Daily Archive: October 15, 2015
ನನ್ನವ್ವ ಅನಕ್ಷರಸ್ಥಳು, ಸುಮಾರು ವರ್ಷಗಳ ಹಿಂದೆ ಜಾರಿಯಲ್ಲಿದ್ದ ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಕೇವಲ ತನ್ನ ಸಹಿ ಮಾಡುವುದನ್ನು ಮಾತ್ರ ಕಲಿತಿದ್ದಾಳೆ. ಸಂಗೀತ, ಸಾಹಿತ್ಯ, ಕಲೆ ಇಂತಹ ಯಾವ ವಾತರಣದಲ್ಲಿಯೂ ಅವ್ವ ಬೆಳೆದವಳಲ್ಲ. ಅಪ್ಪನಿಗೆ ಒಂದಿಷ್ಟು ಹವ್ಯಾಸಿ ನಾಟಕದಲ್ಲಿ ಹುಚ್ಚಿತ್ತು. ಅಪ್ಪನ ಹುಚ್ಚಿಗೆ ಅವ್ವನ ಮೌನ ವಿರೋಧವನ್ನು ನಾನು...
ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ.ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ,ಒಬ್ಬಳು ಮಗಳು ರಾಣಿ. ಕುಟುಂಬ ಮೂಲ ಕಸಬು ವ್ಯವಸಾಯವಾಗಿತ್ತು,ವರ್ಷ ಪೂರ್ತಿ ಮಳೆಯನ್ನು ನಂಬಿಕೊಂಡು ಬದುಕನ್ನು ಸಾಗಿಸುತ್ತಾಯಿದ್ದರು.ಕಡು ಬಡತನ ನಮ್ಮ ಮಕ್ಕಳಾದರು ...
ಮನೆಯಲ್ಲಿದ್ದ ಕಿತ್ತಳೆ ಹಣ್ಣು ತಿನ್ನಲಾಗದಷ್ಟು ಹುಳಿ ಇತ್ತು. ಮೈಸೂರಿನಲ್ಲಿ ನಿನ್ನೆಯಿಂದ ಮಳೆ-ತಂಪು. ಈ ಹವೆಗೆ ಕಿತ್ತಳೆಯ ಜ್ಯೂಸ್ ಬೇಡ ಅನಿಸಿತು. ಹಣ್ಣುಗಳನ್ನು ಕೊಂಡು ತಂದವಳು ನಾನೇ ಆದುದರಿಂದ ಮನೆಯ ಇತರ ಸದಸ್ಯರ ಮೇಲೆ ” ಹುಳಿ ಹಣ್ಣು ತಂದಿದ್ದೀರೆಂದು ” ದೋಷಾರೋಪಣೆ ಮಾಡುವ ಅವಕಾಶವೂ ಇಲ್ಲವಾಗಿತ್ತು! ಏನು...
ಇಂದು ಮುಂಜಾನೆ ಗಾಢನಿದ್ದೆಯಲ್ಲಿದ್ದ ನನಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಸಮಯ 0330 ಗಂಟೆ. ಹೊರಗಡೆ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ನಮ್ಮ ಮನೆಯ ಸುತ್ತುಮುತ್ತಲಿನಲ್ಲಿರುವ ಯಾವುದೋ ಕೀಟಗಳು ರಾತ್ರಿಯಾಗುತ್ತಿದ್ದಂತೆ ಕಿರಿಗುಡುತ್ತವೆ, ಹಾಗೂ ಇದರ ಸದ್ದು ದೂರದಿಂದ ತೇಲಿ ಬರುವ ಕಾಲ್ಗೆಜ್ಜೆಯ ನಿನಾದದಂತಿರುತ್ತದೆ, ಇದು ನಮಗೆ ಗೊತ್ತಿರುವ ವಿಚಾರ. ಹಾಗಾಗಿ ಅಂಜಿಕೆಯೇನಿಲ್ಲ....
ನಿಮ್ಮ ಅನಿಸಿಕೆಗಳು…