ಬೆಳಕು-ಬಳ್ಳಿ

ದಿವ್ಯ

Share Button

 

ಎಂಥದೋ ತೊಳಲಿಕೆಯ
ವಿಧ್ವಸ್ತ ಮನದಲ್ಲಿ
ಮನೆ ತಲುಪಿದೆ
ಒಂದು ಕೈಯಲ್ಲಿ ವಾಕರ್
ಇನ್ನೊಂದರಲ್ಲಿ ಪೈಪು
ಹಿಡಿದು
ಸಸಿ ಮಕ್ಕಳಿಗೆ ನೀರು
ಹನಿಸುತ್ತಿರುವ
ಅಮ್ಮನನ್ನು ಕಂಡಿದ್ದೇ
ಈಗ ಎಲ್ಲದಕ್ಕೂ
ಬೇರೆಯದೇ ಬಣ್ಣ
ಬಂದಿದೆ

-ಡಾ. ಗೋವಿಂದ ಹೆಗಡೆ

One comment on “ದಿವ್ಯ

  1. ಜೀವನಪ್ರೀತಿಯ ಬಗ್ಗೆ ಸೊಗಸಾಗಿ ಬರೆದಿದ್ದೀರಿ. ಸರಳವಾಗಿ ಗಹನವಾದ ವಿಷಯ ಹೇಳುವ ಕವನ ಸ್ಫೂರ್ತಿ ಚಿಮ್ಮಿಸುವಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *