Author: Smitha, smitha.hasiru@gmail.com
ಮಕ್ಕಳಿಗೆ ಬೇಸಿಗೆ ರಜೆ ಸಿಕ್ಕಿ ಅವರಿಗೀಗ ಬಿಡುವಿನ ಕಾಲ. ಹೊತ್ತಾರೆ ಗಡಬಡಿಸಿ ಎದ್ದು ಹಲ್ಲುಜ್ಜುವ ಶಾಸ್ತ್ರ ಮುಗಿಸಿ ತೂಕಡಿಸುತ್ತಾ ಓದಲಿಕ್ಕೆ ಕೂರಬೇಕಿಲ್ಲ.ಲಗುಬಗೆಯಿ೦ದ ತಿ೦ಡಿ ತಿ೦ದು ಶಾಲೆಗೆ ಹೊರಡುವ ತರಾತುರಿಯಿಲ್ಲ.ಬೆಳಗ್ಗೆ ಏಳೋಕು ಅವರದೇ ಸಮಯ ,ಮಲಗೋಕು ಅವರದೇ ಸಮಯ.ಯಾರ ಮುಲಾಜಿಯಾಗಲಿ ಹೆದರಿಕೆಯಾಗಲಿ ಅವರಿಗಿಲ್ಲ.ಇಷ್ಟು ದಿನ ಟ್ಯೂಷನ್, ಓದು ,...
ಈ ಕವಿತೆಗೂ ನಮಗೂ ಅದೆಂಥಾ ಅನುಬಂಧ ಅಂತೀರಿ..?ಕವಿತೆಯನ್ನ ಇಷ್ಟ ಪಡದವರೇ ಇಲ್ಲವೆನ್ನಬಹುದು.ಕವಿತೆಯೆಂದರೆ ಎಲ್ಲರಿಗೂ ಎಲ್ಲಿಲ್ಲದ ಅಕ್ಕರೆ.ಎಲ್ಲಾ ಬಿಡಿ,ಸಾಹಿತ್ಯದ ಗಂಧ ಗಾಳಿಯೇ ಇಲ್ಲದವರ ಮುಂದೆಯೂ ಕವಿತೆ ಓದಿ ನೋಡಿ.ಅವರಿಗೆ ಅರ್ಥವಾಗದಿದ್ದರೂ ಮಿಕಿ ಮಿಕಿ ನೋಡುತ್ತಾ ಕೇಳುವ ವ್ಯವಧಾನವಿದೆ.ದೊಡ್ಡ ದೊಡ್ಡ ಗಂಭೀರ ಲೇಖನ,ಪುಟಗಟ್ಟಲೆ ಪ್ರಬಂಧ,ಒಂದು ಪುಸ್ತಕಕ್ಕಾಗುವಷ್ಟು ನಾವು ಕಥೆ ಬರೆದರೂ...
ಮೊನ್ನೆ ಕೈ ಕೊಟ್ಟ ಕರೆಂಟು ಮೂರು ದಿನ ಆದರೂ ನಾಪತ್ತೆಯಾದಾಗಲೇ ಅದರ ಬಿಸಿ ತಟ್ಟಿದ್ದು.ನಲ್ಲಿ ತಿರುಗಿಸಿದರೆ ಸಾಕು ಭರ್ರೋ ಎಂದು ಪವಾಡದಂತೆ ಸುರಿಯುತ್ತಿದ್ದ ನೀರು,ಇದೀಗ ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣ ಹನಿ ಉದುರಿಸುತ್ತಾ ಮೆಲ್ಲನೆ ಅಳೋಕೆ ಶುರು ಮಾಡಿದಾಗಲೇ ಕೊಂಚ ಭಯ ಹುಟ್ಟಿದ್ದು.ಇನ್ನೇನು ಮಾಡುವುದು?.ಯಾವುದೋ ಒಂದು ಬಲವಾದ ನಂಬಿಕೆ.ಮನೆಯಲ್ಲಿ...
ಬರಿಗಾಲಲ್ಲಿ ನಡೆಯುವ ಕಾಲದ ಅಧ್ಯಾಯ ಅದು ಯಾವಾಗಲೋ ಸಂದು ಓಬಿರಾಯನ ಕಾಲವಾಯಿತೋ ಏನೋ. ಈಗ ಪಾದಕ್ಕೊಂದು ಪಾದುಕೆ ಬೇಕೇ ಬೇಕು. ಇನ್ನೂ ಸರಿಯಾಗಿ ನಡೆಯಲು ಬಾರದ ಎಳೆ ಪಾಪುವಿನ ಗುಲಾಬಿ ಬಣ್ಣದ ಪಾದಕ್ಕೆ ಕೂಡ ಗೊಂಬೆ ಗೊಂಬೆ ಚಿತ್ರದ ಪಾದುಕೆ ತೊಡಿಸಿ ಸಂಭ್ರಮಿಸುತ್ತಾರೆ.ಹಾಗಾಗಿ ಪಾದುಕೆಯೊಂದು ಪಾದದ ಅನಿವಾರ್ಯತೆಯೋ...
ಹಿಮ ನದಿಯ ಪಿಸುಮಾತುಗಳ ಮೂಲಕ ಕಾವ್ಯ ಲೋಕಕ್ಕೆ ದಾಖಲಾಗುತ್ತಿರುವ ಭರವಸೆಯ ಕವಯತ್ರಿ ಕೊಡಗಿನ ಕುಶಾಲನಗರದ ಸುನೀತಾ ಲೋಕೇಶ್, ತಮ್ಮ ಅಂತರಂಗದ ಅನಿಸಿಕೆಗಳನ್ನು ಇಲ್ಲಿ ಕಾವ್ಯ ಕುಸುಮವಾಗಿಸಿದ್ದಾರೆ.ಸ್ವಾತಿ ಮಳೆಯ ಯಾವುದೋ ಒಂದು ಹನಿಬಿಂದು ಮುತ್ತಾಗುವಂತೆ ಪ್ರೇಮ ಪತ್ರ ಬರೆದ ಹನಿಯೊಂದು ಸೇರಬೇಕಾದ ಒಲವ ಹೃದಯವನ್ನು ಹೊಕ್ಕು ಜೀವ...
ಮನುಷ್ಯನ ಬದುಕಿಗೆ ಪೂರಕವಾದದ್ದು ಕೃಷಿ ಮೂಲ ಎಂಬುದನ್ನು ನಾವು ಯಾರೂ ಅಲ್ಲಗಳೆಯುವ ಹಾಗಿಲ್ಲ.ಆದರೂ ಕೃಷಿ ಎಂದರೆ ಎಲ್ಲರಿಗೂ ನಗಣ್ಯವೇ. ಎಲ್ಲರೂ ಸಾಪ್ಟ್‌ವೇರ್,ಡಾಕ್ಟರ್..ಹೀಗೇ ಉನ್ನತ ಉದ್ಯೋಗಗಳ ಬೆನ್ನು ಹತ್ತಿ, ಆ ಪದವಿ ಪಡೆಯಲೋಸುಗ ಜೀವನವನ್ನಿಡೀ ಅದಕ್ಕೆ ಮುಡಿಪಾಗಿಟ್ಟುತೇಯುತ್ತಿರುವಾಗ,ಎಷ್ಟುದುಡಿದರೂ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ.ಬಟ್ಟೆಗಿದ್ದರೆ ಹೊಟ್ಟೆಗಿಲ್ಲದಂತಹ ಪರಿಸ್ಥಿತಿಯಲ್ಲಿ ಯಾರೂತಮ್ಮ ಮಕ್ಕಳನ್ನು ಮಣ್ಣಿನ ಮಗನನ್ನಾಗಿ...
ಪ್ರತಿ ನಿತ್ಯದ ದಿನದ ಕಾಯಕದಲ್ಲಿ ನಿದ್ರಿಸುವುದೂ ಒಂದು. ಈ ನಿದ್ರೆಯೆಂಬುದು ಬದುಕಿನ ನಿಶ್ಚಿಂತೆಯ ಕ್ಷಣಗಳನ್ನು ಒದಗಿಸಿಕೊಡಬಲ್ಲಂತಹ ಅದ್ಭುತ ತಾಣ.ನಿದ್ರಾದೇವಿಯ ಆಲಿಂಗನದಲ್ಲಿರುವಂತಹ ಒಂದು ಸುಮಧುರ ಸಮಯದಲ್ಲಿ ಕನಸುಗಳು ಬೀಳುತ್ತವೆಯೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಕಾಣದ ಕನಸುಗಳೇ ಕೈಗೆಟುಕದ್ದನ್ನು,ದಕ್ಕದ್ದನ್ನು ಎಲ್ಲವನ್ನೂ ಪೂರೈಸಿಕೊಂಡು ,ಬದುಕಿನ ಸಮಸ್ತ ಖುಷಿಗಳನ್ನು ಆ ಸಮಯದಲ್ಲಿ...
ಬದುಕು ಅನಿರೀಕ್ಷಿತ ಮತ್ತು ಆಕಸ್ಮಿಕಗಳ ಮೊತ್ತ ಅಂತ ತಿಳಿದವರು ಹೇಳುತ್ತಾರೆ.ಅಂತೆಯೇ ಈ ಮಾತು ಅಕ್ಷರಶ: ಸತ್ಯವೂ ಕೂಡ.ಬದುಕಿನ ಹಾದಿಯಲ್ಲಿ ಗಕ್ಕನೆ ತಿರುವುಗಳು ಬಂದೆರಗಿ ನಿಲ್ಲುತ್ತವೆ.ಕವಲೊಡೆದು ಕೆಲವೊಮ್ಮೆ ಭೀತಿ ಹುಟ್ಟಿಸುತ್ತದೆ. ನಡೆದಷ್ಟೂ ಮುಗಿಯದ ಹಾದಿಯ ಯಾವುದೋ ಒಂದು ತಿರುವಿನಲ್ಲಿ ಬದುಕು ಮುಗಿದೇ ಹೋಗುತ್ತದೆ ಎಂಬುದು ಮಾತ್ರ ಯಾವ ಕಾಲಕ್ಕೂ...
ಅಯ್ಯೋ..! ಇದೆಂಥಾ ಝಡಿ ಮಳೆಯಪ್ಪ..ಹೊರಗೆ ಕಾಲಿಡಲು ಬಿಡೋದಿಲ್ಲವಲ್ಲ,ಇನ್ನು ಊರು ಪೂರ ಸುತ್ತಾಡೋದೇನು ಬಂತು ಅಂತ ಒಳಗೊಳಗೆ ಮರುಗುತ್ತಾ,ಮಳೆಯನ್ನು ಶಪಿಸಿಕೊಳ್ಳುತ್ತಾ..ಹೊರಗೆ ಹಜಾರದಲ್ಲಿ ಕುಳಿತು ಮಾಡಿನಿಂದ ಏಕಪ್ರಕಾರವಾಗಿ ಸುರಿವ ಮಳೆಯನ್ನಷ್ಟೇ ದಿಟ್ಟಿಸುತ್ತಿದ್ದೀರಾ..?ಹಾಗಿದ್ದರೆ ನಮ್ಮೂರು ಮಡಿಕೇರಿಗೆ ಬನ್ನಿ.ಇಲ್ಲಿ ಮಳೆ ನಿಮಗಾಗಿಯೇ ಸುರಿಯುತ್ತಿದೆ ನೋಡಿ.ನೀವು ಯಾವ ಊರಿನವರೇ ಸರಿ,ನಿಮಗೆ ನಮ್ಮೂರ ಮಳೆ ಯಾವ...
ಸುಡು ಸುಡು ರಣ ಬಿಸಿಲಿನ ಹಾಹಾಕಾರಕ್ಕೋ,ಅಹಂಕಾರಕ್ಕೋ ಸೆಡ್ಡು ಹೊಡೆದಂತೆ ಈಗ ಭೋರೆಂದು ಸುರಿಯುತ್ತಿದೆ ಮಳೆ.ಇಷ್ಟು ದಿನ ಉರಿ ಬಿಸಿಲಲ್ಲಿ ಕುದ್ದು,ಬೆಂದು ,ಆರಿ ಬಸವಳಿದ ಬಿಸಿಲಿನ ಝಳದ ತಾರಕಕ್ಕೇರಿದ ತಾಪದ ಇನಿತು ಕುರುಹೇ ಇಲ್ಲದಂತೆ ಮತ್ತೆ ಮಳೆ ಹೊಯ್ಯುತ್ತಿದೆ.ಆ ವೈಶಾಖದ ಸುಡು ಧಗೆಯಲ್ಲಿ ಮತ್ತಷ್ಟು ಪ್ರಖರವಾಗಿ ಜ್ವಲಿಸುತ್ತಾ ನಿಂತ...
ನಿಮ್ಮ ಅನಿಸಿಕೆಗಳು…