ಮನುಷ್ಯ ನಡುಗಡ್ಡೆಯಾಗಿದ್ದರೆ
ಮನುಷ್ಯ ಬದುಕುವುದು ಸಾದ್ಯವಾಗಿದ್ದಿದ್ದರೆ
ಕಡಲ ನಡುವಿನ
ನಡುಗಡ್ಡೆಯ ಹಾಗೆ!
ಗುರಿಯನರಸುವ ಅಗತ್ಯವಿರುತ್ತಿರಲಿಲ್ಲ
ದಾರಿಗಳ ಹುಡುಕಬೇಕಿರಲಿಲ್ಲ
ಬರುವವರಿಗಾಗಿ ಕನಸುತ್ತ
ಬಾರದವರಿಗಾಗಿ ದು:ಖಿಸುತ್ತ
ಇರುಳು ನರಳಬೇಕಿರಲಿಲ್ಲ!
ಮಂದಿರ ಮಸೀಧಿ ಇಗರ್ಜಿಗಳ
ಕಟ್ಟುತ್ತಿರಲಿಲ್ಲ
ಅಡ್ಡಬಿದ್ದು ಪೂಜಿಸಿ ಪ್ರಾರ್ಥಿಸಿ
ಹಗುರವಾಗುವ ಅನಿವಾರ್ಯತೆಯಿರುತ್ತಿರಲಿಲ್ಲ
ಮನುಷ್ಯ ನಡುಗಡ್ಡೆಯಾಗಿದ್ದರೆ!
– ಕು.ಸ.ಮಧುಸೂದನ
ನಡುಗಡ್ಡೆ ಅಂದರೇನು?