ಅಸಾಧ್ಯ
ಸ್ಪ್ರಿಂಗನ್ನು ಅದುಮಿ ಹಿಡಿದಷ್ಟೂ
ಅದರ ಪ್ರತಿರೋಧ ಹೆಚ್ಚುತ್ತದೆ
ಸತ್ಯವನ್ನು ನೀವೆಷ್ಟೇ ಮುಚ್ಚಿಟ್ಟರೂ
ಅಗ್ನಿಪರ್ವತದಂತದು ಸಿಡಿಯುತ್ತದೆ
ಹೊರಚೆಲ್ಲುವ ಲಾವಾರಸ ನಿಮ್ಮನ್ನು ದಹಿಸುತ್ತದೆ
ಇತಿಹಾಸ ಅರ್ಥಮಾಡಿಕೊಳ್ಳದ
ಅವಿವೇಕಿಗಳು ನೀವು
ಯಾವ ಪ್ರಭುತ್ವವೂ
ಸೈನ್ಯವೂ
ಬದುಕಿನೀ ಸಾಮಾನ್ಯ ಸತ್ಯವನ್ನು
ಸಮಾಧಿ ಮಾಡಲು ಸಾದ್ಯವಿಲ್ಲ
ಎಂಬುದನ್ನು ನೀವು ಅರಿತರೆ ಒಳ್ಳೆಯದು;
ಸತ್ಯ:
ಇಂದಲ್ಲಾ ನಾಳೆ ನಾವು ಸಿಡಿದೇಳುವುದು!
– ಕು.ಸ.ಮಧುಸೂದನ್ ನಾಯರ್