ನೆರಳು….ಪ್ರೀತಿ
ನೆರಳು
ಮಳೆಯಾದನವನು
ನಾ ಇಳೆಯಾದೆನು
ಕಡಲಾದನವನು
ನಾ ನದಿಯಾದೆನು
ಬೆಟ್ಟದ ನೆಲ್ಲಿಯಾದನವನು
ನಾ ಕಲ್ಲುಪ್ಪಾದೆನು
ಕೊಳಲಾದನವನು
ನಾನವನ ಕೊರಳಾದೆನು
ಏನೇನೋ ಆದನವನು
ನಾನವನ ನೆರಳಾಗಿ ಉಳಿದೆನು!
ಪ್ರೀತಿ
ಎಷ್ಟು ಹಾಡಿದರೂ
ಮುಗಿಯದ ಹಾಡು
ಎಷ್ಟು ನಡೆದರೂ
ಸವೆಯದ ಜಾಡು
ಎಷ್ಟು ಮೊಗೆದರೂ
ಖಾಲಿಯಾಗದ ಕಡಲು
ಎಷ್ಟು ಬರೆದರೂ
ಮುಗಿಯದ ಕವಿತೆಗಳು!
.
– ಕು.ಸ.ಮಧುಸೂದನ್
.
ಎಷ್ಟು ಬರೆದರೂ ಮುಗಿಯದ ಕವಿತೆಗಳು…..ಈ ಸಾಲು ಇಷ್ಟವಾಯಿತು.