ಗಂಗೆಯನು ಹರಿಸಯ್ಯ ಬೆಂಗಾಡಿಗೆ
ಓಂ ಶಿವನೆ ಶಂಕರನೆ ರುದ್ರಾಭಯಂಕರನೆ
ಓ ಬಾರೊ ಬಂಧುವೇ ಎದೆಗೆ ಬಾರೋ
ಹೇ ಭಗೀರಥವರದ ಹೇ ಕೃಪಾಸಿಂಧು
ಗಂಗೆಯನು ಹರಿಸಯ್ಯ ಬೆಂಗಾಡಿಗೆ ||
ಹಾಲ್ಗಡಲ ಕಡೆವಂದು ಉದಿಸೆ ಹಾಲಾಹಲವು
ಕುಡಿದು ಜಗವನು ಕಾದ ಕರುಣಿ ಬಾರೋ
ಗಳದಿ ಗರಳವ ತಡೆದು ಪೊರೆದ ಗಿರಿಜಾಪತಿಯೆ
ಲೋಕ ಲೋಕದ ಒಡಲ ತಣ್ಣಗಿರಿಸೋ ||
-ಗೋವಿಂದ ಹೆಗಡೆ