Author: Dr. Govinda Hegade, hegadegs@gmail.com
1. ಅವ ನುಡಿಸಿದ್ದು ಕೊಳಲನ್ನು ಅಲ್ಲ ಕಣೇ- ಕವಿಬೆರಳುಗಳಲ್ಲಿ ನನ್ನನ್ನು ! 2. ರಾಧೆ ಎಂದರೆ ಶ್ಯಾಮ ಶ್ಯಾಮನೆಂದರೆ ರಾಧೆ ಹಾಲು ಮತ್ತದರ ಬಿಳುಪು ಬೇರೆ ಬೇರೆ ಹೇಗೆ ? 3. ನಾನು...
ಹಕ್ಕಿಗೆ ಮರದ , ಮರಕ್ಕೆ ಹಕ್ಕಿಯ ಹಂಗಿಲ್ಲ ಎಂದರು ಹಿರಿಯರು. ಅವರಿಗೆ ನಮಸ್ಕಾರ ಆದರೆ ಮರದ ಬೀಜ ಹಕ್ಕಿಯ ಒಡಲಲ್ಲಿ ಎಲ್ಲೋ ದಾಟಿ ಮೊಳೆತು ಮತ್ತೆ ಮರ ಮರದ ಪೊಟರೆ ಕೊಂಬೆಗಳಲ್ಲಿ ಹಕ್ಕಿ ಗೂಡಾಗಿ ಮೊಟ್ಟೆ ಮರಿ ಮಾಡಿ-ಸಂಸಾರ ಹೀಗೆ ಸ್ಥಾವರ- ಜಂಗಮ ಜೀವ ಸಂಚಾರ ನನ್ನೊಬ್ಬ...
ಯಾವ ತಿರುವನು ಬಳಸಿ ಬರಲಿ ನಿನ್ನಲಿ ಗೆಳತಿ ನಮ್ಮ ದಾರಿಯ ಬೆಸೆವ ಬಿಂದುವೆಲ್ಲಿ ॥ ಅಡ್ಡ ಹಾಯುವ ಜಾಡು ದಿಣ್ಣೆಗಳು ತಗ್ಗುಗಳು ದಿಕ್ಕು ತಪ್ಪಿಸಿ ನನ್ನ ಬಳಲಿಸಿವೆಯೇ ॥ ಕಲ್ಲು ಮುಳ್ಳಿನ ದಾರಿ ಸುಳಿಯ ಸೆಳವಿನ ಹೊಳೆಯು ಹೆಜ್ಜೆ ಹೆಜ್ಜೆಗು ಅಡರಿ ತೊಳಲುತಿರುವೆ ॥ ನೇಸರನು ಮುಳುಗುತಿಹ...
ಓಂ ಶಿವನೆ ಶಂಕರನೆ ರುದ್ರಾಭಯಂಕರನೆ ಓ ಬಾರೊ ಬಂಧುವೇ ಎದೆಗೆ ಬಾರೋ ಹೇ ಭಗೀರಥವರದ ಹೇ ಕೃಪಾಸಿಂಧು ಗಂಗೆಯನು ಹರಿಸಯ್ಯ ಬೆಂಗಾಡಿಗೆ || ಹಾಲ್ಗಡಲ ಕಡೆವಂದು ಉದಿಸೆ ಹಾಲಾಹಲವು ಕುಡಿದು ಜಗವನು ಕಾದ ಕರುಣಿ ಬಾರೋ ಗಳದಿ ಗರಳವ ತಡೆದು ಪೊರೆದ ಗಿರಿಜಾಪತಿಯೆ ಲೋಕ ಲೋಕದ ಒಡಲ...
ಮಳೆಯಂತೆ ಬೀಳುವ ಕನಸುಗಳ ಅರ್ಥವೇನು ಹೇಳು ಬಣ್ಣ ತಳೆದು ನಗುವ ಮುಗಿಲುಗಳ ಅರ್ಥವೇನು ಹೇಳು ಬನದುದ್ದ ಕುಪ್ಪಳಿಸಿ ಕೀಚೆಂದಿದೆ ಹೆಸರಿಲ್ಲದ ಹಕ್ಕಿ ನೆನಪುಗಳಾಚೆಗೆ ನೆಗೆವ ರೆಕ್ಕೆಗಳ ಅರ್ಥವೇನು ಹೇಳು ಬೇಸಗೆಯಲ್ಲೂ ಕಾಮನ ಬಿಲ್ಲೆ! ತುಂಬಿ ಬಂತು ಮನಸು ಮಾತಿಗೆ ದಕ್ಕದ ನೂರು ಸ್ನೇಹಗಳ ಅರ್ಥವೇನು ಹೇಳು ಕಾರ್ಯ-ಕಾರಣ...
ಹೂವು ಅರಳುತ್ತಿಲ್ಲ ದುಂಬಿ ಗುಂಜನವಿಲ್ಲ ಕುಕಿಲು ಕೇಕೆಗಳೆಲ್ಲಿ ಮರೆಯಾದವೋ ಬಳೆ ಗೆಜ್ಜೆ ಕಿಂಕಿಣಿಯದೀಗ ಘನಮೌನ ಯಮುನಾತೀರದಲಿ ಸೂತಕದ ಛಾಯೆ ಪ್ರಭೂ, ಕಂಡೆ ನೀ ತೆರಳಿದ್ದನ್ನ ಬೃಂದಾವನದ ಎದೆ ಬಿರಿದಿದ್ದನ್ನ ಅನಾಥ ಮುರಳಿ ತಲೆಮರೆಸಿ ಕೊಂಡಿಹನು ಸ್ತಬ್ದವಾಗಿದೆ ಈಗ ವೇಣುಗಾನ ಗೋಪಿಯರೆಲ್ಲ ಗುಳೆ ಹೋಗಿದ್ದಾರೆ ಸೇರಿದ್ದಿರಬೇಕು ನಗರ ತೀರ...
ಯಾವುದೋ ಬೇಡರ ಹುಡುಗಿ ಹೆಸರಿಲ್ಲದೇ ಮರೆಗೆ ಸಲ್ಲುವ ಬದಲು ‘ಶಬರಿ’ ಎನಿಸಿ ತಪಕೆ ಹೆಸರಾಗಿ ನಿಂತಿದ್ದು ರಾಮನ ಮಹಿಮೆಯೇ ಶಬರಿಯದೇ ಕನಸ ಕಂಡಿರಬಹುದೇ ಹುಡುಗಿ ಕುದುರೆಯೇರಿ ಬರುವ ಯಾವುದೋ ಉತ್ತರದ ರಾಜಕುವರನದು ಹುಡುಗಿ ಹೆಣ್ಣಾಗಿ ಹಣ್ಣಾಗಿ ಹಪ್ಪು ಮುದುಕಿಯಾಗುವವರೆಗೂ ಕಾದು ಕಾದು ಪಾತ್ರ ಬದಲಿಸಿ ಹರಿದಿರಬೇಕು...
ನಗು ನೀನು ಎಲ್ಲ ಮರೆತಿರೆ ನೀನು ಇನ್ನು ಕಾಡುವುದಿಲ್ಲ ಮೇಘ, ಕಪೋತ ಸಂದೇಶಗಳ ತರುವ ನಿರೀಕ್ಷೆಯಿಲ್ಲ ಎದೆಯೆ ಬತ್ತಿರುವಾಗ ಕಣ್ಣಿಗೆ ಹೊಳಪಿಲ್ಲ ಭಾವ ಸತ್ತಿರುವಾಗ ನುಡಿಯಲೇನೂ ಇಲ್ಲ ಇಲ್ಲಗಳ ಸಂತೆಯಲಿ ಇನ್ನು ಕೇಳುವುದೇನು ನಂಜು ನುಂಗುವೆ ನಾನು ನೋವ ಸಂಕಲೆ ಮುರಿದು ನಗು ನೀನು ನನ್ನನೂ ಮರೆತು...
ಎಂಥದೋ ತೊಳಲಿಕೆಯ ವಿಧ್ವಸ್ತ ಮನದಲ್ಲಿ ಮನೆ ತಲುಪಿದೆ ಒಂದು ಕೈಯಲ್ಲಿ ವಾಕರ್ ಇನ್ನೊಂದರಲ್ಲಿ ಪೈಪು ಹಿಡಿದು ಸಸಿ ಮಕ್ಕಳಿಗೆ ನೀರು ಹನಿಸುತ್ತಿರುವ ಅಮ್ಮನನ್ನು ಕಂಡಿದ್ದೇ ಈಗ ಎಲ್ಲದಕ್ಕೂ ಬೇರೆಯದೇ ಬಣ್ಣ ಬಂದಿದೆ -ಡಾ. ಗೋವಿಂದ ಹೆಗಡೆ +8
ನಿನ್ನ ಬಗ್ಗೆ ಹೇಳಹೊರಡುವುದು ಶರಧಿಗೆ ಕೊಡುವ ಷಟ್ಪದಿಯ ದೀಕ್ಷೆಯಾದೀತೆಂಬ ಅಳುಕು ಕೃಷೀವಲ ನೀನು ಶ್ರದ್ಧೆಯಿಂದ ಮಾಡುತ್ತಲೇ ಹೋದೆ ನಾಡಿಗರೆದೆಯ ಉತ್ತುವ ಬಿತ್ತುವ ಕಾಯಕ ಹತ್ತೇ ಹದಿನೆಂಟೇ ಮುಖ ಮೊಳಕೆ ಎಲ್ಲಕ್ಕೂ ಬೆಳೆವ ಬೆಳೆಸುವ ಬದುಕ ಹಿರಿದಾಗಿಸುವ ತವಕ ಆನೆಯಂತೆ ನಡೆದೆ ಬಿಚ್ಚುತ್ತ ನಿನ್ನದೇ ದಾರಿ ;ಇಲ್ಲ ರಾಜಿ...
ನಿಮ್ಮ ಅನಿಸಿಕೆಗಳು…