ಈಗೇನೂ ಉಳಿದಿಲ್ಲ ………
ಮಟ ಮಟ ಮಧ್ಯಾಹ್ನ
ಕಾದ ಕಡಲ ತೀರದಿ
ಮಳಲ ಹಾಸಿನ ಮೇಲೆ
ಮೂಡಿದ ಹೆಜ್ಜೆ ಗುರುತುಗಳು
ಅಲೆಯ ರಭಸಕ್ಕೆ ಅಳಿಸಿಹೋಯಿತು
ಬೆಸ್ತರ ಬಲೆಯ ಜಾಲದ
ಕುಣಿಕೆಗೆ ಸಿಲುಕಿ
ಜೀವ ತೆತ್ತ
ಅಮಾಯಕ ಮೀನಿನ ಹಾಗೆ !!
.
ಪಶ್ಚಿಮ ದಿಗಂತದಲ್ಲಿ
ಇಂಚಿಂಚಾಗಿ ಕರಗುವ
ಕೆಂಪು ಸೂರ್ಯನ ಮುಸ್ಸಂಜೆ ( ಇಳಿಸಂಜೆ )
ಎದೆ ತೆರೆದು ಪಿಸುಗುಟ್ಟುವ
ಮುಗ್ಧ ಹೃದಯಗಳು
ಕತ್ತಲು ಕಳೆಯುವ ಹೊತ್ತಿಗೆ
ಸುಳಿಗೆ ಸಿಕ್ಕು
ಇಟ್ಟ ಹೆಜ್ಜೆಯ ಹುಡುಕುತ್ತಾ
ಮೆಲ್ಲನೆದ್ದವರು ……
ಸುಂಕವಿಲ್ಲದೆ ಬಂದ ದಾರಿಗೆ
ಮರಳುವ ಕಡಲ ಅಬ್ಬರದಲೆಗಳು
ಈಗ ಶಾಂತ !
ಅಳಿಸಿ ಹೋದ ಚಿತ್ರದಂತೆ
ಈಗೇನೂ ಉಳಿದಿಲ್ಲ …….
ಭಗ್ನ ಪ್ರೇಮಿಗಳ ಹಾಗೆ !
.
-ಪ್ರಭಾಕರ ತಾಮ್ರಗೌರಿ ಗೋಕರ್ಣ
ಚೆನ್ನಾಗಿದೆ ಕವಿತೆ
ಅರ್ಥಪೂರ್ಣವಾಗಿದೆ ಕವನ.ಧನ್ಯವಾದಗಳು
ಉಳಿದುದುದು ನೆನಪು ಮಾತ್ರ…ಮತ್ತೇನೂ ಉಳಿದಿಲ್ಲ. ಚಂದದ ಭಾವಪೂರ್ಣ ಕವನ.