ಗಾಂಧಿ
by
ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com
·
June 30, 2014
ಕು.ಸ.ಮಧುಸೂದನ್ ನಾಯರ್
ವೃತ್ತಿಯಲಿ ವಕೀಲನಾಗಿ
ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ
ಮೋಹನದಾಸನೆಂಬ ಮುದುಕ
ಬಿಟ್ಟು ಹೋದ
ಚರಕಗಳಿಂದು ನಿಶ್ಯಬ್ದವಾಗಿವೆ
ನೂಲುವ ಕೈಗಳಿಗೆ ಕಾಯುತಿವೆ
ನೂಲಬೇಕಾದ ಕೈಗಳಲಿ ಕೆಲವು
ಕಂಪ್ಯೂಟರಿನ ಕೀಬೋರ್ಡಿನಲಿ ಕಳೆದು ಹೋಗಿವೆ
ಇನ್ನುಳಿದವು
ಕೋವಿ ಹಿಡಿದು ಕಾಡು ಸೇರಿವೆ!
– ಕು.ಸ.ಮಧುಸೂದನ್