Author: ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com
ಹೋಗುತ್ತೇನೆ ನಾನು ನೋವುಗಳ ನುಂಗಲಾಗದೆ ಬೆನ್ನಿಗಿರಿವ ಚೂರಿಗಳ ತಡೆಯಲಾಗದೆ! ಹೋಗುತ್ತೇನೆ ನಾನು ದ್ವೇಷದಲಿ ವಿಶ್ವಾಸವಿಡಲಾಗದೆ ಪ್ರೀತಿಕರುಣೆಗಳ ತೊರೆಯಲಾಗದೆ! ಕನಸುಗಳಿದ್ದದದ್ದು ನಿಜ ರೆಕ್ಕೆಗಳೂ ಇದ್ದವು ಹಾರಲು ಆಕಾಶವೂ ಇತ್ತು ಅವಕಾಶವೂ ಇತ್ತು ನೆಲದೊಳಗೆ ಹೂತು ಹೋದಕಾಲು ಸ್ಥಾವರದ ಬಂಡೆಯನ್ನಾಗಿಸಿ ನಿಂತಲ್ಲೇ ಬೇರು ಬಿಟ್ಟು ಬಿಟ್ಟೆ! ಈಗೆಲ್ಲಿ ನೋಡಿದರೂ ಅದೇ...
ಮನುಷ್ಯ ಬದುಕುವುದು ಸಾದ್ಯವಾಗಿದ್ದಿದ್ದರೆ ಕಡಲ ನಡುವಿನ ನಡುಗಡ್ಡೆಯ ಹಾಗೆ! ಗುರಿಯನರಸುವ ಅಗತ್ಯವಿರುತ್ತಿರಲಿಲ್ಲ ದಾರಿಗಳ ಹುಡುಕಬೇಕಿರಲಿಲ್ಲ ಬರುವವರಿಗಾಗಿ ಕನಸುತ್ತ ಬಾರದವರಿಗಾಗಿ ದು:ಖಿಸುತ್ತ ಇರುಳು ನರಳಬೇಕಿರಲಿಲ್ಲ! ಮಂದಿರ ಮಸೀಧಿ ಇಗರ್ಜಿಗಳ ಕಟ್ಟುತ್ತಿರಲಿಲ್ಲ ಅಡ್ಡಬಿದ್ದು ಪೂಜಿಸಿ ಪ್ರಾರ್ಥಿಸಿ ಹಗುರವಾಗುವ ಅನಿವಾರ್ಯತೆಯಿರುತ್ತಿರಲಿಲ್ಲ ಮನುಷ್ಯ ನಡುಗಡ್ಡೆಯಾಗಿದ್ದರೆ! – ಕು.ಸ.ಮಧುಸೂದನ +9
ಕೋರ್ಟಿಗೆ ಸಾಕ್ಷಿ ಬೇಕು ಆತ್ಮಸಾಕ್ಷಿಯಲ್ಲ ಎದುರು ತಂದಿಟ್ಟ ಅಥವಾ ಬಂದುನಿಂತ ಸಾಕ್ಷಿಗಳ ಪರಾಮರ್ಶಿಸುವ ನ್ಯಾಯಾಧೀಶರುಗಳಿಗೆ ಮಾತ್ರ ಆತ್ಮಸಾಕ್ಷಿಯ ಅಗತ್ಯವಿರುತ್ತೆ! – ಕು.ಸ.ಮಧುಸೂದನ +8
ಕೆತ್ತದೇ ಉಳಿದ ಕಲ್ಲು ಬಯಲಲೇ ಬಿದ್ದು ಬಿಸಿಲಲಿ ಬೆಂದು ಇನ್ನಷ್ಟು ಕಪ್ಪಾಯಿತು ಕೂತಲ್ಲೇ ಮುಪ್ಪಾಯಿತು ಕೆತ್ತಿಸಿಕೊಂಡು ಶಿಲೆಯಾದ ಕಲ್ಲು ಗರ್ಭಗುಡಿಯ ಮೂರುತಿಯಾಗಿ ಕೀರುತಿ ಗಳಿಸಿ ಆರತಿ ಅಭಿಷೇಕ ದೂಪದೀಪಗಳ ಹೊಗೆಯಲ್ಲಿ ಮೈಮರೆಯಿತು ಮೆರೆಯಿತು ಸ್ಥಾವರಕೆ ಸಾಕ್ಷಿಯಾಯಿತು! – ಕು.ಸ.ಮಧುಸೂದನ್ ರಂಗೇನಹಳ್ಳಿ +8
ಒಂದು ನಗುವಿಗಾಗಿ ವರುಷಗಟ್ಟಲೆ ಅತ್ತಿದ್ದಿದೆ! ಒಂದು ಗೆಲುವಿಗಾಗಿ ಸಾವಿರ ಸೋಲುಗಳ ಅಪ್ಪಿದ್ದಿದೆ! ಒಂದು ಗುಲಗಂಜಿ ಮಾನಕ್ಕಾಗಿ ಆನೆಯಷ್ಟು ಅವಮಾನ ಸಹಿಸಿದ್ದಿದೆ! ಪ್ರತಿ ಕವಿತೆ ಬರೆಯುವಾಗಲೂ ನನ್ನ ನಾನು ಕೊಂದು ಕೊಂಡಿದ್ದಿದೆ! – ಕು.ಸ.ಮಧುಸೂದನ್ ರಂಗೇನಹಳ್ಳಿ +11
ನಾನು ಪ್ರೀತಿಸುವುದ ಮರೆಯುತ್ತಿದ್ದೇನೆಯೇ? ಅಥವಾ ದ್ವೇಷಿಸುವುದ ಕಲಿಯುತ್ತಿದ್ದೇನೆಯೇ? ನಡೆದ ಹಾದಿಗುಂಟ ಎದುರಾದ ಮುಳ್ಳುಗಳ ಪಕ್ಕಕ್ಕೆ ಸರಿಸಿ ಹಿಂದಿನವರಿಗವು ಚುಚ್ಚದಂತೆ ಎಚ್ಚರಿಕೆ ವಹಿಸಿ ದೂರಕ್ಕೆ ಎಸೆದು ನಡೆಯುತ್ತಿದ್ದೆ ಇಲ್ಲಿಯವರೆಗೂ! ನಾನಾಗ ಮನುಷ್ಯರ ಪ್ರೀತಿಸುತ್ತಿದ್ದೆ! ಆದರೆ ಇದೀಗ ಹಾಗೆ ದೂರಕ್ಕೆಸೆದ ಮುಳ್ಳುಗಳ ಮತ್ಯಾರೊ ತಂದು ದಾರಿಗಟ್ಟ ಹಾಕಿ ಪ್ರಚೋದಿಸಿದಾಗ...
ನನ್ನ ನಾಡಿನ ನೆಲದುದ್ದಕ್ಕೂ ನದಿಗಳ ಹರಿಸಿದೆ ಅವುಗಳ ಅಕ್ಕಪಕ್ಕದಲಿ ಹಸಿರಿನ ವನಸಿರಿಯನಿರಿಸಿದೆ ಹೆಸರೇ ತಿಳಿಯದ ಲಕ್ಷೆಪಲಕ್ಷ ಹೂಗಳ ಅರಳಿಸಿದೆ ಅವುಗಳ ಸುತ್ತಲೆಂದು ಬಣ್ಣಗಳ ಬಳಿದ ಚಿಟ್ಟೆಗಳ ಹುಟ್ಟಿಸಿ ಓಡಬಿಟ್ಟೆ ಅಷ್ಟಗಲದ ಭೂಮಿಯ ಚಾವಣಿಗೆ ನೀಲಿಯ ಬಳಿದು ಅಲ್ಲಿ ಹಾರಲೆಂದು ಹಕ್ಕಿಗಳ ಕಳಿಸಿಕೊಟ್ಟೆ! ವ್ಯವಧಾನವೆಲ್ಲಿತ್ತು? ಸವಿಯುವ ಸಮಾದಾನವೆಲ್ಲಿತ್ತು? ನಿನ್ನೊಲುಮೆಯ...
1 ಯುದ್ದವಿರಾಮದಲಿ ನೆನಪಾಗದ ಸೈನಿಕನಿಗೆ ಸತ್ತಮೇಲೆ ಹುತಾತ್ಮಪಟ್ಟ ಲಕ್ಷಾಂತರ ಜನರ ಅಶ್ರುತರ್ಪಣ! 2 ಬೇಸಿಗೆ ಹಣ್ಣಗಳ ಕಾಲ ಜೊತೆಗವನ ಗೆಳೆಯ ಕಾಲರಾ! 3 ಮುಗಿಯುತ್ತಿರುವ ಇವತ್ತಿಗೆ ನಿನ್ನೆಯ ನೆನಪಿದೆ ನಾಳೆಯ ಕನಸಿದೆ ವಿಷಾದದ ಜೊತೆ ಕುತೂಹಲವಿದೆ! 4 ಮುಚ್ಚಿದ ಮನೆಯ...
1 ಹಸಿದವರಿಗೆ ಸಿಕ್ಕ ರೊಟ್ಟಿಯೇ ತುಂಬು ಚಂದ್ರ ಬೆಳದಿಂಗಳೆಂದರೆ ಬೇಸರ! 2 ಮರದಿಂದುರುವ ಹಣ್ಣೆಲೆ ಗಮನಿಸು ಅರ್ಥವಾಗುವುದು ಒಂಟಿತನ! 3 ದೇವಸ್ಥಾನದ ಗಂಟೆಯ ಸದ್ದು ಮೀರಿ ಕೇಳಿಸುತ್ತಿದೆ ಹೊಲದೊಳಗೆ ಕಳೆ ಕೀಳುತ್ತಿರುವ ಹೆಂಗಸರ ಹಾಡು! 4 ಸಿಕ್ಕಬಹುದೇನೊ ಅನಾಥ ಹೆಣಕೂ ಹೆಗಲು ಕಷ್ಟ ಸಿಗುವುದು ಒಂಟಿತನಕೆ ಊರುಗೋಲು!...
ಮನುಷ್ಯ ಪ್ರೀತಿಸುತ್ತಾನೆ ದ್ವೇಷಿಸುತ್ತಾನೆ ವ್ಯಾಮೋಹಗಳ ದಳ್ಳುರಿಯಲ್ಲಿ ದಹಿಸಿಕೊಳ್ಳುತ್ತಾನೆ ಪ್ರೀತಿಸುವಾಗ ಕವಿತೆ ಬರೆದು ದ್ವೇಷಿಸುವಾಗ ಕತ್ತಿ ಮಸೆದು ಅವುಡುಗಚ್ಚಿ ಯುದ್ದಕ್ಕೆ ನಿಲ್ಲುತ್ತಾನೆ ಅವಳಿಗಾಗಿ ಕವಿತೆ ಬರೆದವನು ಅವಳನ್ನು ಕತ್ತಿಯಲಿ ಇರಿಯಲೂ ಬಲ್ಲ ಕೊಲ್ಲಲು ಕೋವಿ ಹಿಡಿದ ಕೈಗಳಿಂದಲೇ ಅವಳ ಗಲ್ಲವನೊಲುಮೆಯಲ್ಲಿ ನೇವರಿಸಬಲ್ಲ ಪಾಪದ ಪಾಪಿ ಮನುಷ್ಯ ಪ್ರೀತಿಸುತ್ತಾನೆ ದ್ವೇಷಿಸುತ್ತಾನೆ...
ನಿಮ್ಮ ಅನಿಸಿಕೆಗಳು…