Author: K Ramesh

2

ಶಂಖದ ಮಹಿಮೆ

Share Button

ಶಂಖ ಪುರಾತನ ಕಾಲದಿಂದಲೂ ಪ್ರಸಿದ್ಧಿ. ಹಲವಾರು ಸ್ತೋತ್ರಗಳಲ್ಲಿ ಇದು ಉಲ್ಲೇಖವಾಗಿದೆ. ಮಹಾಲಕ್ಷ್ಮಿಸ್ತೋತ್ರದಲ್ಲಿ ‘ಶಂಖಚಕ್ರಗದಾಹಸ್ತ ಮಹಾಲಕ್ಷ್ಮಿ’ ಎಂದೂ ‘ಚತುರ್ಭುಜಾತ್ತಚಕ್ರಾನಿ ಗದಾ ಶಂಖಾದ್ಯುದಾಯುಧ’ ಎಂದು ಕೃಷ್ಣಸ್ತೋತ್ರದಲ್ಲೂ ಉಲ್ಲೇಖವಾಗಿರುವುದು ಇದಕ್ಕೆ ಸಾಕ್ಷಿ. ಶಂಖಕ್ಕೆ ಅತ್ಯಂತ ಪವಿತ್ರವಾದ ಸ್ಥಾನ ಭಾರತೀಯ ಸಂಸ್ಕೃತಿಯಲ್ಲಿದೆ. ಶಾಸ್ತ್ರಗಳ ಪ್ರಕಾರ ಶಂಖವು ಮನೆಯಲ್ಲಿದ್ದ ಮಾತ್ರದಿಂದಲೇ ಮನೆಯಲ್ಲಿರುವ ಋಣಾತ್ಮಕ ಶಕ್ತಿ,...

9

ಬಣ್ಣ ಒಂದು ಅವಲೋಕನ

Share Button

ಬಣ್ಣ ಭಗವಂತನ ಒಂದು ಅಪೂರ್ವ ಸೃಷ್ಟಿ ಎಂದೇ ಹೇಳಬೇಕು. ಪ್ರತಿ ಮಾನವನು ಕೂಡ ಒಂದು ವಿಶಿಷ್ಟವಾದ ಬಣ್ಣವನ್ನು ಹೆಚ್ಚು ಪ್ರೀತಿಸುತ್ತಾನೆ. ಬಣ್ಣಗಳ ಪ್ರಪಂಚವೇ ಒಂದು ವಿಭಿನ್ನ ಅನುಭವ. ಬಣ್ಣಗಳ ಕನಸನ್ನು ಕಾಣಿ ಹಾಗೂ ಸೃಜನಶೀಲರಾಗಿ ಎಂಬ ಮಾತಿದೆ. ಬಣ್ಣ ಪ್ರಕೃತಿಯ ನಗು, ಆತ್ಮದ ಮೇಲೆ ನೇರ ಪ್ರಭಾವ...

11

ಸಸ್ಯ ಹಾಗೂ ಲೋಹಗಳ ಸುತ್ತ

Share Button

ಜಗತ್ತಿನಲ್ಲಿ ಸಸ್ಯ ಸಾಮ್ರಾಜ್ಯ ಅಗಾಧವಾದದ್ದು. ಸಾವಿರಾರು ಪ್ರಭೇದಗಳು ಅದರಲ್ಲೂ ಸಾವಿರಾರು ಉಪಪ್ರಭೇದಗಳು ಇದ್ದು ಪ್ರತಿಯೊಂದು ಒಂದು ವೈಶಿಷ್ಟ್ಯ ಪೂರ್ಣ ಗುಣಲಕ್ಷಣಗಳನ್ನು ಹೊಂದಿದೆ. ಸಸ್ಯ ಸಾಮ್ರಾಜ್ಯದಲ್ಲಿ ಔಷಧೀಯ ಗಿಡಗಳು, ಅಲಂಕಾರಿಕ ಗಿಡಗಳು, ಅನೇಕ ತರದ ಮರಗಳು, ಮಾನವ ಸೇವನೆಗೆ ಉಪಯುಕ್ತ ಗಿಡಗಳು ಇವೆ. ಇದಲ್ಲದೆ ಹಲವಾರು ಗಿಡಮರಗಳಿಗೆ ಮಣ್ಣಿನ...

8

ಕೊರೋನಾ ಕನಸಿನ ಸುತ್ತ.

Share Button

ದೇಶದ 40 ದಿನಗಳ ಲಾಕ್‌ಡೌನ್ ಎಂಬ ಗೃಹಬಂಧನದಲ್ಲಿ ನಾನು ಹೈರಾಣವಾಗಿದ್ದೆ. ಸದಾ ಹೊರಗಡೆ ಕನಿಷ್ಟ ನಾಕ್ಕೈದು ಗಂಟೆಗಳ ಕಾಲ ತಿರುಗುತ್ತಿದ್ದ ನನಗೆ ಹುಚ್ಚು ಹಿಡಿದಂತಾಗಿತ್ತು. ಕೊನೆಗೂ ಕೊರೋನಾ ಎಂಬ ಮಹಾಮಾರಿಯ ಪ್ರತಾಪ ಕಡಿಮೆಯಾಗಿ ಹಾಯೆನಿಸಿತು. ಹಾಗೆ ರಾತ್ರಿ ಮಲಗಿದಾಗ ಯಾವುದಾದರೂ ದೂರದ ತಣ್ಣನೆಯ ಜಾಗಕ್ಕೆ ಹೋಗುವ ಮನಸ್ಸಾಗಿ...

6

ಕೈಕೇಯಿ-ಒಂದು ಸ್ವಗತ

Share Button

ನಾನು ಕೈಕೇಯಿ. ನಾನಾರೆಂದು ಲೋಕಕ್ಕೇ ತಿಳಿದಿದೆ. ದಶರಥ ಮಹಾರಾಜನ ಕಿರಿಯ ಅಚ್ಚುಮೆಚ್ಚಿನ ರಾಣಿ. ನಾನು ಸುಂದರಿ, ಬುದ್ಧಿವಂತೆ ಹಾಗೂ ಜಾಣೆ ಎಂದು ಪ್ರಸಿದ್ಧಳಾಗಿದ್ದೆ. ಆದರೇನು ನಾನೋರ್ವ ನತದೃಷ್ಟೆ. ರಾಮಾಯಣದ ಕೊನೆಯವರೆಗೂ ಎಲ್ಲರಿಂದ ಹಂಗಿಸಿಕೊಂಡ ಪಾಪಿ ಎಂದರೆ ಅತಿಶಯೋಕ್ತಿಯಲ್ಲ. ನಾನು ಕಳಂಕಿತಳು, ರಾಮಾಯಣದ ಸೂತ್ರಧಾರಿಣಿ, ಯುದ್ಧ ಪ್ರಚೋದಿಸಿದವಳು, ದಶರಥನ...

8

ಮಿಯಾವಾಕಿ – ಒಂದು ಅದ್ಭುತ ವಾಸ್ತವಿಕತೆ

Share Button

ಜಗತ್ತಿನಲ್ಲಿ ಈಗ ಅತಿಯಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಮಾಲಿನ್ಯ, ತಾಪಮಾನ ಏರಿಕೆ, ಜಲದ ಕೊರತೆ ಇತ್ಯಾದಿ. ಇವೆಲ್ಲವೂ ಮಾನವ ನಿರ್ಮಿತ ಸಮಸ್ಯೆಗಳೆಂದರೆ ಅತಿಶಯೋಕ್ತಿ ಎನಿಸದು. ಕೈಗಾರಿಕಾ ಕ್ರಾಂತಿಯಾದಾಗಲಿಂದ ಜಾಗತಿಕ ತಾಪಮಾನ ಒಂದು ಡಿಗ್ರಿ ಸೆಲೇಶಿಯಸ್‌ನಷ್ಟು ಹೆಚ್ಚಾಗಿದೆ. ತಜ್ಞರ ಪ್ರಕಾರ 2040 ರ ವೇಳೆಗೆ ಇದು 1.5 ಡಿಗ್ರಿ...

7

ತರಕಾರಿ ಚಮತ್ಕಾರ

Share Button

ಮೇಲಿನ ಶೀರ್ಷಿಕೆ ಸ್ವಲ್ಪ ವಿಚಿತ್ರವೆನಿಸಬಹುದು. ಪ್ರಾರಂಭಕ್ಕೆ ಈರುಳ್ಳಿಯಿಂದ ಪ್ರಾರಂಭಿಸೋಣ. ಈರುಳ್ಳಿ ಅಡ್ಡಕೊಯ್ದರೆ ಚಕ್ರ ಉದ್ದ ಕೊಯ್ದರೆ ಶಂಖ ಎಂಬ ಒಗಟಿದೆ. ಪಂಚತಾರಾ ಹೋಟೆಲುಗಳಲ್ಲಿ ಇದನ್ನು ಚಕ್ರಾಕಾರವಾಗಿ ತುಂಡರಿಸಿ ಕ್ಯಾರೆಟ್, ನಿಂಬೆಹಣ್ಣು ಇತರೆ ಸೊಪ್ಪು ಸದೆಯೊಂದಿಗೆ ಇಡುತ್ತಾರೆ. ಅದೇ ಚುರುಮುರಿ, ಗಿರ್ಮಿಟ್, ಪಚಡಿಗಳಲ್ಲಿ ಪುಡಿ, ಪುಡಿಯಾಗಿ ಹಚ್ಚಿರುತ್ತಾರೆ. ಸಾಂಬಾರ್...

6

ಮಾರ್ಜಾಲ – ಒಂದು ಸ್ವಗತ

Share Button

ನನ್ನ ಬೆಳಗಿನ ವಾಯುವಿಹಾರಕ್ಕೆ ಹೊರಟಾಗ ಒಂದು ಬೆಕ್ಕು ಅಡ್ಡಬಂತು. ನಾನು ನನ್ನ ಹಿರಿಯರ ಸಂಪ್ರದಾಯದಂತೆ ಹಿಂತಿರುಗಿ ಐದಾರು ಹೆಜ್ಜೆ ಇಟ್ಟು ಮತ್ತೆ ತಿರುಗಿ ನನ್ನ ನಡಿಗೆ ಪ್ರಾರಂಭಿಸಿದೆ. ಬೆಕ್ಕು ನನ್ನನ್ನು ತಿರಸ್ಕಾರದಿಂದ ನೋಡಿ ರಸ್ತೆ ದಾಟಿತು. ಅದರ ಮನಸ್ಸಿನಲ್ಲಾದ ಹಲವು ಆಕ್ರೋಶ, ಜಿಗುಪ್ಸೆ ಹಾಗೂ ಇತರ ಭಾವನೆಗಳನ್ನು...

10

ಊರ್ಮಿಳೆ – ಒಂದು ಸ್ವಗತ

Share Button

ನಾನು ಊರ್ಮಿಳೆ. ಯಾರೆಂದು ಕೇಳುವಿರಾ? ಜನಕ ಮಹಾರಾಜ ಹಾಗೂ ಮಹಾರಾಣಿ ಸುನೈನಾಳ ಪ್ರೀತಿಯ ಪುತ್ರಿ. ಸೀತೆ ಭೂಮಿಯಲ್ಲಿ ದೊರೆತ ದತ್ತು ಪುತ್ರಿ ಜನಕನಿಗೆ. ನನಗೆ ಸಹೋದರಿಯಾದರೂ ಅದಕ್ಕಿಂತ ಹೆಚ್ಚು ಸ್ನೇಹಿತೆಯೆಂದೇ ಅನಿಸಿಕೆ. ನನ್ನನ್ನು ಜಾನಕಿಯೆಂದೇ ಕರೆಯುತ್ತಿದ್ದರೆಂಬುದು ವಿಶೇಷ. ರಾಮನು ಶಿವಧನುಸ್ಸನ್ನು ಭೇದಿಸಿದ ಸೀತೆಯ ಸ್ವಯಂವರವಾದ ಮೇಲೆ ವಿಶ್ವಾಮಿತ್ರರ...

12

ನಿತ್ಯ ನಡೆಯುವ ವಿಚಿತ್ರಗಳು

Share Button

ಮಾನವನ ಜೀವನದಲ್ಲಿ ಪ್ರತಿನಿತ್ಯ ಹಲವಾರು ಘಟನೆಗಳು ತಿಳಿದೋ ತಿಳಿಯದೆಯೋ ಸಂಭವಿಸುತ್ತಿರುತ್ತವೆ. ಇವುಗಳಲ್ಲಿ ಕೆಲವು ಘಟನೆಗಳಿಗೆ ಅವನೇ ಕಾರಣನಾಗಬಹುದು ಅಥವಾ ಪರಿಸ್ಥಿತಿ, ಪರಿಸರ, ಜತೆಗಾರ, ಕಾಲ ಇತ್ಯಾದಿಗಳು ಪ್ರಭಾವ ಬೀಳಬಹುದು. ಈ ಘಟನೆಗಳ ಸರಣಿ ಎಣಿಕೆಗೆ ಬಾರದಷ್ಟು ಪದೇ ಪದೇ ಸಂಭವಿಸುತ್ತಿರುತ್ತವೆ. ಇದನ್ನೇ ಕೆಲವು ಪರಿಣಿತರು ಅದರ ಬಗ್ಗೆ...

Follow

Get every new post on this blog delivered to your Inbox.

Join other followers: