ನೀ ಬಾರದಿರುವೆಯಾ,ಓ ಕೋಪವೆ,?
ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ.ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ,ಒಬ್ಬಳು ಮಗಳು ರಾಣಿ. ಕುಟುಂಬ ಮೂಲ ಕಸಬು ವ್ಯವಸಾಯವಾಗಿತ್ತು,ವರ್ಷ ಪೂರ್ತಿ ಮಳೆಯನ್ನು ನಂಬಿಕೊಂಡು ಬದುಕನ್ನು ಸಾಗಿಸುತ್ತಾಯಿದ್ದರು.ಕಡು ಬಡತನ ನಮ್ಮ ಮಕ್ಕಳಾದರು ಚೆನ್ನಾಗಿ ಓದಿ ಒಳ್ಳೆಯ ಉದೋಗ್ಯಕ್ಕೆ ಸೇರಿ ಈ ಬಡತನದಿಂದ ಮುಕ್ತಿಯನ್ನು ನೀಡುತ್ತಾರೆ ಅಂತ ಕನಸು ಕಾಣುತ್ತಾ ಬದಕುತ್ತಾಯಿದ್ದರು.
ಅಜೇಯು ಶಾಲೆಯಲ್ಲಿ ಓದಿನಲ್ಲಿ, ಆಟದಲ್ಲಿ ಎಲ್ಲದರಲ್ಲೂ ಮುಂದೆಯಿದ್ದನು.ಅವರ ಆಸೆ ಅಂತೆಯೇ ಅಜೇಯು ಚೆನ್ನಾಗಿ ಓದಿ ಮೆಟ್ರಿಕ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಶನ್‍ನಲ್ಲಿ (Distinction) ಉತ್ತಿರ್ಣವಾಗುತ್ತಾನೆ. ಮಗನ ಉತ್ತಮವಾದ ಫಲಿತಾಂಶದಿಂದ ತುಂಬಾ ಸಂತೋಷವಾದ ಪಾಲಕರು ಮುಂದಿನ ಪಿ.ಯು.ಸಿ ವಿದ್ಯಾಭ್ಯಾಸಕ್ಕೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಸೇರಿಸಬೇಕಂತ ಯೋಚಿಸಿದರು. ಜಿಲ್ಲೆಯ ಪ್ರತಿಷ್ಠಿತ ಕಾಲೇಜು ಅಂದ ಮೇಲೆ ಸಿಕ್ಕಾಪಟ್ಟೆ ಶುಲ್ಕವಿರುವದು ಸಾಮಾನ್ಯ, ಅಷ್ಟೊಂದು ದುಡ್ಡನ್ನು ಹೇಗೆ ಹೊಂದಿಸುವದು ಅಂತ ಪಾಲಕರು ಯೋಚಿಸಲಾರಂಭಿಸಿದರು.
ಯಲ್ಲಪ್ಪವು ಹಾಗೆ ಹೀಗೆ ಸಾಲವನ್ನು ಮಾಡಿ ಹಣವನ್ನು ಹೊಂದಿಸಿ ಆ ಕಾಲೇಜಿಗೆ ಅಜೇಯಗೆ ಸೇರಿಸಿದನ್ನು.ಹಳ್ಳಿಯಲ್ಲಿ ಬೆಳೆದ ಅಜೇಯಗೆ ನಗರದ ವಾತಾವರಣ ಹೊಸದಾಗಿತ್ತು.ಕಾಲೇಜಿನ ಮೊದಲ ದಿನ ಅಜೇಯ ಮನಸ್ಸಿನಲ್ಲಿ ಏನೋ ಒಂದು ತರಹದ ಕಳವಳ, ಭಯ,ನಗರದ ಕಾಲೇಜಿನ ಹುಡುಗರು, ಹುಡುಗಿಯರು ಅವರ ಜೊತೆ ಹೇಗೆ ಸ್ನೇಹ ಬೆಳೆಯಸೊದ್ದು ಅಂತ ಯೋಚಿಸುತ್ತಾ ಕಾಲೇಜಿಗೆ ಹೋದನು. ಅಲ್ಲಿಯ ಹುಡುಗರ ಜೊತೆ ಮಾತನಾಡಿಸಿದ ಮೇಲೆ ಅವನ ಭಯ,ಆತಂಕ ಎಲ್ಲಾ ಮಾಯವಾಯಿತು. ದಿನ ಕಳೆದಂತೆ ಅವನು ನಗರ ಜೀವನ ಶೈಲಿಗೆ ಹೊಂದಿಕೊಂಡನು.ನೋಡು ನೋಡುತ್ತಲೇ ಮೊದಲ ಪಿ.ಯು.ಸಿ ಪರೀಕ್ಷೆ ಬಂತು. ಅಜೇಯು ಚೆನ್ನಾಗಿ ಓದಿ, ಉತ್ತಮವಾದ ಅಂಕಗಳಿಂದ ಉತ್ತೀರ್ಣರಾದನು.
ಅಜೇಯು ಡಾಕ್ಟರ್ ಆಗಬೇಕಂತ ಆಸೆಯಿಂದ ದ್ವಿತೀಯ ಪಿ.ಯು.ಸಿ ವರ್ಷದಲ್ಲಿ ಇನ್ನೂ ಹೆಚ್ಚು ಓದಲು ಪ್ರಾರಂಭಿಸಿದನು.ಅವನ ಆಸೆಯಂತೆ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ 90 % ಶೇಕಡಾವಾರು ಅಂಕಗಳನ್ನು ಪಡೆದು ಉತ್ತೀರ್ಣರಾದನು.ಸಿ.ಇ.ಟಿ ಯಲ್ಲಿ ಉತ್ತಮ ರಾಂಕ್ಯನ್ನು ಪಡೆದು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್(MBBS) ಸೀಟ್ ಕೂಡ ಪಡೆದನು. ಈ ಸುದ್ದಿ ತಿಳಿದ ತಕ್ಷಣವೆ ಅಜೇಯ ಮನೆಯಲ್ಲಿ ಹಬ್ಬದ ವಾತವರಣ,ಊರ ತುಂಬಾ ಇವನದೆ ಚರ್ಚೆ, ಪಾಲಕರ ಸಂತೋಷಕ್ಕೆ ಮಿತಿಯೆ ಇರಲಿಲ್ಲ. ಅಜೇಯು ಸರಕಾರಿ ಸೀಟು ಪಡೆದ್ದಿದರಿಂದ ಬ್ಯಾಂಕುಗಳು ಶಿಕ್ಷಣ ಸಾಲವನ್ನು ನೀಡಲು ನಾಮುಂದು ನೀಮುಂದು ಅಂತ ಮುಂದೆಬಂದವು. ಅಜೇಯು ಬ್ಯಾಂಕಿನಿಂದ ಸಾಲವನ್ನು ಪಡೆದು,ತನ್ನ ವೈದ್ಯಕೀಯ ವಿದ್ಯಾಭ್ಯಾಸವನ್ನು ಶುರುಮಾಡಿದನು.
ವೈದ್ಯಕೀಯ ಕಾಲೇಜಿನಲ್ಲೂ ಉತ್ತಮ ಓದಿನಿಂದ ಕಾಲೇಜಿನ ಪ್ರಾಧ್ಯಾಪಕರಿಗೆಲ್ಲರಿಗೂ ಮೆಚ್ಚಿನ ಶಿಷ್ಯನಾದನು. ಓದಿನಲ್ಲಿ ಕಾಲೇಜಿಗೆ ಪ್ರಥಮನಾದ್ದನು. ಎಂ.ಬಿ.ಬಿ.ಎಸ್ ಡಿಗ್ರಿಯ ನಾಲ್ಕು ವರ್ಷಗಳಲ್ಲಿಯೂ ಕಾಲೇಜಿಗೆ ಪ್ರಥಮನಾಗಿ ಉತ್ತೀರ್ಣರಾದನು.ಇನ್ನೂ ಕಡೆಯ ವರ್ಷದ ತರಬೇತಿಯನ್ನು ಕೂಡ ಉತ್ತಮವಾದ ರೀತಿಯಲ್ಲಿ ಪೂರ್ಣಗೊಳಿಸಿ,ತಂದೆ,ತಾಯಿಯನ್ನು ಭೇಟಿ ಮಾಡಲು ತನ್ನ ಹಳ್ಳಿಗೆ ಹೊರಟನು. ಹಾಗೆ ಹಳ್ಳಿಯಲ್ಲಿ ಕೆಲವು ದಿನಗಳನ್ನು ಕಳೆದ ನಂತರ,ಒಂದು ದಿನ ದಿನಪತ್ರಿಕೆಯನ್ನು ಓದುತ್ತಿದ್ದಾಗ ಕೇಂದ್ರ ಸರಕಾರದ ಉದೋಗ್ಯದ ಜಾಹೀರಾತು ನೋಡಿ ಅದಕ್ಕೆ ಅರ್ಜಿಯನ್ನು ಹಾಕಿದನು.
ಒಂದು ತಿಂಗಳ ನಂತರ ಸಂದರ್ಶನವು ಜರುಗಿತು, ಅದರಲ್ಲಿ ಅಜೇಯು ಚೆನ್ನಾಗಿ ಮಾಡಿದ್ದನ್ನು. ಅಜೇಯಗೆ ತುಂಬಾ ವಿಶ್ವಾಸವಿತ್ತು,ತಾನು ಆಯ್ಕೆಯಾಗಬಹವುದು ಅಂತ. ಅವನ ವಿಶ್ವಾಸದಂತೆಯೆ ಕೆಲವು ದಿನಗಳ ನಂತರ ಸರಕಾರದಿಂದ ಅಂಚೆಯ ಮುಖಾಂತರ ಅಜೇಯ ಮನೆಗೆ ನೇಮಕಾತಿ ಆದೇಶವು ಬಂತು. ಅದನ್ನು ಕೇಳಿದ ಕ್ಷಣವೇ ಅವರ ತಂದೆ ತಾಯಿಯ ಕಣ್ಣಿನಲ್ಲಿ ಸಂತೋಷದ ಹನಿಗಳು ತುಂಬಿ ಹೊರಬರಲು ತೊಡಗಿದವು.ಅಜೇಯ ಮುಖದಲ್ಲಿ ತಾನು ಅಂದು ಕೊಂಡಿದ್ದು ಸಾಧಿಸಿದ ಖುಷಿ ತುಂಬಿತ್ತು. ಊರಿನ ತುಂಬಾ ಈ ಸುದ್ದಿ ಹರಡಿದ ಕ್ಷಣವೇ ಅಜೇಯಗೆ ಹಾಗೂ ಅವನ ಪಾಲಕರಿಗೆ ಶುಭಾಶಯಗಳ ಒಂದು ಮಹಾಪೋರವೆ ಹರಿದು ಬರತೊಡಗಿದವು.
ತಮ್ಮ ಊರ ಹುಡುಗನ ಸಾಧನೆಯನ್ನು ಕಂಡು ಎಲ್ಲರಿಗೂ ಹೆಮ್ಮೆಯಾಯಿತ್ತು.ಅಜೇಯಗೆ ದೆಹಲಿಯ ಕೇಂದ್ರ ಸರಕಾರದ ಆಸ್ಪತ್ರೆಯಲ್ಲಿ ನೇಮಕಾತಿ ನೀಡಿದರು. ಬೆಂಗಳೂರಿನಿಂದ ದೆಹಲಿಗೆ ಹೊರಡುವ ರೈಲ್ವಿನ ಟಿಕೆಟ್ ಯನ್ನು ತೆಗೆಸಿದನು.ಆದರೆ ಕನರ್ಪಾಮ್ (Confirm) ಟಿಕೆಟ್ ಸಿಗಲಿಲ್ಲ, ಆರ್.ಏ.ಸಿ (RAC) ಟಿಕೆಟ್ ಸಿಕ್ಕಿತು. ಎರಡು ದಿನಗಳ ನಂತರ ಹೊರಡಬೇಕಿತ್ತು.ಹೋರಡುವ ಮುನ್ನ ತಮ್ಮ ಮನೆ ದೇವರ ದರ್ಶನ ತೆಗೆದುಕೊಂಡು ಬರಬೇಕಂತ ಯೋಚಿಸಿದನು. ಮರು ದಿನ ಬೆಳಗ್ಗೆ ಬೇಗನೆ ಮನೆ ದೇವರ ದರ್ಶನಕ್ಕೆ ಹೊರಟಿದನು,ಸಾಯಂಕಾಲದ ಹೊತ್ತಿಗೆ ದರ್ಶನವನ್ನು ಪಡೆದು ಮತ್ತೆ ತಮ್ಮ ಹಳ್ಳಿಗೆ ವಾಪಸನಾದನು.ಮರು ದಿನ ರಾತ್ರಿ ೯ ಗಂಟೆಗೆ ಬೆಂಗಳೂರಿನಿಂದ ಅವನ ರೈಲುಗಾಡಿಯಿತ್ತು.ಬೆಳಗ್ಗೆ ಬೇಗ ಎದ್ದು ಊರ ದೇವರ ದರ್ಶನವನ್ನು ಪಡೆದನು.ತನ್ನ ಬಟ್ಟೆ, ಸಾಮಾನುಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡನು.ತಂದೆ,ತಾಯಿಯ ಆರ್ಶಿವಾದವನ್ನು ಪಡೆದು,ತಂಗಿಗೆ ನೀನು ಚೆನ್ನಾಗಿ ಓದು ,ಅಪ್ಪ ಅಮ್ಮನಾ ಚೆನ್ನಾಗಿ ನೋಡಿಕೊಳ್ಳು, ಕೆಲವು ತಿಂಗಳ ನಂತರ ನಾನು ದೆಹಲಿ ಅಲ್ಲಿಯೇ ಮನೆ ಮಾಡಿ ನಿಮ್ಮಲ್ಲರನ್ನು ಕರೆಹಿಸಿ ಕೊಳ್ಳುತ್ತಿನಿ.ನಾನು ಹೋಗಿ ಬರುತ್ತಿನಿ ತಂಗಿ ರಾಣಿ ಅಂತ ಹೇಳಿ ಹೊರಟನು ಬೆಂಗಳೂರಿನ ಕಡೆಗೆ.ಅವನ ಊರು ಬೆಂಗಳೂರಿನಿಂದ ಸುಮಾರು 110 ಕಿಲೋಮೀಟರ್ ದೂರವಿದೆ.ರಾತ್ರಿ ಸುಮಾರು ೮.೩೦ ಘಂಟೆಗೆ ಬೆಂಗಳೂರಿನ ರೈಲ್ವೆ ನಿಲ್ದಾಣವನ್ನು ತಲುಪಿದನು.
ಈ ಕತೆಯಲ್ಲಿ ಬರುವ ಇನೊಂದು ಪಾತ್ರ ಸುರೇಶ, ಇವರಿಗೆ ಇಬ್ಬರೂ ಮಕ್ಕಳು, ಪತ್ನಿ. ಪತ್ನಿಯ ಹೆಸರು ಸುನೀತಾ,ಒಂದು ಆರು ವರ್ಷದ ಗಂಡು ರಾಹುಲ್, ಇನೊಂದು ನಾಲ್ಕು ವರ್ಷದ ಹೆಣ್ಣು ಮಗು ಅಂಜಲಿ.ಸುರೇಶನ್ನು ಬೆಂಗಳೂರಿನ ಖಾಸಿಗಿ ಕಂಪನಿಯೊಂದರಲ್ಲಿ ಸಾಪ್ಟವೇರ ಇಂಜಿನಿಯರರಾಗಿ ಕೆಲಸ ಮಾಡುತ್ತಿದ್ದನು.ತನ್ನ ಕುಟುಂಬದ ಜೊತೆಯಲ್ಲಿ ಬೆಂಗಳೂರಲ್ಲಿಯೆ ವಾಸವಾಗಿದ್ದನು.ಒಳ್ಳೆಯ ಕೆಲಸ, ಕೈತುಂಬ ಸಂಬಳ, ಮಕ್ಕಳು, ಪತ್ನಿಯ ಜೊತೆ ಸುಖಕರ ಜೀವನ ನಡೆಯುತ್ತಾಯಿತ್ತು.
ಸುರೇಶನ ಉತ್ತಮವಾದ ಕೆಲಸವನ್ನು ಕಂಡು ಕಂಪನಿಯವರು ತಂಡದ ಮುಖ್ಯಸ್ಥನಾಗಿ (Team leader) ಪದೋನ್ನತಿ ನೀಡಿದರು.ಪದೋನ್ನತಿ ಆದ್ದ ಮೇಲೆ ಸಂಬಳವು ಹೆಚ್ಚಾಯಿತು, ಅದರ ಜೊತೆಯಲ್ಲಿಯೆ ಒತ್ತಡವು ಹೆಚ್ಚಾಯಿತು.ಸುರೇಶನಿಗೆ ಪ್ರತಿ ತಿಂಗಳು ಮನೆಯ ಬಾಡಿಗೆ ನೀಡಿ ಸಾಕ್ಕಾಗಿತ್ತು.ತಾನು ಒಂದು ಸ್ವಂತ ಮನೆಯನ್ನು ಖರೀದಿ ಮಾಡಬೇಕು ಅಂತ ಯೋಚಿಸಿದ. ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಂಡು ಬೆಂಗಳೂರಿನಲ್ಲಿ ಒಂದು ಅರ್ಪಾರಟಮೆಂಟ (Apartment) ಒಂದನ್ನು ಖರೀದಿಸಿದ್ದನು.ಮನೆಯ ಗೃಹ ಪ್ರವೇಶ ಮಾಡಲು ಒಳ್ಳೆಯ ದಿನವನ್ನು ತೆಗೆಸಿದ್ದನು.ಅಷ್ಟರಲ್ಲಿಯೇ ಕಂಪನಿಯ ಒಂದು ಮುಖ್ಯವಾದ ಕೆಲಸದ ಮೇರಿಗೆ ದೆಹಲಿಗೆ ಹೋಗಬೇಕಾಗಿ ಬಂತು.ಅನಿರ್ವಾಯ ಕಂಪನಿಯ ಮುಖ್ಯವಾದ ಕೆಲಸ ಬೇರೆ ಆಗೋದಿಲ್ಲ ಅಂಥ ಹೇಗೆ ಹೇಳೋದು, ಸುರೇಶನಿಗೆ ಏನು ದಾರಿ ತೋಚದಂತಾಯಿತ್ತು.ಸುರೇಶನು ಮನಸ್ಸಿನಲ್ಲಿ ಹಿಡಿ ಶಾಪವನ್ನೂ ಹಾಕುತ್ತಾ ಹೋಗಲು ಒಪ್ಪಿಕೊಂಡನು. ಮನೆಯ ಗೃಹ ಪ್ರವೇಶದ ದಿನಾಂಕವನ್ನು ಮುಂದೆ ಹಾಕಿ,ಬೆಂಗಳೂರಿನಿಂದ ದೆಹಲಿಗೆ ಹೊರಡುವ ರೈಲಿನ ಟಿಕಟವನ್ನು ತೆಗೆಸಿ ಹೊರಡಲು ಸಿದ್ಧನಾದನು.
ಸುರೇಶನು ಕೂಡ ಬೆಂಗಳೂರಿನ ರೈಲು ನಿಲ್ದಾಣವನ್ನು ತಲುಪಿದನು. ಅವನು ಕೂಡ ಅದೇ ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು.ಸುಮಾರು ರಾತ್ರಿ 9 ಘಂಟೆಗೆ ರೈಲು ಬಂತು, ಇಬ್ಬರೂ ಹತ್ತಿ ಕೊಂಡರೂ. ವಿರ್ಪಯಾಸ ಎಂದರೆ ಇಬ್ಬರ ಸೀಟುಗಳು ಒಂದೇ ಬೋಗಿಯಲ್ಲಿ,ಎರಡೂ ಸೀಟುಗಳಿರುವ ಕಡೆ ಮೇಲೆ ಕೆಳಗೆ ಬಂದಿದವು.
ಸುರೇಶನದು ಮೇಲಿನ ಸೀಟುಯಿತ್ತು.ಅವನ ತೆಳಗಿನ ಸೀಟನ್ನು ಅಜೇಯು ಮತ್ತು ಇನೊಬ್ಬ ಪ್ರಯಾಣಿಕ ರಾಜುಗೆ ನೀಡಲಾಗಿತ್ತು.ಯಾಕೆಂದರೆ ಅಜೇಯ ಮತ್ತು ರಾಜು ಸೀಟುಗಳು ಕನಪರ್ಮ (Confirm) ಆಗಿರಲಿಲ್ಲ. ಕೆಲವು ಆರ್.ಏ.ಸಿ (RAC) ಯಾಗಿದವು.ರೈಲು ಚುಕು ಬುಕು,ಅಂತ ಪ್ರಯಾಣ ಪ್ರಾರಂಭಿಸಿತ್ತು.ಅಜೇಯ ಮತ್ತು ರಾಜು ಇಬ್ಬರೂ ತೆಳಗಡೆ ಸೀಟಿನಲ್ಲಿ ಕುಳಿತು ಕೊಂಡರು.ಸುರೇಶನಿಗೆ ಇನ್ನೂ ನಿದ್ರೆ ಬಂದಿರಿಲಿಲ್ಲ, ಅಲ್ಲಿವರೆಗೂ ತೆಳಗಡೆ ಸೀಟಿನಲ್ಲಿ ಕುಳಿತು ಕೊಳ್ಳಬೇಕೆಂದರೆ ಅವರಿಬ್ಬರೂ ಕುಳಿತಿದ್ದರು. ಮನಸ್ಸಿನಲ್ಲಿಯೆ ಗೋಣಗುತ್ತಾ,ರಾತ್ರಿ ಯಾಗಿದೆ ಬೆಳ್ಳಗೆ ಅದರ ಬಗ್ಗೆ ಯೋಚಿಸಿದರಾಯಿತ್ತು ಅಂತ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ, ಅನಿರ್ವಾಯವಾಗಿ ಮೇಲೆ ಹತ್ತಿ ತನ್ನ ಮೇಲಿನ ಸೀಟಿನಲ್ಲಿ ಹಾಗೆ ಸುಮ್ಮನೆ ಮಲಗಿದ್ದನು.ಅಜೇಯು ಮತ್ತು ರಾಜು ಇಬ್ಬರೂ ತಮ್ಮ ತಮ್ಮ ಪರಿಚಯವನ್ನು ಮಾಡಿಕೊಂಡು, ಹಾಗೆ ಹರಟೆ ಪ್ರಾರಂಭಿಸಿದರು. ರಾಜು ಇಂಜಿನಿಯರಿಂಗ್ ಓದಿ,ದೆಹಲಿಯಲ್ಲಿ ಭಾ.ಆ.ಸ್ (IAS) ತರಬೇತಿ ತೆಗೆದುಕೊಳ್ಳಲು ಹೊರಟಿದ್ದನು.
ಬೆಂಗಳೂರಿನಿಂದ ದೆಹಲಿಗೆ ರೈಲು ಪ್ರಯಾಣ ಸುಮಾರು 26 ಗಂಟೆಗಳು ಬೇಕು. ರೈಲು ಪ್ರಯಾಣ ಪ್ರಾರಂಭಿಸಿ ಸುಮಾರು 30 ನಿಮಿಷಗಳಾಗಿದವು ಟಿಕೆಟ್ ನೀರಿಕ್ಷಕರು (Ticket Checker – TC) ಟಿಕೆಟ್ ನಿರೀಕ್ಷಿಸಲು ಬಂದರು. ಅಜೇಯು ಮತ್ತು ರಾಜು ತಮ್ಮ ಟಿಕೆಟ್ ಯನ್ನು ಪರೀಕ್ಷಿಸಿದ ಮೇಲೆ, ಯಾವುದಾದರೂ ಸೀಟು ಖಾಲಿಯಿದ್ದರೆ ,ನಮ್ಮ ಟಿಕೇಟು ಕನರ%E
ಅರ್ಥಪೂರ್ಣ ಬರಹ..
ಬರಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಕ್ಕೆ ವಂದನೆಗಳು ಮೇಡಂ..