲ್ಲಿ ಉಳಿಯುತ್ತದೆ. ಸೊಸೆಯರಿಗೆ ಅತ್ತೆಯ ಕಿರಿಕಿರಿ, ಗಂಡನ ಬೈಗುಳ, ಮಕ್ಕಳ ರಾದ್ಧಾಂತ, ಗೆಳತಿಯರಿಂದ ಕೀಳರಿಮೆ….ಇದೆಲ್ಲ ಮರೆದು ಕುಟುಂಬದಲ್ಲಿ ಸಹಭಾಗಿಗಳಾಗುತ್ತಾರೆ.

ಅಖಿಲಾಗೆ ಅತ್ತೆಯ ಕಿರಿಕಿರಿ..ಗಂಡನ ಬೈಗುಳ, ಅತ್ತಿಗೆ-ನಾದಿನಿಯರು ಹಕ್ಕು ಚಲಾಯಿಸಿದಾಗ, ಎಲ್ಲವೂ ಆ ಸಂದರ್ಭದಿಂದ ಹೊರಬಂದಾಗ ಮರೆತು ಹೋಗಿರುತ್ತೆ. ಆದರೆ ತನ್ನ ಹುಟ್ಟಿದ ಹಬ್ಬದ ಆಚರಣೆ ಮರೆತು ವಿಶೇಷ ಅಡುಗೆ ಮರೆತುಬಿಡುತ್ತಾಳೆ! ಸೋಜಿಗವೆಂದರೆ ನಿತ್ಯದ ಅಡುಗೆಯಲ್ಲಿ ಹಾಗೂ ಶಾಪಿಂಗ್ ನಲ್ಲಿ ಎಲ್ಲವೂ ನೆನೆಪಿರುವುದರಿಂದ ಅತ್ತೆಗೆ ತಕ್ಕ ನಂಬಿಕಾರ್ಹ ಸೊಸೆ!

ನರ್ಮದಾ ಚಾಣಾಕ್ಷ ಸೊಸೆ. ಪ್ರತಿ ಮೆಟ್ಟು-ಮೆಟ್ಟಿಗೂ ಯಜಮಾನಿಕೆ ಮಾಡುವ ಅತ್ತೆಯ ನಡವಳಿಕೆಯನ್ನ, ತನಗಾದ ಅಸಮಾಧಾನವನ್ನ ಮರೆಯಲೊಲ್ಲಳು. ಸಂದರ್ಭ ಬಂದಾಗ ಮರೆಯದೆ ಅದಕ್ಕೆ ತಕ್ಕ ಪ್ರತಿಫಲ ನೀಡುತ್ತಾಳೆ. ಅತ್ತಿಗೆ -ನಾದಿನಿಯರ ತಪ್ಪನ್ನು ಮರೆಯದೆ ಗಂಡನಲ್ಲಿ ಒಪ್ಪಿಸುತ್ತಾಳೆ.

ಇನ್ನು ಕೆಲವು ಜಾಣ ಮರೆವು. ಕೆಲವು ಗೃಹಸ್ಥರ ಮರೆವಿನ ಸ್ಯಾಂಪ್ಲ್ ನೋಡಿ. ಕಮಲಾಕ್ಷ ಪೇಟೆಯಿಂದ ಬರುವುದನ್ನೇ ಕಾಯುತ್ತಾ ಇದ್ದಾಳೆ ವೆರಾಂಡದಲ್ಲಿ ಪತ್ನಿ. ಕಾರಣ ಅಂದು ಆಕೆಯ ಹುಟ್ಟಿದ ಹಬ್ಬ. ‘ರೀ.ಟೆಕ್ಸ್ ಟೈಲ್ಸ್ ಗೆ ಹೋಗಿಲ್ಲವೇನ್ರೀ…ಕೈಯಲ್ಲೇನೂ ಕಾಣಿಸೋಲ್ಲ..!”  “ಅಯ್ಯೋ ನನ್ನ್ದೊಂದು ಹಾಳ ಮರೆವು..” ಕೈ ಕೊಡವಿದನವ… ” ಹೌದು…ನಾನು ಏನೇ ಹೇಳಿದರೂ ಕೊನೆಗೆ…ನನ್ನ ಜನ್ಮದಿನವೂ ನಿಮಗೆ ಮರೆವೇ ..: ಮುಖ ಊದಿಸಿಕೊಂಡಳಾಕೆ. .

ಕೆಲವಾರು ಸ್ನೇಹಿತೆಯರು ಸೇರಿದಲ್ಲಿ ಅವರವರರ ನೆನಪಿನ . ಮರೆವಿನ ಬುತ್ತಿ ಬಿಚ್ಚಿದುದನ್ನು ಓದಿ, ಅನಿಸಿಕೆ ಹೇಳಿ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ.

7 Comments on “ಮರೆವು ಶಾಪವೋ ವರವೋ

  1. ಧನ್ಯವಾದ ಹೇಮಮಾಲಾ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ ಸ್ನೇಹಿತಿಗೆ

  2. ಸ್ನೇಹಿತರಿಗೆ ಧನ್ಯವಾದಗಳು

  3. ಚಂದದ ಬರಹ . ನನ್ನ ಗಂಡನಿಗೂ ತುಂಬಾ ಮರೆವು. ಎಷ್ಟು ಅಂದ್ರೆ ನಮ್ಮ ಮದುವೆ ಆಗಿ ಸ್ವಲ್ಪ ದಿನದಲ್ಲೇ ನನ್ನನ್ನು ಕಾಸರಗೋಡಿಗೆ ಕರ್ಕೊಂಡು ಹೋಗಿದ್ರು, ಅಲ್ಲಿ ಯಾವುದೋ ಅಂಗಡಿಯಲ್ಲಿ ಪರ್ಚೆಸ್ ಇದೆ ಅಂತ ಹೇಳಿ ನನ್ನನ್ನು ಅಲ್ಲೇ ಬಸ್ ಸ್ಟಾಂಡ್ ಬಳಿ ನಿಲ್ಲಿಸಿ ಹೋಗಿದ್ರು , ಬೈಕ್ ಅಲ್ಲಿ ಹೋಗಿದ್ವಿ ನಾವು . 1 ಗಂಟೆ ಹತ್ರ ಕಾದ್ರು ಈ ಮನುಷ್ಯನ ಪತ್ತೆ ಇಲ್ಲ , ಊರು ಬೇರೆ ಹೊಸದು , ಮಲಯಾಳಂ ಭಾಷೆ ಬೇರೆ ಗೊತ್ತಿಲ್ಲ , ಎಲ್ಲಿ ಹೋದ್ರು ಅಂದ್ಕೋತಾ ನಿಂತಿದ್ದೆ. ಆ ಮೇಲೆ ಸ್ವಲ್ಪ ಹೊತ್ತಲ್ಲಿ ಬಂದು ನಿನ್ನನ್ನು ಕರ್ಕೊಂಡು ಬಂದದ್ದು ನೆನಪೆ ಇಲ್ಲ ಕಣೆ ಅರ್ಧ ದಾರಿ ಕಳೆದ ಮೇಲೆ ವಾಪಾಸು ಬಂದೆ ಅಂತಾರೆ ಏನ್ ಅನ್ಬೇಕು ಈ ವಯ್ಯನ್ ಬುದ್ದಿಗೆ ??? ಈಗಲೂ ಈ ಘಟನೆಯನ್ನು ಹಿಡ್ಕೊಂಡು ಅವರನ್ನು ರೇಗಿಸ್ತಾ ಇರ್ತೇನೆ .
    ವಿಜಯ ಅವರೇ ಬಹಳ ಚಂದ ಬರೆದಿದ್ದೀರಿ , ನಿಮ್ಮ ಬರಹದಿಂದಾಗಿ ನಮ್ಮ ನೆನಪುಗಳು ಮತ್ತೆ ನೆನಪಾಗಿ ನಗು ತರಿಸಿತು .

  4. ವಾಹ್…ನಯನ….ಕೆಲವು ಪತಿವರ್ಯರಿಗೆ ಮರೆವು ಬರುವುದು ಸಹಜ..,ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ… ಇದು ಮಾತ್ರ.,…!
    ಹೋಗಲಿ..,ಬೇಜಾರು ಬೇಡ. ಮರೆತು ಮನೆತನಕ ಹೋಗಿಲ್ಲವಲ್ಲ!!

  5. ಇಂದು ಸಾರ್ವತ್ರಿಕವಾಗಿರುವ ಮರೆವಿನ ರೋಗ(?) ಏನೆಲ್ಲಾ ಎಡವಟ್ಟುಗಳಿಗೆ ಎಡೆಮಾಡಿ ಕೊಟ್ಟಿದೆ ಅಲ್ವಾ? ಚಂದದ ಬರಹ ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *