Author: ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com
ನವಿಲಿನಂತ ಹುಡುಗಿ
ನವಿಲಿನ ಕನಸು ಕಂಡ ನಗರದ ಹುಡುಗಿ ಲಕ್ಕವಳ್ಳಿಯ ಅಜ್ಜಿ ಮನೆಯ ಹಿತ್ತಲಿನ ಕಾಡಿನಲಿ ಹೆಕ್ಕಿತಂದು ಪುಸ್ತಕದಲ್ಲಿಟ್ಟುಕೊಂಡ ನವಿಲುಗರಿಗೊಂದು ಮರಿ ಗರಿ ಬಂದಾಗ ನವಿಲೇ ಗರಿಗೆದರಿ ಕುಣಿಯಿತೆಂಬಂತೆ ಹಿರಿ-ಹಿರಿ ಹಿಗ್ಗಿದಳು ತಾನೇ ನವಿಲಾದಳು ಸಾವಿರ ಕಣ್ಣಾದಳು! – ಕು.ಸ.ಮಧುಸೂದನ್ ನಾಯರ್ +20
ಅವಳ ಪತ್ರಗಳು….ಮನುಷ್ಯ ಮತ್ತು ಪ್ರೀತಿ
ಅವಳ ಪತ್ರಗಳು ಮೊದಮೊದಲು ಅವಳ ಪತ್ರಗಳು ಸುದೀರ್ಘವಾಗಿರುತ್ತಿದ್ದವು ಅವುಗಳಲ್ಲಿ ಎಲ್ಲವೂ ಇರುತ್ತಿದ್ದವು ಸುಖ ದು:ಖ ನೋವು ನಲಿವು ಕೋಪತಾಪ ಉಕ್ಕುತ್ತಿದ್ದವು ಆಗಾ ಬಿಕ್ಕುತ್ತಿದ್ದವು! ಆಮೇಲಾಮೇಲೆ ಅವು ಪುಟ್ಟದಾಗತೊಡಗಿದವು ಸ್ವವಿವರಗಳು ಮರೆಯಾಗಿ ವಿಚಾರಣೆಗಳು ಶುರುವಾದವು ಕಾಲ ಸರಿದಂತೆ ಅವೂ ಇಲ್ಲವಾಗಿ ಬರೀ ಪ್ರಶ್ನೆಗಳು ಹರಿದಾಡತೊಡಗಿದವು ನಂತರದಲ್ಲಿ ಬರಿ ಆಜ್ಞೆಗಳು...
ಕವಿತೆ….ಕಲ್ಪನೆ
ಕಲ್ಪನೆ ಕಲ್ಪನೆ ಅನ್ನೋದು ಹಕ್ಕಿಯ ಹಾಗೆ ಒಂದೇ ಕಡೆ ನಿಲ್ಲಲ್ಲ ಬೆಳಿಗ್ಗೆ ಹಸಿರು ಕಾಡ ನೆತ್ತಿಯ ಮೇಲೆ ಹಾರಿ ಮದ್ಯಾಹ್ನ ಮರುಭೂಮಿಯಗಲಕ್ಕೆ ರೆಕ್ಕೆ ಬೀಸಿ ಸಂಜೆ ಸಾಗರ ದಾಟಿ ಮರಳುವುದು ಮನೆಗೆ ತನ್ನ ಗೂಡಿಗೆ ಎಷ್ಟೇ ಹಾರಿದರೂ ಆಕಾಶದಲ್ಲಿ ಮರಳಲೇ ಬೇಕು ಮಣ್ಣಿಗೆ ಅರಿವುಂಟು ಹಾರುವ ಹಕ್ಕಿಗೆ ಪಾಠವುಂಟು...
ನೆರಳು….ಪ್ರೀತಿ
ನೆರಳು ಮಳೆಯಾದನವನು ನಾ ಇಳೆಯಾದೆನು ಕಡಲಾದನವನು ನಾ ನದಿಯಾದೆನು ಬೆಟ್ಟದ ನೆಲ್ಲಿಯಾದನವನು ನಾ ಕಲ್ಲುಪ್ಪಾದೆನು ಕೊಳಲಾದನವನು ನಾನವನ ಕೊರಳಾದೆನು ಏನೇನೋ ಆದನವನು ನಾನವನ ನೆರಳಾಗಿ ಉಳಿದೆನು! ಪ್ರೀತಿ ಎಷ್ಟು ಹಾಡಿದರೂ ಮುಗಿಯದ ಹಾಡು ಎಷ್ಟು ನಡೆದರೂ ಸವೆಯದ ಜಾಡು ಎಷ್ಟು ಮೊಗೆದರೂ ಖಾಲಿಯಾಗದ ಕಡಲು ಎಷ್ಟು ಬರೆದರೂ...
ಮಾತು ಬೇಕಿಲ್ಲ!
ಮೌನವಾಗಿದ್ದ ಬುದ್ದ ಮಾತಾಡಲಿಲ್ಲ ನಾಲ್ಕು ಮನೆಗಳ ಬಗ್ಗೆ ಎಂಟುದಾರಿಗಳ ಬಗ್ಗೆ! ಕಾಯುತ್ತ ಕುಳಿತಿದ್ದರು ಶಿಷ್ಯರು ಮಳೆಗೆ ಕಾದ ಇಳೆಯ ಹಾಗೆ ಮುಗುಳ್ನಕ್ಕ ಬುದ್ದ ಎದ್ದ ಅರ್ಥವಾಯಿತೆ? ಎಲ್ಲರಿಗೂ ಅಂದ ಎಲ್ಲವೂ ಅಡಗಿರುವುದಿಲ್ಲಿ ಹೂವು ಅರಳುವ ಗಳಿಗೆಯಲ್ಲಿ ಚಣ ಮಾತ್ರದ ಸತ್ಯ ತಿಳಿಯಲು ಕಾಯುವಿಕೆ ನಿರಂತರವೆನ್ನುವ ಸತ್ಯದಲ್ಲಿ! ಮಾತಾಡದೇ...
ಧರ್ಮ ಸಂದೇಶ
1 ಕೊಳೆಯುವದು ಧರ್ಮ ಕೊಚ್ಚೆ ನೀರಂತೆ ನಿಂತಲ್ಲೇ ನಿಂತರೆ ಕರುಣೆಯೊಳು ಬೆಳೆಯುವುದು ಹರಿದರೆ ನದಿಯಂತೆ! 2 ಆ ಧರ್ಮದವನು ಹೇಳಿದ: ನಿನ್ನನ್ನು ಕೊಲ್ಲುವೆ ಈ ಧರ್ಮದವನು ಉತ್ತರಿಸಿದ ನಾನೂ ನಿನ್ನನ್ನು ಕೊಲ್ಲುವೆ ಕೊನೆಗಿಬ್ಬರೂ ಸೇರಿ ಧರ್ಮವನೇ ಕೊಂದರು! 3 ಒಂದು ಧರ್ಮ ಹೇಳಿತು ಸತ್ತವರನು...
ಅಸಾಧ್ಯ
ಸ್ಪ್ರಿಂಗನ್ನು ಅದುಮಿ ಹಿಡಿದಷ್ಟೂ ಅದರ ಪ್ರತಿರೋಧ ಹೆಚ್ಚುತ್ತದೆ ಸತ್ಯವನ್ನು ನೀವೆಷ್ಟೇ ಮುಚ್ಚಿಟ್ಟರೂ ಅಗ್ನಿಪರ್ವತದಂತದು ಸಿಡಿಯುತ್ತದೆ ಹೊರಚೆಲ್ಲುವ ಲಾವಾರಸ ನಿಮ್ಮನ್ನು ದಹಿಸುತ್ತದೆ ಇತಿಹಾಸ ಅರ್ಥಮಾಡಿಕೊಳ್ಳದ ಅವಿವೇಕಿಗಳು ನೀವು ಯಾವ ಪ್ರಭುತ್ವವೂ ಸೈನ್ಯವೂ ಬದುಕಿನೀ ಸಾಮಾನ್ಯ ಸತ್ಯವನ್ನು ಸಮಾಧಿ ಮಾಡಲು ಸಾದ್ಯವಿಲ್ಲ ಎಂಬುದನ್ನು ನೀವು ಅರಿತರೆ ಒಳ್ಳೆಯದು; ಸತ್ಯ: ಇಂದಲ್ಲಾ ನಾಳೆ...
ಸಾವು ಸಂಭ್ರಮವಾದಾಗ!.?
ಧರ್ಮಗಳ ನಡುವಿನ ಅಸಹನೆ, ಕೋಮುವಾದ ಹುಟ್ಟು ಹಾಕಿದ ಭಯೋತ್ಪಾದಕತೆ, ಮಾನವೀಯ ಮೌಲ್ಯಗಳನ್ನೆಲ್ಲ ಗುಡಿಸಿ ಗುಂಡಿಗೆ ಹಾಕಿರುವ ಜಾಗತೀಕರಣದೀ ಸಮಯದಲ್ಲಿ ವ್ಯಕ್ತಿಯೊಬ್ಬನ ಸಾವಿಗೆ ಮಿಡಿಯಬಲ್ಲ ಅಂತ:ಕರಣ ಮನುಷ್ಯನಲ್ಲಿನ್ನೂ ಉಳಿದಿರಬಹುದೆಂಬ ನನ್ನ ನಂಬಿಕೆ ಹುಸಿಯಾಗತೊಡಗಿದೆ. ಅದಕ್ಕೆ ಕಾರಣ ಮೊನ್ನಿನ ಕೆಲವು ಘಟನೆಗಳು: ಜಾಗತಿಕ ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಅಮೇರಿಕಾ ಸೇನೆಯಿಂದ ಹತನಾದ ನಂತರ ಆದೇಶದ ಜನತೆ ತಡರಾತ್ರಿಯ ವರೆಗು ಕುಡಿದು-ಕುಪ್ಪಳಿಸಿ ವಿಶ್ವವನ್ನೇ ಗೆದ್ದಂತೆ ವಿಜಯೋತ್ಸವ ಆಚರಿಸಿದರು. ಸರಿಸುಮಾರು ಅದೇ ಸಮಯದಲ್ಲಿ ಬೆಂಗಳೂರಿನ ಶ್ರೀರಾಮಸೇನೆಯ ಕೆಲ ಕಾರ್ಯಕರ್ತರು ಉದ್ದುದ್ದನೆಯ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ಗೌರವಾನ್ವಿತ ಮಠಾಧೀಶರೊಬ್ಬರು ತಮ್ಮ ಕೈಯಾರೆ ಭಕ್ತರಿಗೆ ಸಿಹಿ ಹಂಚಿ ,ಅವನ ಸಾವಿನ ಸಂತಸ ಹಂಚಿಕೊಂಡರು. ವ್ಯಕ್ತಿಯೊಬ್ಬನ ಸಾವನ್ನು (ಅವನು ಸಂತನಾಗಿರಲಿ-ಹಂತಕನಾಗಿರಲಿ, ನಕ್ಸಲನಾಗಿರಲಿ-ಪೋಲಿಸನಾಗಿರಲಿ,ರಾಜನಾಗಿರಲಿ-ರಾಜದ್ರೋಹಿಯಾಗಿರಲಿ) ಸಿಹಿ ತಿಂದು ಸಂಭ್ರಮಿಸುವುದಿದೆಯಲ್ಲ ಅದಕ್ಕಿಂತ ಅಮಾನವೀಯವಾದ್ದು ಬೇರೋಂದಿದೆ ಅಂತನ್ನಿಸುವುದಿಲ್ಲ. ಹಾಗಾದರೆ ಅಮಾಯಕರನ್ನು ಹತ್ಯೆಗೆಯ್ಯುತ್ತ, ಭಯೋತ್ಪಾದಕತೆಯ ಬೀಜಗಳನ್ನು ಭೂಮಿಯೆಲ್ಲೆಡೆ ಬಿತ್ತುತ್ತಿದ್ದ ಲಾಡೆನ್ನಿನ...
ನಿಮ್ಮ ಅನಿಸಿಕೆಗಳು…