Author: Mala N Murthy, malamamtha26@gmail.com
ಮೊಳಕೆಯೊಂದು ಆಗಷ್ಟೇ ಗರ್ಭದಿಂದ ಹೊರ ಬರುವ ಕಾತುರತೆಯಲ್ಲಿತ್ತು, ಮೊಗ್ಗೊಂದು ಅರಳೋ ಖುಷಿಯ ಹೊಸ್ತಿಲಲ್ಲಿ ಕಾದು ಕೂತಿತ್ತು, ಅರ್ಧ ಅರಳಿದ ಹೂ ಮೊಗ್ಗೊಂದು ಅರ್ಧ ಅರಳಿ ಮತ್ತಷ್ಟು ಅರಳೋ ಉತ್ಸಾಹದ ಚಿಲುಮೆಯಾಗಿತ್ತು, ಪೂರ್ತಿ ಅರಳಿ ನಿಂತ ಹೂ ತನ್ನ ನಗುವ ಚೆಲುವಿಂದ ಕಂಗೊಳಿಸುತ್ತಿತ್ತು. ಅರ್ಧ ಬಾಡಿದ ಹೂವೊಂದು ತನ್ನ...
ಚಿತ್ರ ಕೃಪೆ: ರೋಹಿತ್ದಾಸ್ ಮಲ್ಯ ಬೆಳ್ಳಾರೆ ಕರೆಯದೆ ಬಂದು ಸೇರುವೆವು,ಒಬ್ಬರನ್ನೊಬ್ಬರ ಅರಿಯದೆ ಹಂಚಿ ತಿನ್ನುವುವೆವು,ಕೊಟ್ಟಿದ್ದು ಯಾರೋ, ಮೊದಲು ಕಂಡಿದ್ದು ಇನ್ನ್ಯಾರೋ ,ಕೊನೆಯಲ್ಲಿ ನಾವೆಲ್ಲಾ ಹಸಿವು ನೀಗಿಸೆದೆವು ಅನ್ನೋ ತೃಪ್ತಿ ನಮ್ಮಲ್ಲಿ. ಹಿಡಿ ಕಾಳು ಹಾಕಿ ನಮ್ಮಿಷ್ಟೂ ಬಳಗವ ಸಂತೃಪ್ತಿಸುವ ಅಗಾಧ ಶಕ್ತಿ ಇರುವ ಮನುಜ, ನೀನೇಕೆ ನಿನ್ನ ನೀ ತೃಪ್ತಿಗೊಳಿಸುವ...
ನನ್ನಾಕೆ ನನ್ನ ಬಾಳೊಳಗೆ ಬಲಗಾಲಿಟ್ಟು ಪ್ರವೇಶಿಸುವಾಗ ನನ್ನ ಮುಂದೆ ಜೀವನದ ಬಗೆಗೆ ಇದ್ದದ್ದು ಬರಿ ಪ್ರಶ್ನೆಗಳೇ, ಬಹುಶ ಆಕೆಯ ಮನದಲ್ಲೂ …ಇಬ್ಬರು ಅಪರಿಚಿತ ಪರಿಚಿತರು ಒಂದೇ ದಾರಿಯ ಎರಡು ಹೆಜ್ಜೆಗಳಾಗಿ ಪಯಣ ಪ್ರಾರಂಭಿಸಿದೆವು ನಮ್ಮದಲ್ಲದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕಲು ಜೊತೆಯಾದೆವು..ಕಾಲ ಸರಿದು ಪಯಣದ ದೂರ ತುಸು...
ಅಪ್ಪ.. ಬಾಳ ಜೋಳಿಗೆ ಹಿಡಿದು ನನ್ನೆದೆಯ ನಡುಮನೆಯ ಹೊಸ್ತಿಲಲಿ ನಿಂತಿರುವ ಜೋಗಪ್ಪ ಆ ಜೋಳಿಗೆ ತುಂಬ ಪ್ರೀತಿ ಎಂಬ ಆಸ್ತಿ ಹೊತ್ತುತಂದಿರುವ ಅರಸ ಆತ ನನ್ನಪ್ಪ.. ಅಪ್ಪ ಪದ ಚಿಕ್ಕದೆ ಆದ್ರೆ ಕೊಡೋ ಅರ್ಥ,ಭಾವನೆ,ನೆನಪಿಗೆ ಹೋಲಿಕೆ ಇಲ್ಲ.ಅಣ್ಣ ಅಪ್ಪನ ತರ ಅಂತಾರೆ ಇರಬೋದೇನೋ ಆದ್ರೆ ಅಣ್ಣನೇ ಅಪ್ಪ ಅಂತ...
ಮತ್ತೆ ಸೇರುವೆವೆಂಬ ನಂಬಿಕೆಯಲಿ … ದೂರದೂರಿಗೆ ಹೋಗಿ ಬರುವೆನೆಂಬ ಮಾತ ಹೇಳಲು ಕೈ ಬೆರಳಿನ ಅಂತರ ಸಡಿಲಿಸಿ, ತುಸು ದೂರ ನೀ ನಡೆದು ಹಿಂತಿರುಗಿ ನೋಡಿ, ಮಾಡಿದ ಆ ಸದ್ದಿಲ್ಲದ ಸಂಭಾಷಣೆಯ ಅರ್ಥ ದೇಶ ಸೇವೆ ಮೊದಲು ಎಂದು ನಾ ನನ್ನ ಪುಟ್ಟ ಮನಕೆ ಅರ್ಥೈಸಿ, ನನ್ನ...
ನಾವುಗಳೇ ಹಾಗೆ ಅನಿಸಿದ್ದನ್ನ ಹೇಳೋಲ್ಲ,ಇಷ್ಟ ಇರೋದು ಮಾಡೋಲ್ಲ ,ಇರೋ ಅಷ್ಟರಲ್ಲಿ ತೃಪ್ತಿನು ಪಡೋಲ್ಲ, ಚಿಂತೆಗೆ ತಡೆ ಇರೋಲ್ಲ, ಕನಸಿಗೆ ಕೊನೆ ಇರೋಲ್ಲ,ಆಸೆಗಂತೂ ಮಿತಿನೇ ಇರೋಲ್ಲ.ಮನುಷ್ಯ ಜೀವ ಅಲ್ವೇ ಆಸೆ, ನಿರಾಸೆ,ಕನಸು,ಆಕರ್ಷಣೆ,ಆಸಕ್ತಿ,ನಿರಾಸಕ್ತಿ,ನಿರೀಕ್ಷೆ ಹೀಗೆ ಹಲವಾರು ಭಾವನೆಗಳ ಮಿಶ್ರಣ ಇರಲೇ ಬೇಕು. ಅನಿಸಿದ್ದೆಲ್ಲ ಹೇಳುವಂತಿದ್ದರೇ?,ಬಯಸಿದ್ದೆಲ್ಲ ಸಿಗುವಂತಿದ್ದರೇ?,ಕನಸೆಲ್ಲ ನನಸಾಗುವಂತಿದ್ದರೇ? ಹೀಗೆ ನೂರಾರು ರೇ ಗಳ...
ಅಪ್ಪ-ಅಮ್ಮ, ಅಕ್ಕ-ಅಣ್ಣ, ತಂಗಿ-ತಮ್ಮ, ಅಜ್ಜ-ಅಜ್ಜಿ ……. ಆಹಾ ಎಷ್ಟು ಚೆನ್ನಾಗಿದೆ ಈ ಪದಗಳು!ಹೌದು, ಇವುಗಳೆಲ್ಲ ಬರಿ ಪದಗಳಷ್ಟೇ ಏಕೆಂದರೆ ಇವುಗಳೆಲ್ಲ ಸಂಬಂಧಗಳೆನಿಸುವುದು ಅವುಗಳ ಅರ್ಥಕ್ಕೆ ಜೀವ ಕೊಡುವವರು ಇದ್ದಾಗ ಮಾತ್ರ. ಸಮಾಜದಲ್ಲಿ ನಡೆಯುತ್ತಿರೋ ಅಮಾನುಷ ಕೃತ್ಯಗಳಿಗೆ ನರ ರಾಕ್ಷಸರುಗಳನ್ನು ದೂಷಿಸಿ, ಶಪಿಸಿ ನೀವುಗಳು ಸುಮ್ಮನಾಗುವಿರಿ. ಈ ಅಸಹಾಯಕ ಪುಟ್ಟ...
ನಿಮ್ಮ ಅನಿಸಿಕೆಗಳು…