ಬೆಳಕು-ಬಳ್ಳಿ

ನೀರಿಗಾಗಿ ಕಾಯಬೇಕು

Share Button

ನೀರು ನೀರೆಂದು
ನಲ್ಲಿಯ ಮುಂದೆ ಕೂತರೆ
ನೀರು ಬಂದೀತೇ ..?
ಇಲ್ಲ , ಬರಲಿಲ್ಲ
ಬದಲು ಬಂದೀತು
ಒಂದಿಷ್ಟು ಕಣ್ಣೀರು !

ಎಷ್ಟು ದಿನ ಕಾಯಬಹುದು
ನೀರ ಹನಿಗಾಗಿ..?
ಬಾಯಾರಿ ಗಂಟಲು ಒಣಗುತಿದೆ
ಕಣ್ಣೀರು ಬತ್ತಿದೆ
ಒಡಲೊಳಗೆ ಹಸಿವಿನ
ಲಾವಾರಸ ತಳಮಳಿಸುತ್ತಿದೆ
ಹಿಮ ಕರಗಿ ನೀರಾಗುವುದನ್ನು…..
ನಮ್ಮ ಬಿಸಿಯುಸಿರು
ಕರಗಿ ತಂಪಾಗುವುದನ್ನು…….

ಆದರೂ ಕಾಯಬೇಕು
ಚಾತಕ ಪಕ್ಷಿಯಂತೆ
ಆಕಾಶದತ್ತ ನೇರದೃಷ್ಟಿ ಇಟ್ಟು
ಬಾರದ ನೀರಿಗಾಗಿ
ಕಾಯುತ್ತಲೇ ಇರಬೇಕು
ನೀರ ಹನಿ ಇಲ್ಲದಿದ್ದರೂ ಸರಿ ,
ಕನಸಿನಲ್ಲಿ ತೇಲಾಡುವ ನಾವು
ನೋವಿನ ನಿಟ್ಟುಸಿರ
ಹೃದಯದ ’ಫ್ರಿಜ್ ’ ನಲ್ಲಿ ಬೆಚ್ಚಗಿರಿಸಬೇಕು
ಯಾಕೆಂದರೆ ,
ನಾವು ಈ ಭೂಮಿಯಲ್ಲಿ
ಬದುಕಬೇಕಾದವರು ಅದಕ್ಕೇ ..!
.
-ಪ್ರಭಾಕರ ತಾಮ್ರಗೌರಿ ಗೋಕರ್ಣ
.

10 Comments on “ನೀರಿಗಾಗಿ ಕಾಯಬೇಕು

    1. ಥ್ಯಾಂಕ್ಯೂ ಮೇಡಂ

    1. ತುಂಬಾ ಧನ್ಯವಾದಗಳು ಸರ್

  1. ಬಾಯಾರಿದವನಿಗೆ ನೀರಿನ ಅಗತ್ಯತೆಯ ಭಾವಪೂರ್ಣ ಕವನವು, ಭುವಿಯ ಉಳಿವಿನ ಬಗ್ಗೆಯೂ ಕಳಕಳಿ ವ್ಯಕ್ತಪಡಿಸಿದ ಪರಿ ಸೊಗಸಾಗಿದೆ.

    1. ತುಂಬಾ ಧನ್ಯವಾದಗಳು ಶಂಕರಿ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *