Author: Nagaraja B. Naik
ಬೆರಗು
ಬದುಕ ನಗುವಿಗೆತುಂಬಿದೆ ನೂರು ಅರ್ಥದಿನದ ಉಳಿವಿಗೆಸಿಗುವುದು ನಾನಾರ್ಥ ಭಾವ ನಮ್ಮ ಒಲವಿಗೆಬಿಂಬ ಕಾಣುವ ಪ್ರತಿಬಿಂಬಕೆಚಿಗುರು ಹಾಸಿನ ಹಸಿರಿಗೆಮಣ್ಣ ನವ ಸಂತಸಕೆ ಬೆಳಗು ಬೆರಗಿನ ಮೌನಕಿರಣದ ಹೊಂಗಿರಣಮುಸ್ಸಂಜೆ ತುಂಬು ಗಗನಗಾಳಿ ತಂಗಾಳಿಯ ಚರಣ ಗೂಡಿಗೊಂದು ಚಿಲಿಪಿಲಿಹಾಡಿಗೊಂದು ಸರಿಗಮಶರಧಿಗೊಂದು ಮನದಲಿಮಾತೊಂದು ಅನುಪಮ ನೋಟದಿ ಉಳಿವಸಹಜತೆ ಚೆಲುವುಸಾಧನೆ ಮೆರೆದಬಾಳದು ಗೆಲುವು -ನಾಗರಾಜ...
ಬಿಡಿಸಿದ ಚಿತ್ರ
ನಗುವಿನದ್ದೊಂದುಬಿಡಿಸಿದ ಚಿತ್ರ ಬೇಕಿದೆಗೆರೆಗಳಲ್ಲಿ ನೂರು ರೂಪಬಣ್ಣ ಭಾವ ಸಮೀಪಇರುವ ನಗುವಿನದ್ದು ಯಾರದ್ದು ಬೇಕಾದರೂಆಗಬಹುದು ಅದುದೇವರಂತೆ ನಗಬೇಕುನೋವಿರದ ಭಾವದೊಳಗೆನಮ್ಮ ಅರಿವುಳಿಸಿಸಂತಸ ಸಂಭ್ರಮನಗುವಿನದ್ದೊಂದು ಸಾಕ್ಷಿಗೆಉಳಿದು ಹೋಗಬೇಕು ಮನೆ ಬಾಗಿಲ ಮೇಲೆಮನದ ಖಾಲಿತನದ ಮೇಲೆಜೀವಿತದ ನೆಲೆಯೊಂದಕ್ಕೆಮೆರುಗಾಗಿ ಒಲವಾಗಿಸೋತ ಭರವಸೆಗೆ ಗೆಲುವುನಗುವಂತೆ ಮತ್ತೆ ಮತ್ತೆಉಳಿವ ಕಾಣಿಸಬೇಕು ನೋಡಿದ ಮೊಗದಲ್ಲಿಚಿತ್ತ ಗೆಲ್ಲಿಸುವಂತೆ -ನಾಗರಾಜ ಬಿ.ನಾಯ್ಕ,ಕುಮಟಾ....
ಬಂಧ ಕಳಚಿದ ಮೇಲೆ
ನನ್ನದೇ ಸರಿ ಎಂಬ ಹುಚ್ಚುನಿನ್ನ ಬಿಡಲಿಲ್ಲಕೇಳಿಕೊಂಡು ಸುಮ್ಮನಾಗುವುದನ್ನುನಾನು ಅರಿಯಲಿಲ್ಲ ನಮ್ಮೊಳಗಿನ ಹುಚ್ಚುನಮ್ಮಿಬ್ಬರಿಗೂ ಬಿಡಲಿಲ್ಲಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುವುದು ಕಲಿಯಲಿಲ್ಲ ಹುಚ್ಚು ಕುದುರೆಯಂತೆಲಂಗು ಲಗಾಮಿಲ್ಲದೆಓಡುವುದ ಬಿಡಲಿಲ್ಲಜೊತೆಯಾಗಿ ಕುಳಿತುಸಮಸ್ಯೆಯನ್ನು ಪರಿಹರಿಸಿಕೊಳ್ಳಲಿಲ್ಲ ಅರ್ಥ ಮಾಡಿಕೊಂಡರೆಎಲ್ಲವನ್ನು ಬಗೆಹರಿಸಬಹುದಿತ್ತಲ್ಲಹೊಂದಾಣಿಕೆಯ ಮನಸ್ಥಿತಿಯಾರಲ್ಲೂ ಇರಲಿಲ್ಲ ನಾನೊಂದು ತೀರನೀನೊಂದು ತೀರಎಂದು ತೀರ್ಮಾನಿಸಿದ ಮೇಲೆಯೋಚಿಸಿ ಫಲವಿಲ್ಲ ಅಹಂನ ಬಿರುಗಾಳಿಗೆ ಸಿಕ್ಕ ಮೇಲೆಬದುಕಿಗೆ...
ನೇರಾನೇರ
ಪ್ರಕೃತಿಯ ನೇರಾನೇರಮಾತುಗಳೆಲ್ಲವೂಮಳೆಯಾಗುತ್ತದೆಹೊಳೆಯಾಗಿ ಇಳೆನಗುತ್ತದೆ ಕಾಲ ಸಮಯಕ್ಕೆ ಪ್ರಕೃತಿಯ ನೇರಾನೇರಮಾತುಗಳೆಲ್ಲವೂಬಿಸಿಲಾಗುತ್ತದೆಬೆಳಕಾಗುತ್ತದೆ ಬೆಳಗುಸಂಜೆಗಳ ಅವತರಣಿಕೆಯಲ್ಲಿಮತ್ತೆ ಬದುಕಾಗುತ್ತದೆ ಪ್ರಕೃತಿಯ ನೇರಾನೇರಮಾತುಗಳೆಲ್ಲವೂಚಳಿಯಾಗುತ್ತದೆಹೂವರಳಿಸಿ ಕಾಯಾಗಿಹಣ್ಣಾಗುತ್ತದೆನೇರಾನೇರ ಆಪ್ತತೆಸೇರಿ ಎಲೆ ಹಸಿರಾಗಿಬೇರು ಮರವಾಗಿ ಎತ್ತರಕ್ಕೆಬೆಳೆದು ಬಿಡುತ್ತದೆ ಎಲ್ಲವೂ ಸರಳ ನೇರಪ್ರಶ್ನೆಗಳು ಉತ್ತರಗಳುಕಾಲದ ಸಾಗುವಿಕೆಗೆಜೊತೆಯಾದಷ್ಟು ಹಿತಇದ್ದು ಇದ್ದಂತೆ ಇರುವಜಗವದು ಆಪ್ತ -ನಾಗರಾಜ ಬಿ. ನಾಯ್ಕ , ಹುಬ್ಬಣಗೇರಿ. ಕುಮಟಾ....
ಹಕ್ಕಿ ಹಾಡೊಳಗೆ
ತರತರದ ಹಕ್ಕಿಗಳುಈ ಜಗದಿ ಉಳಿದುಬರುವ ಮೋಡವ ನೋಡಿಚಂದದಲಿ ಹಾಡಿವೆ ತಂಗಾಳಿ ತರುವ ಗಾಳಿಯಲ್ಲಿಮಳೆ ಹನಿಯ ಕರೆದುಹೇಳಿದ ಸಾಲಿನ ಹಾಡಿನಲ್ಲಿಇಳೆ ಮಣ್ಣ ಪ್ರೀತಿಯಿದೆ ಹಣ್ಣು ಚಿಗುರು ಬೇರು ಹೂವುಹಕ್ಕಿ ಹಾಡಿನ ಉಳಿವುಗೂಡೊಳಗಿನ ಆಡಿದ ಮಾತುಸಗ್ಗ ಒಲವಿನ ಸೇತು ಹಕ್ಕಿ ಹಾಡೊಳಗೆ ತುಂಬಿದೆನಾಲ್ಕು ದಿನದ ಕವಿತೆಬರೆಯದ ಮೋಡದಿ ಕುಳಿತಿದೆಹನಿ ಮಳೆಯ...
ಮಳೆಯೆಂದರೆ…….
ಮಳೆಯೆಂದರೆ ಹಾಗೆಬಚ್ಚಿಟ್ಟುಕೊಳ್ಳುವ ಮನಸುಹನಿ ಹನಿಯಾಗಿ ಬಿದ್ದುಇಳೆ ತುಂಬುವ ಕನಸು ಓಡುವಾ ಮೋಡದಲ್ಲಿನೀರ ಹನಿಗಳ ತಕದಿಮಿತತಂಗಾಳಿ ಅಲೆಯಲ್ಲಿತುಂತುರು ಮಳೆ ಕುಣಿತ ಹಸಿರೊಡೆವ ಹಸಿರಲಿ ತಂಪುಸೂಸುವ ತಳಿರುಕಾನನದ ಎಡೆಯಲ್ಲಿ ಕಂಪುತುಂಬಿದ ಉಸಿರು ಮಣ್ಣ ಕಣ ಕಣದಿನವಿರು ಭಾವದ ತನನಗಾಳಿ ಗಂಧದ ನೆಲದಿನಗುವ ಮೊಗದ ನಯನ ಜೀವಜಾಲದ ನೆರವಿಗೆಮಳೆ ಹನಿಗಳ ಹಾಡುಜೀವ...
ಚೆಂದಕ್ಕೊಂದು……
ಚೆಂದಕ್ಕೊಂದು ಮಲ್ಲಿಗೆ ಗಿಡಜಾಗ ಇರುವಲ್ಲಿ ನೆಟ್ಟು ಬಿಡೋಣಸುಮ್ಮನೆ ಹಸಿರು ಹೆಚ್ಚಿಚಿಗುರಿತು ಮತ್ತೆ ಮತ್ತೆಕಾಲದಲ್ಲೊಮ್ಮೆ ಹೂ ಬಿಟ್ಟುನಗುತಾ ನಿಂತು ಕರೆದೀತು ಸುಮ್ಮನೇ ನಿಂತು ಹಗುರಾಗೋಣಅದರ ಚೆಲುವು ನಗುವಿಗೆಮಣ್ಣಿನ ಪ್ರೀತಿಯ ಗುರುತಿಗೆಬೆಳ್ಳಗಿನ ಹೂವಿನ ಉಳಿವನುಅರಿವಾಗಿಸಿ ಬದುಕೋಣ ನೆಟ್ಟು ಬೆಳೆಸಿದ ಹಸಿರುಸಂಭ್ರಮವ ಕೊಟ್ಟೀತು ಉಸಿರಿಗೆಜೀವ ಜಾಲದ ಉಳಿವಿಗೆಆಸರೆ ಕೊಟ್ಟೀತು ಬದುಕಿಗೆ ಹಬ್ಬಿ...
ನಕ್ಕ ನಗುವೊಳು
ನಕ್ಕ ನಗುವೊಳುಬಿಂಬ ಸಂಬಂಧಮಾತಿನಷ್ಟೇ ಆಪ್ತನಗುವ ಅನುಬಂಧ ಸಣ್ಣ ಪರಿಚಯಮುಗ್ಧ ಹೃದಯಕ್ಕೆಪಾತ್ರ ಪರಿಭಾಷೆಮನದ ಮೌನಕ್ಕೆ ಉಳಿವ ಸ್ವಾನುಭವಪ್ರಖರ ಬೆಳಕುನಗುವ ಅಲೆಗಳಕುಣಿತ ಚುರುಕು ನೋವಿಗೂ ಸಾಂತ್ವಾನನಲಿವಿಗೆ ಆಹ್ವಾನಬದುಕು ನೂತನಭವದ ಬಾಳು ಚಿಂತನ ಗೆಲುವ ಮುನ್ನುಡಿಒಲವ ಕನ್ನಡಿಚೆಲುವು ಗೆದ್ದ ಅಡಿಹೃದಯ ಭಾವದ ಗುಡಿ -ನಾಗರಾಜ ಬಿ.ನಾಯ್ಕ. ಕುಮಟಾ +5
ಉಳಿದ ಸಾಲೊಂದ
ಓದದೇ ಉಳಿದ ಸಾಲೊಂದಇನ್ನೂ ಓದಬೇಕಿದೆಆಡದೇ ಉಳಿದ ಮಾತೊಂದಕೂತು ಆಡಬೇಕಿದೆ ಎಂದೂ ಕೇಳದ ಕಥೆಯೊಂದಪಾತ್ರವಾಗಿ ನೋಡಬೇಕಿದೆಎಂದೂ ಬಿಡಿಸದ ಚಿತ್ರವೊಂದನಾವೇ ಬಿಡಿಸಬೇಕಿದೆ ಮತ್ತೆ ಬರುವ ಮಳೆಗೆಸುಮ್ಮನೆ ಕಾಯಬೇಕಿದೆಬೀಸುವ ಚಳಿಗಾಳಿಗೆತಲೆ ಎತ್ತಿ ನಿಲ್ಲಬೇಕಿದೆ ಸುಡುವ ಬಿಸಿಲಿಗೆಮರದ ನೆರಳು ಬೇಕಿದೆದುಡಿವ ಅರಿವಲ್ಲಿಬೆವರು ದಣಿಯಬೇಕಿದೆ ಹಸಿರು ಬೇರಲ್ಲಿಉಸಿರು ಕಾಯಬೇಕಿದೆಪ್ರೀತಿ ಒಲವಲ್ಲಿದಿನವ ಕಳೆಯಬೇಕಿದೆ. -ನಾಗರಾಜ ಬಿ.ನಾಯ್ಕ,...
ನಿಮ್ಮ ಅನಿಸಿಕೆಗಳು…