ನಾವೂ ಪ್ರಕೃತಿಯ ಒಂದು ಭಾಗ
ಚಿತ್ರ ಕೃಪೆ: ರೋಹಿತ್ದಾಸ್ ಮಲ್ಯ ಬೆಳ್ಳಾರೆ
ಕರೆಯದೆ ಬಂದು ಸೇರುವೆವು,ಒಬ್ಬರನ್ನೊಬ್ಬರ ಅರಿಯದೆ ಹಂಚಿ ತಿನ್ನುವುವೆವು,ಕೊಟ್ಟಿದ್ದು ಯಾರೋ, ಮೊದಲು ಕಂಡಿದ್ದು ಇನ್ನ್ಯಾರೋ ,ಕೊನೆಯಲ್ಲಿ ನಾವೆಲ್ಲಾ ಹಸಿವು ನೀಗಿಸೆದೆವು ಅನ್ನೋ ತೃಪ್ತಿ ನಮ್ಮಲ್ಲಿ. ಹಿಡಿ ಕಾಳು ಹಾಕಿ ನಮ್ಮಿಷ್ಟೂ ಬಳಗವ ಸಂತೃಪ್ತಿಸುವ ಅಗಾಧ ಶಕ್ತಿ ಇರುವ ಮನುಜ, ನೀನೇಕೆ ನಿನ್ನ ನೀ ತೃಪ್ತಿಗೊಳಿಸುವ ಮಾರ್ಗ ಕಂಡಿಲ್ಲ ಇನ್ನು.
ಭಗವಂತ ನಮ್ಮ ಸೃಷ್ಟಿಸಿದ್ದು ಅವನ ಈ ಪರಿಸರ ಅನ್ನೋ ಮನೆಯ ಅಲಂಕಾರವಾಗಿ,ಇದೇ ಮನೆಯ ಇನ್ನೊಂದು ಅತೀ ಬುದ್ದಿ ಜೀವಿ ನೀನು ನಮ್ಮ ಸೆರೆ ಹಿಡಿದು ನಿನ್ನ ಗುಡಿಸಲ ಮನೆಯ ಅಲಂಕಾರಕ್ಕೆ ಬಳಸಿದೆ. ನಿನ್ನ ಜೊತೆ ನಮ್ಮನ್ನು ನಮ್ಮಂತೆ ಬದುಕಲು ಬಿಡು,ನಿನಗು ನಮಗು ಇರುವುದು ಒಂದೇ ಸೂರು ಅದ ನಶಿಸದಿರು ನಿನ್ನ ಸ್ವಾರ್ಥಕ್ಕೆ,ನೆನಪಿರಲಿ ಈ ಸೂರ ಪೂರ್ತಿಯಾಗಿ ಕಳೆದುಕೊಂಡ ದಿನ ನಮ್ಮೊಟ್ಟಿಗೆ ನೀನು ಅಳಿಯಬೇಕು.
ಅಯ್ಯೋ ಮರುಳೇ ನಮ್ಮದಾದರು ಅಲ್ಪ ಅವಧಿಯ ಆಟ ಇಲ್ಲಿ, ಆದರೆ ನೀನು ಶತಮಾನವನ್ನೇ ಕಳೆಯಬಲ್ಲೆ, ಜೋಕೆ ನಿನ್ನ ಅರಿವಿಲ್ಲದೆ ನಿನಗೆ ನೀನೇ ನಷ್ಟ ತಂದುಕೊಳ್ಳುತ್ತಿರುವೆ.
ಬೆಚ್ಚನೆಯ ಗೂಡು-ಗೊಟರು ,ಲೆಕ್ಕವಿಲ್ಲದಷ್ಟು ಪ್ರೀತಿ ವೆಚ್ಚ ಮಾಡುವ ಬಳಗ, ಹಸಿವನ್ನಷ್ಟೇ ನೀಗಿಸಲು ದಿನವಿಡೀ ಹುಡುಕಾಟ.ಇನ್ನಾದರೂ ಸ್ವಾರ್ಥ ಮನುಕುಲದ ಕಣ್ಣು ಬೀಳದರಿರಲಿ ಈ ಬಳಗದ ಮೇಲೆ.
-ಮಾಲಾ ಏನ್ ಮೂರ್ತಿ
ಪಕ್ಷಿ ಸಂಕುಲ ಅಳಿವಿನಂಚಿನೆಡೆಗೆ ಸಾಗುತ್ತಿರುವ ಈ ಕಾಲಕ್ಕೆ ಹೊಂದಿಕೆಯಾಗುವಂತಿದೆ ಬರಹ
ಪ್ರಕೃತಿಯೊಂದಿಗೆ ಬೆರೆತು ಬಾಳುವ ಔಚಿತ್ಯವನ್ನು ಮನದಟ್ಟು ಮಾಡಿಸಿದ್ದೀರಿ.