ಕವಿತೆ….ಕಲ್ಪನೆ
ಕಲ್ಪನೆ
ಕಲ್ಪನೆ ಅನ್ನೋದು
ಹಕ್ಕಿಯ ಹಾಗೆ
ಒಂದೇ ಕಡೆ ನಿಲ್ಲಲ್ಲ
ಬೆಳಿಗ್ಗೆ ಹಸಿರು ಕಾಡ ನೆತ್ತಿಯ ಮೇಲೆ ಹಾರಿ
ಮದ್ಯಾಹ್ನ ಮರುಭೂಮಿಯಗಲಕ್ಕೆ ರೆಕ್ಕೆ ಬೀಸಿ
ಸಂಜೆ ಸಾಗರ ದಾಟಿ
ಮರಳುವುದು ಮನೆಗೆ
ತನ್ನ ಗೂಡಿಗೆ
ಎಷ್ಟೇ ಹಾರಿದರೂ ಆಕಾಶದಲ್ಲಿ
ಮರಳಲೇ ಬೇಕು ಮಣ್ಣಿಗೆ
ಅರಿವುಂಟು ಹಾರುವ ಹಕ್ಕಿಗೆ
ಪಾಠವುಂಟು
ಅಹಮ್ಮಿನಲಿ ಮೆರೆವ ಮನುಷ್ಯನಿಗೆ!
ಕವಿತೆ
ಕವಿತೆ ಅಂದರೆ
ಬರೀ ಶಬ್ದಗಳಲ್ಲ
ಅವುಗಳ ಅಂದವಾಗಿ ಜೋಡಿಸಿದ
ಕವಿಯ ಚಮತ್ಕಾರವೂ ಅಲ್ಲ
ಒಳಗಣ್ಣಿಗೆ ಕಾಣುವುದು
ಕಾಣದ್ದೆಲ್ಲ
ಒಳಗಿವಿಗೆ ಕೇಳುವುದು
ಕೇಳದ್ದೆಲ್ಲ
ಬರೆಯದೇ ಉಳಿದದ್ದು ಬರೆದಂತೆ
ಬರೆದದ್ದು
ಬರೆಯದೆ ಬಿಟ್ಟಂತೆ
ಅರ್ಥವಾಗದು ಅರ್ಥವಾದರು
ಒಮ್ಮೊಮ್ಮೆ
ಅನರ್ಥವಾಗುವುದು!
ಸರ್ ಇದನ್ನಾ ನಾನ ಎರಡ ಸಾರಿ ನಮ್ಮ ಮಾಜಿ ಪ್ರಧಾನಿ ಶ್ರೀ ದೇವೆಗೌಡರ ಮಾತಾಡೊ ಶೈಲಿಲಿ ಓದಿದೆ ಬಾಳ ಸೊಗಸೆನಿಸಿತು……
supper sir …