Author: Vijaya Subrahmanya
ಸಂಸಾರದಲ್ಲಿ ಮಿಕ್ಕೆಲ್ಲರ ಶೀಲಕ್ಕಿಂತ ಗೃಹಿಣಿಯಾದವಳ ಶೀಲಕ್ಕೆ ಹೆಚ್ಚು ಮಹತ್ವ. ಅದನ್ನು ಅಳೆದು ತೂಕನೋಡುವುದು, ಗುಣಾವಗುಣಕ್ಕೆ ಮೇಲ್ಮೆ-ಕೀಳ್ಮೆಗಳ ಗರಿಷ್ಟ-ಕನಿಷ್ಟಗಳ ಪಟ್ಟಿ ಕೊಡುವುದು, ಅನಾದಿಕಾಲದಿಂದಲೇ ಬಂದ ಪದ್ಧತಿ. ಹಾಗೆಯೇ ಕೆಲವು ಸನ್ನಿವೇಶಗಳಲ್ಲಿ ಗೃಹಿಣಿಯರನ್ನು ಸತ್ವಪರೀಕ್ಷೆಗೆ ಒಳಪಡಿಸುದೂ ಇದೆ. ಇಂತಹ ಸಂದರ್ಭಗಳಲ್ಲಿ, ಮಾನಿನಿಯರು ತಮ್ಮ ಬುದ್ಧಿ, ವಿವೇಕ, ಜಾಣ್ಮೆಯಿಂದ ವ್ಯವಹರಿಸಬೇಕೆಂದು ಅನಸೂಯ...
ಭಕ್ತರಲ್ಲಿ ಗುರುವನ್ನು ಕಾಣು, ಗುರುವಿನಲ್ಲಿ ದೇವರನ್ನು ಕಾಣು, ದೇವರಲ್ಲಿ ಎಲ್ಲವನ್ನೂ ಕಾಣು. ಎಂಬುದಾಗಿ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದ ಶ್ರೀಸೂಕ್ತಿ ನೆನಪಾಗುವುದು. ಹಾಗೆಯೇ ಯಾವುದೇ ಕಾರ್‍ಯದಲ್ಲಿ ಹಿಂದೆ ಮುನ್ನಡೆಸುವವನಾಗಿ ಗುರುವಿದ್ದು; ಮುಂದೆ ಶಿಷ್ಯನಿರಬೇಕಂತೆ. ಹಾಗೊಂದು ಪುರಾಣಕತೆ ನಿಮ್ಮ ಮುಂದೆ. ಗುರುವಿನ ಉದರದೊಳಗೆ ಹೊಕ್ಕು ಹೊರಬಂದ ಕಚ:-...
ಒಂದು ನಾಡಿನ ಸಂಪತ್ತೆಂದರೆ ಅಲ್ಲಿಯ ಮಕ್ಕಳು. ಈ ಸಜೀವಸಂಪತ್ತನ್ನು ಉಳಿಸಿ ಬೆಳೆಸಿ ಯೋಗ್ಯ ಪ್ರಜೆಯನ್ನಾಗಿ ಮಾಡುವವನೇ ಶಿಕ್ಷಕ. ‘ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲಗುರುವು’ ಎಂಬ ಕವಿವಚನವನ್ನು ನಾವು ಕೇಳಿದ್ದೇವೆ. ಇದು ಶೈಶವ ಕಾಲದಲ್ಲಾದರೆ ಮುಂದೆ ಬಾಲ್ಯಾವಸ್ಥೆಯಲ್ಲಿ ಗುರುಮಖೇನ ಕಲಿಕೆ ಪ್ರಾರಂಭ. ಆಮೇಲೆ ವ್ಯಕ್ತಿತ್ವ ವಿಕಸನಕ್ಕಾಗಿ...
ಒಮ್ಮೆ ನಾವು ಕೆಲವು ಮಂದಿ ಮಹಿಳೆಯರು ಮಾತನಾಡುತ್ತಾ ಸಾಗುತ್ತಿದ್ದಾಗ ಎದುರು ಸಿಕ್ಕಿದಾತ ಒಬ್ಬಾಕೆಯ ಕಿವಿಯಲ್ಲಿ ಏನೋ ಪಿಸುಗುಟ್ಟಿದ.ತುಸುಮುಂದೆ ಸಾಗಿದಾಗ ಆತ ಕಿವಿಗೂದಿದ್ದು ಅನ್ಯರ ಟೀಕೆಯನ್ನು ಎಂಬುದಾಗಿ ತಿಳಿಯಿತು. ಆಕೆ ನೊಂದುಕೊಂಡಳು. ಅದು ನಮ್ಮ ಗುಂಪಿನ ಪ್ರತಿಯೊಬ್ಬರಿಗೂ ಹರಡಲು ತಡವಾಗಲಿಲ್ಲ. ಇತರರನ್ನು ಹೀನಾಯ ಶಬ್ಡಗಳನ್ನು ಬಳಸಿ; ಒಬ್ಬರನ್ನು ಇನ್ನೊಬ್ಬರಲ್ಲಿ...
ಕಡಿಮೆ ಮಾತನಾಡಿ,ಮೆಲ್ಲಗೆ ಮಾತನಾಡಿ, ಯೋಚಿಸಿ ಮಾತನಾಡಿ, ಮಧುರವಾಗಿ ಮಾತನಾಡಿ, ಪ್ರೀತಿಯಿಂದ ಮಾತನಾಡಿ, ಗೌರವದಿಂದ ಮಾತನಾಡಿ. ಇದು ಮಾತಿನ ಬಗ್ಗೆ ಶ್ರೀ ಆರ್ಷ ಋಷಿಮುನಿಗಳು ನುಡಿದ ಬಿಂದುಗಳು. ಆದರೆ ಜನ ಸಾಮಾನ್ಯರು ಇದನ್ನು ಚಾ-ಚೂ ತಪ್ಪದೆ ಪಾಲಿಸುತ್ತಾರಾ?ಪಾಲಿಸುವುದಕ್ಕೆ ಆಗುತ್ತಾ? ಎಂದು ಕೇಳಿದರೆ ಇಲ್ಲ ಎನ್ನದೆ ವಿಧಿಯಿಲ್ಲ.ಕೆಲವು ವೇಳೆ...
ವೃದ್ಧಾಪ್ಯ ಬಂದಂತೆ ಸಹಜವಾಗಿ ಮನುಜನಿಗೆ ಮರೆವು ಬರುತ್ತದೆ. ಆದರೆ ಕೆಲವರಿಗೆ ಅಕಾಲದಲ್ಲೂ ಮಿತಿತಪ್ಪಿ ಮರೆವು ಬರುವುದನ್ನು ಕಾಣುತ್ತೇವೆ. ಒಂದು ಕಾರ್ಯಕ್ರಮದಲ್ಲಿ ಕೆಲವಾರು ಹೆಂಗಳೆಯರು ಸೇರಿದಲ್ಲಿ ಮರೆವಿನಬಗ್ಗೆ ತಮ್ಮ ತಮ್ಮ ಅನುಭವವನ್ನ ಹಂಚಿಕೊಳ್ತಾರೆ. ಕೆಲವರ ಅನುಭವ ಓದಿ— ನನಗೆ ಇತ್ತೀಚಿಗೆ ಕಂಡಾಬಟ್ಟೆ ಮರೆವು ನೋಡಿ!. .ಏನಾದ್ರೂ ಒಳಗಿಂದ ತರುವುದಕ್ಕೆಂದು...
ನಾನಾಗ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಕಾಲ. ವಿವಾಹವಾಗಿಲ್ಲ.ಅಡಿಗೆಯೋ ಮನೆಕೆಲಸವೋ ದನದಹಾಲು ಹಿಂಡುವ ಕಲಿಕೆಯೋ ಮಗಳಿಗೆ ಕಲಿಸುವ ಉಮೇದು ಅಮ್ಮನಿಗೆ. ತಿಂಗಳ ರಜೆಯ ಮೂರುದಿವಸ ಅಡಿಗೆಮಾಡುವುದಾಗಲೀ ಇತರರನ್ನು ಸ್ಪರ್ಶಿಸುವುದಾಗಲೀ ದೇವರಕೋಣೆ, ಅಡಿಗೆಕೋಣೆ ಪ್ರವೇಶಗಳೆಲ್ಲ ನಿಷಿದ್ಧದ ಕಾಲವಾಗಿತ್ತದು!!. ಅಮ್ಮ ರಜೆಯಾದರೆ ನಾನೇ ಅಡಿಗೆ ಮಾಡಬೇಕಿತ್ತು. ಹೀಗೊಂದು ದಿನ ಆ ಜವಾಬ್ದಾರಿ...
ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿದ್ಯಾ ಸಂಸ್ಥೆಯಾದ ಕುಂಬಳೆ ಸಮೀಪದ ಮುಜುಂಗಾವು ವಿದ್ಯಾಪೀಠದಲ್ಲಿ ಗ್ರಂಥಪಾಲಿಕೆಯಾಗಿ ನಾನು 19 ವರ್ಷದಿಂದ ಸೇವೆ ಮಾಡುತ್ತಾ ಇದ್ದೇನೆ. ನನಗೆ ಚಿಕ್ಕಂದಿನಿಂದಲೂ ಪುಸ್ತಕ ಪ್ರೀತಿ ಬಹಳ. ನಮ್ಮ ಗ್ರಂಥಭಂಡಾರದಲ್ಲಿ ಹನ್ನೆರಡೂವರೆ ಸಾವಿರ ಪುಸ್ತಕಗಳೂ ಒಂದಷ್ಟು ತಾಳೆಗರಿ ಗ್ರಂಥಗಳೂ ನನ್ನ ಮೇಲ್ತನಿಕೆಯಲ್ಲಿವೆ. ಹೆಚ್ಚಿನವೂ...
‘ಅಮ್ಮಾ.., ನೋಡು ಪೇಪರಲ್ಲಿ ಬಂದಿರೋ ಈ ನಟಿಯ ಫೊಟೋ’.ಬೆಳಗ್ಗಿನ ತಿಂಡಿ-ಕಾಫಿ ಗಡಿಬಿಡಿಯಲ್ಲಿದ್ದ ವಸುಮತಿಯ ಮುಖದ ಮುಂದೆ ಹನ್ನೆರಡು ವರ್ಷದ ಮಗಳು ವಸುಧಾ ಅಂದಿನ ಪೇಪರು ತಂದು ಒಡ್ಡಿದಾಗ ‘ಏನೇ ನಿನ್ನ ಧಾವಂತ?’ ಎಂದರು. ‘ಅಲ್ಲಮ್ಮಾ.., ನನ್ನ ಸ್ಕರ್ಟ ಮೊಣಕಾಲಿನ ವರೆಗೆ ಬಂದರೇ ನನ್ನನ್ನ ಕಣ್ಣರಳಿಸಿ ನೋಡ್ತಿಯಾ..,ಹಾಗಿದ್ದರೆ ಇದನ್ನ...
ಕೆಲವಾರು ವರ್ಷಗಳಹಿಂದೆ ಅಜ್ಜನಮನೆಯಲ್ಲಿ ಹಟ್ಟಿತುಂಬಾ ದನಗಳಿದ್ದ ಕಾಲ. ಎಲ್ಲದನಗಳಿಗೂ ಒಂದೊಂದು ಹೆಸರು. ಗೆಂದೆ, ಕುಸುಮ,ಕಾವೇರಿ, ಗೋದಾವರಿ, ಕಾರ್ಚಿ,ಹೀಗೆ. ಹಾಲು ಕರೆಯುವ ಹಸುಗಳನ್ನು ಮೂಡುಬದಿಯ ಸಣ್ಣ ಅಂಗಳದಲ್ಲಿ ಅವುಗಳಿಗೆ ನಿಯೋಜಿಸಿದ ಕಂಬದಲ್ಲಿ ಕಟ್ಟುವುದು.ಅವುಗಳಿಗೆ ಮಡ್ಡಿ ತಿನ್ನಿಸಿ , ಹಾಲು ಕರೆದು (ದನದಹಾಲು ಕರೆಯುವ ಕೆಲಸ, ಅಜ್ಜಿಗೆ) ಇತರ ದನಕರುಗಳಿಗೆ ಒಂದಿಷ್ಟು...
ನಿಮ್ಮ ಅನಿಸಿಕೆಗಳು…