Author: Vijaya Subrahmanya
ಮಾನವನು ತನ್ನ ಜೀವಿತದಲ್ಲಿ ಕೈಲಾದಷ್ಟು ದಾನ ಮಾಡಬೇಕಂತೆ.ದಾನಗಳಲ್ಲಿ ಹಲವು ರೂಪದ ದಾನಗಳು, ಅನ್ನ, ವಸ್ತ್ರ, ಧನಕನಕ, ಭೂಮಿ ಹೀಗೆ ಸ್ಥಿರ-ಚರ ವಸ್ತುಗಳಲ್ಲಿ ಯಾವುದನ್ನಾದರೂ ಕೈಲಾದಷ್ಟು ದಾನ ಮಾಡಬೇಕಂತೆ. ನಮ್ಮ ಸನಾತನದಿಂದಲೇ ಬಂದ ಧರ್ಮಸಂದೇಶವಿದು. ಇದಲ್ಲದಕ್ಕೂ ಮಿಗಿಲಾಗಿ ಯುಗದಲ್ಲಿ ಮನುಷ್ಯ ದೇಹದ ಅಂಗಗಳಾದ ನೇತ್ರ, ಕಿಡ್ನಿ, ಲಿವರ್ ಮೊದಲಾದವುಗಳನ್ನು ...
ಬಹಳ ಹಿಂದೆ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರನ್ನೊಲಿಸಿ ಕೊಳ್ಳುವುದಕ್ಕಾಗಿ ಮೂರ್ತಿ ಪೂಜೆಯನ್ನೋ ದೇವತಾದರ್ಶನವನ್ನೂ ಮಾಡದೆ ಕಠಿಣವಾದ ತಪಸ್ಸು ಅಥವಾ ಯಾಗ, ಯಜ್ಞಾದಿಗಳನ್ನು ಮಾಡುತ್ತಿದ್ದರು. ಸಂತಾನಕ್ಕಾಗಿ ಕುಟುಂಬ ಸುಖಕ್ಕಾಗಿ ಮಳೆ-ಬೆಳೆಗಾಗಿ ಹೀಗೆ ಹಲವು ವಿಧದ ಬಯಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ವೇದೋಕ್ತ ಯಾಗಗಳನ್ನು ಮಾಡುತ್ತಿದ್ದರು. ಇಂತಹ ಒಂದು ಕಾಲದಲ್ಲಿ ‘ವಾಜಶ್ರವಸ’...
ಯುವಕ-ಯುವತಿ ಪರಸ್ಪರ ಪ್ರೇಮಿಸಿ ಕೊನೆಯಲ್ಲಿ ಮದುವೆಯ ಹಂತಕ್ಕೆ ಬಂದಾಗ ಅವರಿಬ್ಬರೂ ಸಗೋತ್ರದವರೋ, ಅಣ್ಣ-ತಂಗಿಯಾಗಬೇಕಾದವರೆಂದೋ ತಿಳಿದು ಬಂದರೆ, ಆ ಮದುವೆ ಮುರಿದು ಬೀಳುವ ಪ್ರಸಂಗ ಎದುರಾಗುತ್ತದೆ. ವಿಷಯ ತಿಳಿದು ಈ ಮದುವೆ ನಡೆಯಬಾರದೆಂದು ತಂದೆ ತಾಯಿಗಳೋ, ಸಂಬಂಧಪಟ್ಟವರೋ ತಡೆ ಹಿಡಿದು ಆಧುನಿಕ ಯುಗದಲ್ಲಿ ಸಾಮಾನ್ಯ. ಆದರೆ ಪ್ರೀತಿಸಿದ ಗಂಡು...
‘ಜಾತಸ್ಯ ಮರಣಂ ಧ್ರುವಂ’ ಎಂಬ ಸೂಕ್ತಿಯಂತೆ ಹುಟ್ಟಿದ ಮನುಷ್ಯನಿಗೆ ಮರಣ ನಿಶ್ಚಿತವು. ಜನನ ಮತ್ತು ಮರಣವು ನಮ್ಮ ಕೈಯಲ್ಲಿಲ್ಲ. ಅವೆಲ್ಲವೂ ಅವೆಲ್ಲವೂ ವಿಧಿಲಿಖಿತ ಅಥವಾ ಅವರವರ ಪೂರ್ವ ಪುಣ್ಯ ಫಲದಂತೆ ನಡೆಯುತ್ತದೆ ಎಂಬುದು ಸನಾತನ ನಂಬಿಕೆ. ಜಾತಕದಲ್ಲಿ ಅಲ್ಪಾಯುಷ್ಯ ವೆಂದು ತಿಳಿದು ಬಂದರೆ ಈಗಿನ ಕಾಲದಲ್ಲಿ...
ತಪ್ಪು ಮಾಡಬಾರದು ಅದು ರಾಕ್ಷಸ ಗುಣ.ಒಂದು ವೇಳೆ ತಪ್ಪು ಮಾಡಿದರೆ ತಪ್ಪೆಂದು ತಿಳಿದಾಗ ಪಶ್ಚಾತ್ತಾಪ ಪಟ್ಟುಕೊಳ್ಳುವುದು ಮಾನವೀಯ ಗುಣ. ಅದಕ್ಕೂ ಮಿಗಿಲಾಗಿ ತಪ್ಪಿಗೆ ಪ್ರಾಯಶ್ಚಿತವಾಗಿ ತಾನೇ ಸ್ವತಃ ಶಿಕ್ಷೆ ಅನುಭವಿಸಿ ತೃಪ್ತಿ ಪಟ್ಟುಕೊಳ್ಳುವುದು ಜೀವ ದೇವ ಗುಣವಂತೆ. ಹಾಗೆಯೇ ತನಗೇನಾದರೂ ತೊಂದರೆಯಾದರೆ…! ಬೇರೆಯವರಿಂದ ಅಪಘಾತವೋ ಅಂಗ ಊನತೆಯೋ...
ವಿದ್ಯೆ ನೀಡಿದ ಗುರುಗಳಿಗೆ ವಿದ್ಯಾರ್ಥಿ ಅನಂತಕಾಲ ಶರಣಾಗಿರಬೇಕು. ಅಷ್ಟು ಮಾತ್ರವಲ್ಲ ತಾನು ವಿದ್ಯಾಭ್ಯಾಸ ಮುಗಿಸಿ ಹಿಂತಿರುಗುವಾಗ ತನ್ನ ಕೈಲಾದ ಕಾಣಿಕೆ ನೀಡಬೇಕು ಎಂಬುದು ಶಾಸ್ತ್ರ ವಿದಿತ. ಗುರುದಕ್ಷಿಣೆ ಇಲ್ಲದೆ; ಕಲಿತ ವಿದ್ಯೆ ಸಿದ್ಧಿಸಲಾರದು. ಇಂತಹ ಗುರುದಕ್ಷಿಣೆಯನ್ನು ಯಾವರೂಪದಿಂದಲೂ ನೀಡುತ್ತಿದ್ದರು. ಈ ನಿಟ್ಟಿನಲ್ಲಿ ಅರಸರು ಹಾಗೂ ಅಸುರರು, ಧನ,...
ಒಮ್ಮೆ ದೇವಲೋಕದಲ್ಲಿ ದೇವರ್ಕರುಗಳು ಸಭೆ ಸೇರಿದ್ದಾಗ ಮಹಾವಿಷ್ಣು ತನ್ನ ಪಕ್ಕದಲ್ಲಿಟ್ಟಿದ್ದ ಸುದರ್ಶನ ಚಕ್ರವನ್ನು ಬಾಲಗಣಪಪತಿ ನುಂಗಿ ಬಿಟ್ಟನಂತೆ.ಇದನ್ನು ಗಮನಿಸಿದ ಮಹಾವಿಷ್ಣು ಗೊಂದಲಕ್ಕೀಡಾದ. ಗಣಪತಿಯ ಹೊಟ್ಟೆಯಿಂದ ತನ್ನ ಆಯುಧವನ್ನು ಹೊರಹಾಕಿಸುವ ಬಗೆ ಹೇಗೆ ಎಂಬುದಾಗಿ ಚಿಂತಿಸಿದ.ಅದನ್ನು ಕಕ್ಕಿಬಿಡು ಮಹಾರಾಯ ಎಂಬುದಾಗಿ ಬಗೆ-ಬಗೆಯಲ್ಲಿ ನಿವೇದಿಸಿಕೊಂಡ ವಿಷ್ಣು. ಇಲ್ಲ.. ಗಣಪತಿ...
ಕರ್ಕಟಕ ಮಾಸವನ್ನು ರಾಮಾಯಣ ಮಾಸ ಎಂದು ಕರೆದು ಕೇರಳದಾದ್ಯಂತ ಒಂದು ತಿಂಗಳ ದಿನ ರಾಮಾಯಣ ಪಾರಾಯಣ ಮಾಡುವುದರ ಮೂಲಕ ರಾಮಭಕ್ತರಿಂದ ರಾಮೋಪಾಸನೆ ನಡೆಯುತ್ತದೆ. ಇದೇ ಮಾಸದಲ್ಲಿಯೇ ವಾಲ್ಮೀಕಿ ಋಷಿಯು ಲವ-ಕುಶರಿಗೆ ರಾಮನ ಕಥೆಯನ್ನು ಹೇಳಿದರೆಂದೂ ಅದೇ ಕಾರಣದಿಂದ ರಾಮಾಯಣಕ್ಕೆ ಕರ್ಕಟಕ ಮಾಸ ವಿಶೇಷವೆಂದೂ ಜನಜನಿತವಾಯಿತು. ರಾಮಾಯಣವೆಂಬ ಕಾವ್ಯವೇ...
ಅಣ್ಣ ತಂಗಿಯರ ಪ್ರೀತಿಯ ದ್ಯೋತಕವೇ ರಾಖಿ ಕಟ್ಟುವ ಪದ್ಧತಿ.ಇದನ್ನು ಶ್ರಾವಣ ಹುಣ್ಣಿಮೆಯ ದಿನ ಆಚರಿಸುವ ಸಂಪ್ರದಾಯ. ಸೋದರ+ಸೋದರಿಕೆ ಸಂಕೇತವಾಗಿ ಕಟ್ಟುವ ಈ ರಕ್ಷಾಬಂಧನಕ್ಕೆ ವಿಶಿಷ್ಟ ಅರ್ಥವಿದೆ.ಯಾರೇ ಒಬ್ಬ ಹೆಣ್ಣುಮಗಳು ಮತ್ತೊಬ್ಬ ಗಂಡಿಗೆ; ಅಥವಾ ಒಬ್ಬ ಗಂಡು ಮತ್ತೊಬ್ಬ ಗಂಡಿಗೆ ರಾಖಿ ಕಟ್ಟಿದರೆಂದರೆ ಅವರ ನಡುವೆ ಸೋದರಭಾವನೆಯೇ ಹೊರತು...
ಶ್ರಾವಣ ಬಂತೆಂದರೆ ಹಿಂದೂಗಳಲ್ಲಿ ಒಂದೊಂದೇ ಹಬ್ಬಗಳು ಪ್ರಾರಂಭಗೊಳ್ಳುತ್ತವೆ.ಈ ನಿಟ್ಟಿನಲ್ಲಿ ನಾಗರಪಂಚಮಿ ಮೊದಲನೆಯದು.ಈ ಬಾರಿ ಇದೇ ಜುಲೈ 25 ಕ್ಕೆ ನಾಗರಪಂಚಮಿ. ಹಿಂದೂಗಳು ನಾಗಾರಾಧಕರು. ಏಕೆಂದರೆ ನಾಗನು ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪ. ಗಣೇಶನ ಉದರ ಬಂಧವೂ ಹೌದು.ಶಿವನ ಕಂಠಾಭರಣ. ವಿಷ್ಣುವಿನ ತಲ್ಪ!ಶೇಷಶಯನನಲ್ಲವೇ?. ಕನ್ಯಾಕುಮಾರಿಯಿಂದ ಗೋಕರ್ಣದವರೆಗಿನ ಪರಶುರಾಮ ಕ್ಷೇತ್ರವನ್ನು...
ನಿಮ್ಮ ಅನಿಸಿಕೆಗಳು…