ಮಹಾಭಕ್ತ ಮಾರ್ಕಂಡೇಯ

Share Button

          ‘ಜಾತಸ್ಯ ಮರಣಂ ಧ್ರುವಂ’ ಎಂಬ ಸೂಕ್ತಿಯಂತೆ ಹುಟ್ಟಿದ ಮನುಷ್ಯನಿಗೆ ಮರಣ ನಿಶ್ಚಿತವು. ಜನನ ಮತ್ತು ಮರಣವು ನಮ್ಮ ಕೈಯಲ್ಲಿಲ್ಲ. ಅವೆಲ್ಲವೂ ಅವೆಲ್ಲವೂ ವಿಧಿಲಿಖಿತ ಅಥವಾ ಅವರವರ ಪೂರ್ವ ಪುಣ್ಯ ಫಲದಂತೆ ನಡೆಯುತ್ತದೆ ಎಂಬುದು ಸನಾತನ ನಂಬಿಕೆ. ಜಾತಕದಲ್ಲಿ ಅಲ್ಪಾಯುಷ್ಯ ವೆಂದು ತಿಳಿದು ಬಂದರೆ ಈಗಿನ ಕಾಲದಲ್ಲಿ ‘ಮೃತ್ಯುಂಜಯ’ ಮೊದಲಾದ ಹೋಮ, ಹವನಾದಿಗಳನ್ನು ಮಾಡಿಸುತ್ತಾರೆ. ಆದರೆ ಬಹಳ ಪುರಾತನ ಕಾಲದಲ್ಲಿ ಯೋಗ ಮತ್ತು ತಪಸ್ಸನ್ನಾಚರಿಸಿ ಆಯಸ್ಸು ವೃದ್ಧಿಸಿಕೊಳ್ಳುತ್ತಿದ್ದರು. ಅಲ್ಪಾಯುಷಿಯ  ಆಯುಸ್ಸು ವೃದ್ಧಿಸಿಕೊಂಡ ಕಥೆ ನಮ್ಮ ಪುರಾಣೇತಿಹಾಸಗಳ ಕೆಲವು ತಿಳಿದು ಬರುತ್ತದೆ. ಶಂಕರಾಚಾರ್ಯರಿಗೆ  ಜನ್ಮತಃ ಆಯಸ್ಸು ಕಡಿಮೆಯೆಂದು ತಿಳಿದಿತ್ತು. ಕೇವಲ ಎಂಟೇ ವರ್ಷದಲ್ಲಿ ಅವರ ಜೀವನ  ಕೊನೆಗಾಣುವುದರಲ್ಲಿತ್ತು.  ತಾನು ಸನ್ಯಾಸಿಯಾಗಿ ಲೋಕ ಕಲ್ಯಾಣದ ಕೈಂಕರ್ಯದಲ್ಲಿ ತೊಡಗಿಕೊಳ್ಳಬೇಕೆಂದು  ಬಯಸಿ ತನ್ನಮ್ಮನಲ್ಲಿಯೂ ಒಪ್ಪಿಗೆಯನ್ನು ಆಗಾಗ ಕೇಳಿಕೊಳ್ಳುತ್ತಿದ್ದರು. ಆದರೆ ಅವರ ತಾಯಿಗೆ ಅವರು ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ಎಂಟು ವರ್ಷ ತುಂಬಿದಾಗ ಎಂಟು ವರ್ಷ ತುಂಬಿದಾಗ ಬಂದು ದಿನ ಅವರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅವರ ಕಾಲನ್ನು ಮೊಸಳೆಯೊಂದು ಹಿಡಿಯಿತು. ಆಗ ಅವರು ಅಮ್ಮನನ್ನು ಕರೆದು,  ‘ಅಮ್ಮ ನನ್ನ ಆಯಸ್ಸು ಮುಗಿಯಿತು.ನೀನು ಸನ್ಯಾಸಿಯಾಗಲು ಅಪ್ಪಣೆ ಕೊಟ್ಟಿದ್ದಾದರೆ ನಾನು ಮರುಜನ್ಮ ಪಡೆಯುತ್ತೆನೆ.  ಈ ರೀತಿಯಿಂದ ನಾನು ಉಳಿದುಕೊಂಡು ಲೋಕಸೇವೆ ಮಾಡಬಹುದೆಂದು ಅಮ್ಮನಲ್ಲಿ ಗೋಗರೆಯುತ್ತಾರೆ. ಅವರಮ್ಮ ಕೂಡಲೇ ಒಪ್ಪಿಗೆಯಿತ್ತು  ಅವರು ಮರುಜನ್ಮ ಪಡೆಯುತ್ತಾರೆ. ಅಂದರೆ ಕೂಡಲೇ ಅಂದರೆ ಕೂಡಲೇ ಸನ್ಯಾಸ ದೀಕ್ಷೆ ತೊಡುತ್ತಾರೆ. ಇದು ನಮ್ಮ ಇತಿಹಾಸದಿಂದ ತಿಳಿದು ಬರುವ ತಿಳಿದು ಬರುವ ದೃಷ್ಟಾಂತವಾದರೆ  ಇನ್ನು ಪುರಾಣದಲ್ಲಿ ಆಯಸ್ಸು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ ಚಿರಂಜೀವಿ ಆದ ಕಥೆ ನಮ್ಮ ಮುಂದೆ ಇದೆ. ಅದೇ ಮಾರ್ಕಂಡೆಯನ ಕಥೆ.

ಸಂತಾನಹೀನನು ಸತ್ ಸಂತಾನಕ್ಕಾಗಿ ದೇವರನ್ನು ಬೇಡಿಕೊಳ್ಳುತ್ತಾನೆ.ಒಂದು ವೇಳೇ ಪರಮಾತ್ಮ ಪ್ರತ್ಯಕ್ಷವಾಗಿ  ‘ನಿನಗೆ ಅಲ್ಪಾಯುಷಿಯಾದ ಬುದ್ಧಿವಂತ ಮಗ ಬೇಕೋ ಅಥವಾ ದೀರ್ಘಾಯುಷಿಯಾಗಿ ಅಲ್ಪ ಬುದ್ಧಿಯವ ಬೇಕೋ ಎಂದು ಕೇಳಿದರೆ..?  ಎಲ್ಲರೂ ಬಯಸುವುದು ದೀರ್ಘಾಯುವನ್ನು ತಾನೇ ? ಸರಿ ಹಾಗೆಯೇ ಬೇಡಿಕೊಳ್ಳುತ್ತಾನೆ ಎಂದು ನಾವೆಣಿಸಿದರೆ ಅದು  ತಪ್ಪು.  ವಿವೇಕಿಯಾದವನು ಆಯುಸ್ಸಿಗಿಂತ ಬುದ್ಧಿಗೆ ಹೆಚ್ಚು ಮಹತ್ವ ನೀಡುತ್ತಾನೆ. ಜನಿಸಿದಾತ ಒಂದು ದಿನ ಕೊನೆಯಾಗಲೇಬೇಕಲ್ಲ! ಎಂಬುದು ಆತನ ನಿಲುವು.  ಇಂತಹ ಸನ್ನಿವೇಶದ ಕಥೆಯೇ ಮಾರ್ಕಾಂಡೇಯನ ಚರಿತ್ರೆ.

ಬ್ರಹ್ಮ ಮಾನಸ ಪುತ್ರನಾದ ಮೃಕಂಡು ಹಾಗೂ ಮರುಧ್ವತಿಯವರಿಗೆ ಬಹಳ ಕಾಲ ಮಕ್ಕಳಾಗಲಿಲ್ಲ. ಅದಕ್ಕಾಗಿ ಅವನು ಬ್ರಹ್ಮನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದನು. ಬ್ರಹ್ಮನು  ಪ್ರತ್ಯಕ್ಷನಾಗಿ ಆತನಿಗೆ ನಿನಗೆ ಪುತ್ರನಾಗಿ ಜನಿಸುವನು ಅಲ್ಪಾಯುಷಿಯಾಗಬೇಕೇ? ಅಲ್ಪಾಯುಷ್ಯವುಳ್ಳವನು ಬುದ್ಧಿವಂತನೂ ಆಗಿರುವವನ್ನು ಕರುಣಿಸಸುತ್ತೇನೆ. ಆಯ್ಕೆ ನಿನ್ನದು’ ಎನ್ನುತ್ತಾನೆ. ಆಗ ಮೃಕಂಡು ಮುನಿಯು ‘ನನಗೆ ಹುಟ್ಟುವ ಮಗನು ನೂರು ಕಾಲ ಬಾಳಬೇಕೆಂದು ನಾನು ಬಯಸುವುದಕ್ಕಿಂತ ಮಿಗಿಲಾಗಿ ಬುದ್ಧಿವಂತರಾಗಬೇಕೆಂದು ಇಚ್ಚಿಸುತ್ತೇನೆ ‘ ಎನ್ನುತ್ತಾನೆ . ‘ನಿನ್ನ ಇಷ್ಟಾರ್ಥ ಈಡೇರಲಿ’ ಎಂದು ಬ್ರಹ್ಮ ಹೊರಟು ಹೋಗುತ್ತಾನೆ . ಕಾಲಕ್ರಮದಲ್ಲಿ ಮೃಕಂಡುವಿಗೆ  ಒಬ್ಬ ಮಗ ಜನಿಸುತ್ತಾನೆ.  ಅವನಿಗೆ ‘ಮಾರ್ಕಂಡೇಯ’ ಎಂದು ಹೆಸರಿಡುತ್ತಾರೆ. ಈ ಮಗುವಿಗೆ ಸಕಾಲಕ್ಕೆ ಉಪನಯನಾದಿಗಳನ್ನು ಮಾಡಿ ಮೃಕಂಡು ಗುರುಕುಲಕ್ಕೆ ಕಳುಹಿಸುತ್ತಾನೆ . ಅವನಿಗೆ ‘ಮಾರ್ಕಾಂಡೇಯ’ ಎಂದು ಹೆಸರಿಡುತ್ತಾರೆ. ಮಾರ್ಕಂಡೇಯನು  ಗುರುಕುಲದಲ್ಲಿ ಭಿಕ್ಷಾಟನೆಯನ್ನು ಮಾಡುತ್ತಾ ತಂದ ಆಹಾರವನ್ನು ಗುರುವಿಗೆ ಒಪ್ಪಿಸಿದ ಮೇಲೆಯೇ ತಾನು ಸೇವಿಸುತ್ತಿದ್ದ. ಗುರುವಿನ ಅಪ್ಪಣೆ ಇಲ್ಲದೆ ತಾನು ಏನೂ ಸೇವಿಸುತ್ತಿರಲಿಲ್ಲ. ಹೀಗಿರುತ್ತಾ ಆತನ ವಿದ್ಯಾಭ್ಯಾಸ ಮುಗಿಯುತ್ತದೆ. ಮಾರ್ಕಂಡೇಯನಿಗೆ ಹದಿನಾರು ವರ್ಷ ಆಯಸ್ಸು ಎಂದು ತಿಳಿದ ಗುರುವು ಆತನಿಗೆ ಶಿವನ ಕುರಿತು ತಪಸ್ಸು ಮಾಡಲು ಸೂಚಿಸುತ್ತಾನೆ. ಶಿವಲಿಂಗವನ್ನು  ಇಟ್ಟುಕೊಂಡು ಶಿವನನ್ನೇ ಧ್ಯಾನ ಮಾಡುತ್ತಾ ಕೆಲವು ಕಾಲ ಕಳೆಯುತ್ತಾನೆ. ಆವನಿಗೆ ಹದಿನಾರು ವರ್ಷ ತುಂಬುತ್ತಿದ್ದಂತೆ,  ಒಂದು ದಿನ ಜೀವ ಕೊಂಡೊಯ್ಯಲು ‘ಯಮ’ ಬರುತ್ತಾನೆ. ಯಮನೊಂದಿಗೆ ಹೋಗಲು ಒಪ್ಪದ ಮಾರ್ಕಾಂಡೇಯ ಏಕೋಧ್ಯಾನದಿಂದ ಶಿವಲಿಂಗವನ್ನೇ ಅಪ್ಪಿ ಹಿಡಿಯುತ್ತಾನೆ.  ಅಷ್ಟರಲ್ಲಿ ಪ್ರತ್ಯಕ್ಷನಾದ ಶಿವನು ಯಮನೊಂದಿಗೆ ‘ನಾನು ಹೇಳದ ಹೊರತು ಈತನ ಪ್ರಾಣವನ್ನು ಕೊಂಡೊಯ್ಯಕೂಡದು.  ಇವನು ನನ್ನ ಪರಮ ಭಕ್ತ’ ಎಂದು ಆಜ್ಞಾಪಿಸುತ್ತಾನೆ. ಲಯ ಕಾರಕನಾದ ಶಿವನ ಅಪ್ಪಣೆ ಇಲ್ಲದೆ ಯಮನ ಕೆಲಸ ಸಾಧ್ಯವೇ ? ಯಮ ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಹಿಂತಿರುಗುತ್ತಾನೆ .ಶಿವನ ಅತ್ಯಂತ ಪರಮ ಭಕ್ತನಾದ ಮಾರ್ಕಾಂಡೇಯನ ಚಿರಂಜೀವಿ ಆಗುತ್ತಾನೆ.

ಒಮ್ಮೆ ಮಾರ್ಕಂಡೇಯ ಮಹರ್ಷಿ ಧ್ಯಾನಾಸಕ್ತನಾಗಿದ್ದ ಅವನಿಗೆ ನರನಾರಾಯಣರು ಬ್ರಾಹ್ಮರ ವಟುಗಳ ರೂಪದಲ್ಲಿ ಗೋಚರಿಸುತ್ತಾರೆ. ಅವರನ್ನು ಉಪಚರಿಸಿದ ಮೇಲೆ ನಾರಾಯಣನು ನಿನ್ನನ್ನ ‘ಬ್ರಹ್ಮಚರ್ಯೆ ಮೆಚ್ಚಿ  ಮೆಚ್ಚಿ ನಿನಗೆ ವರ ಕೊಡಲು ಬಂದಿದ್ದೇನೆ. ಏನು ಬೇಕು ಕೇಳಿಕೋ’ ಎಂದನು. ‘ನನ್ನ ತಪಸ್ಸಿದ್ಧಿಯೇ  ನಿನ್ನ ವರ್ಶನ,  ಆದರೂ ನನಗೆ ವರ ಕೊಡಬೇಕೆಂದು ನಿಮಗನಿಸಿದರೆ ನಿನ್ನ ಮಾಯಾ ಪ್ರಭಾವವನ್ನು ತೋರಿಸು’ ಎಂದನು. ನಾರಾಯಣನು ‘ತಥಾಸ್ತು’ ಎಂದು ಹೇಳಿ ನರನೊಡನೆ ಹೊರಟು ಹೋದನು. ವಿಷ್ಣು ಮಾಯೆಯನ್ನು ಕಾಣಬೇಕೆಂಬ ಕಾತರದಿಂದ ಮಾರ್ಕಾಂಡೇಯನಿದ್ದ. ಹೀಗಿರಲು ಧಾರಾಕಾರ ಮಳೆ ಸುರಿಯಲು ಪ್ರಾರಂಭವಾಗಿ ಭೂಮಿ ನೀರಿನಿಂದ ಮುಳುಗಿತ್ತು . ಎಲ್ಲ ಕಡೆ ಕತ್ತಲು ಕಳ್ಳಿ ಕವಿದು ಪ್ರಾಯದಂತೆ ಗೋಚರಿಸಿತು. ಮಾರ್ಕಾಂಡೇಯ ಮಾತ್ರ ನೀರಿನಲ್ಲಿ ತೇಲುತ್ತಿದ್ದ. ನೀರಿನ ಅಲೆ ಅಪ್ಪಳಿಸಿ ಜಲಚರಗಳು ಅವನ ಮೇಲೆ ಎರಗಿದಂತಾಯಿತು. ಅವನು ಸಮುದ್ರದಲ್ಲಿ  ಚಲಿಸುತ್ತಿದ್ದ ಸ್ವಲ್ಪ ದೂರದಲ್ಲಿ ಒಂದು ಎತ್ತರವಾದ ನೆಲ ಹಾಗೂ ಅದರಲ್ಲಿ ಒಂದು ಆಲದ ಮರ ಕಾಣಿಸಿತು. ಆ ಮರದ ಈಶಾನ್ಯ ದಿಕ್ಕಿಗಿರುವ ಒಂದು ಕೊಂಬೆಯಲ್ಲಿ ಒಂದು ದೊನ್ನೆ ಆಕಾರದ ಎಲೆಯಲ್ಲಿ ಒಂದು ದೇದೀಪ್ಯಮಾನವಾದ ಚಿಕ್ಕ ಮಗು ಮಲಗಿತ್ತು. ಆ ಮಗುವಿನ ಬೆರಳುಗಳು ಹೂವಿನ ಎಸಳುಗಳಂತಿದ್ದುವು. ಅದು ತನ್ನ ಬಲಪಾದವನ್ನು ಕೈಯಲ್ಲಿ ಹಿಡಿದು ಬೆರಳುಗಳನ್ನು ಚೀಪುತ್ತಿತ್ತು. ಅದು  ಮಹಾ ಪ್ರಳಯದಲ್ಲಿ ಏಕಾಂಗಿಯಾಗಿ ಆಕರ್ಷಕವಾಗಿ ಶೋಭಿಸುತ್ತಿದ್ದು ಮಾರ್ಕಂಡೇಯನು ನೋಡುತ್ತಿದ್ದಂತೆ ಅವನು ಚಿಕ್ಕ ಕ್ರಿಮಿಯೋಪಾದಿಯಲ್ಲಿ  ಸೆಳೆಯಲ್ಪಟ್ಟು ಮಗುವಿನ ಹೊಟ್ಟೆಯನ್ನು ಸೇರಿದ.

ಅಲ್ಲಿಯೂ ತಾನು ಹೊರಗೆ ಕಂಡ ಸಮಸ್ತರ ದೃಶ್ಯಗಳನ್ನು ಕಂಡುದಲ್ಲದೆ ಆಲದ ಮರವನ್ನು, ಮಗುವನ್ನೂ ಕಂಡ. ಅವನು  ತನ್ಮಯನಾಗಿ ನೋಡುತ್ತಿದ್ದಂತೆ ಮಗು ತನ್ನ ಉಸಿರನ್ನು ಹೊರಗೆ ಬಿಟ್ಟಾಗ ಮಾರ್ಕಾಂಡೇಯನೂ  ಹೊರಗೆ ಬಿದ್ದ. ತಕ್ಷಣ ಮಗು ಮಾಯವಾಯ್ತು. ಪ್ರಳಯವೂ ಮಾಯವಾಯಿತು. ಮಾರ್ಕಂಡೇಯ ಋಷಿಯು  ಸಮಾಧಿಯಿಂದ ಬಹಿರ್ಮುಖನಾದ. ಈ ರೀತಿ ಅವನಿಗೆ ವಿಷ್ಣು ಮಾಯೆ ದರ್ಶನವಾಯಿತು .

ಇನ್ನೊಮ್ಮೆ ಮಾರ್ಕಾಂಡೇಯನು  ತಪಸ್ಸನ್ನಾಚರಿಸುತ್ತಿದ್ದ ವೇಳೆ ಪಾರ್ವತಿ ಪರಮೇಶ್ವರ ಆಕಾಶ ಮಾರ್ಗವಾಗಿ ಹೋಗುತ್ತಿದ್ದರು. ಅವನನ್ನು ದೂರದಿಂದ ನೋಡಿದ ಪಾರ್ವತಿಗೆ ಅವನ ಮುಂದೆ ನಿಲ್ಲುವ ಬಯಕೆಯಾಯ್ತು. ಶಿವನಲ್ಲಿ ತಿಳಿಸಲಾಗಿ ಅವರಿಬ್ಬರೂ ಮಾರ್ಕಾಂಡೇಯನ ಮುಂದೆ ನಿಂತರು. ನಿರಾಕಾರದಲ್ಲಿ ಋಷಿಗೆ ಅವರನ್ನು ಕಾಣದಾಯಿತು. ಶಿವನು ತನ್ನ ಮಾಯೆಯಿಂದ ಅವನ ಆತನ ಹೃದಯವನ್ನು ಪ್ರವೇಶಿಸಿ ಅವರಿಗೆ ಜ್ಞಾನೋದಯವಾಗುವಂತೆ ಮಾಡಿದನು. ಕಣ್ಣು ತೆರೆದು ನೋಡಿದಾಗ  ತನ್ನ ಮುಂದೆ ಪಾರ್ವತಿ ಪರಮೇಶ್ವರರು ನಿಂತಿರುವುದನ್ನು ಕಂಡನು. ಮಾರ್ಕಂಡೇಯನು ಭಕ್ತಿಯಿಂದ ಅವರ ಅಡಿದಾವರೆಗಳಿಗೆರಗಿದನು.  ಅವನ ಭಕ್ತಿಗೆ ಸಂಪ್ರೀತನಾದ ಶಿವನು ‘ಎಲೈ ಮಹರ್ಷಿಯೆ, ನಿನ್ನಂತಹ ಸಾಧು ಸಜ್ಜನರ ದರ್ಶನ ಮಾತ್ರದಿಂದಲೇ ಮಾನವನು ಧನ್ಯನಾಗುತ್ತಾನೆ’. ಎಂದಾಗ ಪರಮೇಶ್ವರನು ಲೀಲಾ ಮಹಾತ್ಮೆಯನ್ನು ಸರಿಸುತ್ತಾ, ‘ಹೇ ಭಗವಂತ ಹರಿಭಕ್ತಿ ನನ್ನಲ್ಲಿ ಸದಾ ಸ್ಥಿರವಾಗಿರುವಂತೆ ಅನುಗ್ರಹಿಸು’ ಎಂದು ಎಂದು ಪ್ರಾರ್ಥಿಸಿದನು. ಆಗ ಪರಮೇಶ್ವರನು ‘ತಥಾಸ್ತು’ ಎಂದನು .

ಪಾಂಡವರು ವನವಾಸದಲ್ಲಿ ಕಾಮ್ಯಕ ವನಲ್ಲಿದ್ದಾಗ,  ಮಾರ್ಕಾಂಡೇಯನು  ಅಲ್ಲಿಗೆ ಬಂದು ಅವರಿಗೆ ಅನೇಕ ಪುರಾಣ ಕತೆಗಳನ್ನೂ, ಧರ್ಮ ಬೋಧನೆಗಳನ್ನೂ ಬೋಧಿಸಿದನು. ಮಾರ್ಕಾಂಡೇಯನು ಚಿರಂಜೀವಿಯಾಗಿದ್ದು ಈಗಲೂ ಜೀವಿಸಿದ್ದಾನೆ ಎಂದು ಪ್ರತೀತಿ. ಸಪ್ತ ಚಿರಂಜೀವಿಗಳಲ್ಲಿ  ಈತನೂ ಒಬ್ಬನು.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

4 Responses

  1. Anonymous says:

    ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೆ ಧನ್ಯವಾದಗಳು.

  2. ಬಿ.ಆರ್.ನಾಗರತ್ನ says:

    ಚಂದದ ಪುರಾಣ ಕಥೆ ನಿರೂಪಣೆ ಸೊಗಸಾಗಿ ಮೂಡಿ ಬಂದಿದೆ.ಅಭಿನಂದನೆಗಳು ಮೇಡಂ.

  3. ನಯನ ಬಜಕೂಡ್ಲು says:

    ಬಹಳ ಅಪರೂಪದ ವಿಚಾರಗಳು ತುಂಬಿರುತ್ತವೆ ಮೇಡಂ ನಿಮ್ಮ ಬರಹದಲ್ಲಿ.

  4. ಶಂಕರಿ ಶರ್ಮ says:

    ಅಪರೂಪದ, ವಿಶೇಷವಾದ, ಮಾರ್ಕಾಂಡೇಯನ ಕಥಾನಕವು ಬಹಳ ಚೆನ್ನಾಗಿದೆ ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: