ಮರೆತ ಪದಗಳು
ಜೀವ ಜೀವಕೂ
ಬದುಕುವ ಸೂಕ್ಷ್ಮಗಳು
ಅದರದೇ ಹಾದಿ ಬೀದಿಗಳು
ಹಕ್ಕಿಗೂ ಉಂಟು ಹಸಿವು
ಚಿಟ್ಟೆಗೆ ಉಂಟು ಬಯಲು
ಪರಿಸರದ ಜೊತೆ ನಂಟು
ಒಂದಿಷ್ಟು ಒಲವು ಸೇರಿ
ಬೇಕಷ್ಟು ಪ್ರೀತಿಯೊಲವು
ಮಣ್ಣ ಹಗುರ ಭಾವದಿ
ಚಂದದ ಆಕೃತಿ ಸುಮ್ಮನೆ
ಸಂಬಂಧವಿಲ್ಲದ ಪದಗಳ
ಜೊತೆ ನಿಂತ ಸಾಲು
ಭಾವಗಳ ಸೆಳೆತ ಅಷ್ಟೇ
ಎಲ್ಲವೂ ತೇಲುವ ದೋಣಿಯಂತೆ
ಚಲಿಸಿದರೆ ಸುಗಮ
ಅದರ ನಿತ್ಯದ ಪಯಣ
ಮರೆತ ಪದಗಳ ಬಳಕೆ
ಮತ್ತೆ ಜೀವಂತಿಕೆ ಜಗಕ್ಕೆ
ಬಳಸಿದರೆ ಹಗುರ
ಉಳಿಸಿದರೆ ಮಣ್ಣ ಸಾರ
-ನಾಗರಾಜ ಬಿ.ನಾಯ್ಕ, ಹುಬ್ಬಣಗೇರಿ,ಕುಮಟಾ
ಚೆನ್ನಾಗಿವೆ ಭಾವ, ಆಶಯ ಪೂರ್ಣ ಕವಿತೆ,,
ಧನ್ಯವಾದಗಳು
ಚೆನ್ನಾದ ಕವಿತೆ..
ಧನ್ಯವಾದಗಳು
ಸೊಗಸಾದ ಭಾವಪೂರ್ಣ ಕವನ.
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು
ಚಂದದ ಅರ್ಥಪೂರ್ಣ ಕವಿತೆ. ಅಭಿನಂದನೆಗಳು ನಿಮಗೆ.
ಧನ್ಯವಾದಗಳು