ನವಿಲಿನಂತ ಹುಡುಗಿ
ನವಿಲಿನ ಕನಸು ಕಂಡ
ನಗರದ ಹುಡುಗಿ
ಲಕ್ಕವಳ್ಳಿಯ ಅಜ್ಜಿ ಮನೆಯ
ಹಿತ್ತಲಿನ ಕಾಡಿನಲಿ
ಹೆಕ್ಕಿತಂದು
ಪುಸ್ತಕದಲ್ಲಿಟ್ಟುಕೊಂಡ
ನವಿಲುಗರಿಗೊಂದು
ಮರಿ
ಗರಿ
ಬಂದಾಗ
ನವಿಲೇ
ಗರಿಗೆದರಿ
ಕುಣಿಯಿತೆಂಬಂತೆ
ಹಿರಿ-ಹಿರಿ
ಹಿಗ್ಗಿದಳು
ತಾನೇ
ನವಿಲಾದಳು
ಸಾವಿರ ಕಣ್ಣಾದಳು!
– ಕು.ಸ.ಮಧುಸೂದನ್ ನಾಯರ್
ವಾಹ್ ಸುಂದರ