Author: Vidya Venkatesh
ನಾ ಬರೆದ ಕವನ ..
ನಾ ಬರೆದ ಕವನ ನನ್ನದಲ್ಲ – ನನ್ನದು ಮಾತ್ರವಲ್ಲ ನನ್ನಂತೆ ಇರುವ ಮನಸುಗಳದು ನೋವಿಗೆ ಕಂಬನಿ ಹರಿಸುವುದ ಬಿಟ್ಟು ನನ್ನಂತೆ ಕವನ ಕಟ್ಟಿ ನೋವ ಮರೆಯುವ ಗುಟ್ಟು ತಿಳಿಯದ ಮೃದು ಮನದ ಮಾನಿನಿಯರು, ಅದಕ್ಕೆಂದೆ ನಾ ಬರೆವೆ ಕವನಗಳಾ,,, ಈ ಕವನಗಳು ನನ್ನದಲ್ಲ ನನ್ನದು ಮಾತ್ರವಲ್ಲ,,, ನನ್ನ...
ಅಸ್ತಿತ್ವ
ನಿನ್ನ ಮನದ ಸುತ್ತ ಸುಳಿದು ಸೆಳೆವುದು ಮೋಹಗಳ ಮಾಯ ಜಿಂಕೆ ಮಾನಿನಿಯರೆ ಜೋಕೆ,,,, ವಶವಾದೆಯಾದರೆ ನೀನದಕೆ ನೀನಾಗುವೆ ಸೀತೆ,,! ಅರೆಗಳಿಗೆಯ ಚಂಚಲತೆಗೆ ತೆತ್ತಬೆಲೆ,,,,,,,,! ಲೋಕೋದ್ಧಾರಕ ರಾಮನ ಮಡದಿಯಾದರು ಮೆರೆಯಲಾಗಲಿಲ್ಲ ಲವಕುಶರ ತಾಯಿಯಾದರು ಸಿರಿಯ ತೊರೆಯಬೇಕಾಯಿತ್ತಲ್ಲ,,,, ಮಮತೆಯ ಮರೆಯಬೇಕಾಯಿತ್ತಲ್ಲ,,,, ಹಲ ರೂಪದಲ್ಲಿ ಬಲೆ ಬೀಸಿ ಕಾಯುವುದು ವಿಧಿ,,,,, ನಿನ್ನ...
ಸ್ವಗತ
ಜಗತ್ತಿಗಾಗಿ ಬರೆಯಲಿಲ್ಲ ಜನರಿಗಾಗಿ ಬರೆಯಲಿಲ್ಲ ನನ್ನೊಳಗಿನ ನನಗಾಗಿ ಬರೆಯುತ್ತಿರುವೆ, ನನಗೆ ನಾನು ತಿಳಿಯಬೇಕಿತ್ತು ನನ್ನನ್ನು ನಾನು ತಿದ್ದಿಕೊಳ್ಳಬೇಕಿತ್ತು ನನಗೆ ನಾನು ನಿರೂಪಿಸಿಕೊಳ್ಳಬೇಕಿತ್ತು ಸೋಲುಗಳ ಹಂಚಿಕೊಳ್ಳಲು ಗೆಲುವುಗಳ ಬಣ್ಣಿಸಿಕೊಳ್ಳಲು ಕಾಣಿಸಲಾಗದ ಕಂಬನಿಯ ಕರಗಿಸಿಕೊಳ್ಳಲು ನನಗಾಗಿ ನಾನು ಬರೆಯುತ್ತಿರುವೆ ಯಾರನ್ನೋ ಮೆಚ್ಚಿಸುವ ಬಯಕೆಯಿಲ್ಲ ಛಂದಸ್ಸು ಗಣಗಳ ಪರಿಚಯವಿಲ್ಲ ಪ್ರಶಸ್ತಿಗಳ ಹಂಗಿಲ್ಲ...
ನಿಲ್ಲದಿ ಹೆಣ್ಣಿನ ದಮನ
ಬರೆದರೆಷ್ಟೊ ಜನ ಬರೆದರೆಷ್ಟೋ ಸಾಹಿತ್ಯ ಕತೆ – ಕವನ – ಲೇಖನ ಆದರೂ ನಿಲ್ಲಲಿಲ್ಲ ಹೆಣ್ಣಿನ ಅಸ್ತಿತ್ವಕ್ಕೆ ಅವಮಾನ ಎಲ್ಲೆಲ್ಲೂ ಹೆಣ್ಣಿನ ಪ್ರಗತಿಗೆ ಹೊಸ ಹೊಸ ವಿಚಾರ,ಚರ್ಚೆ, ಅದರೂ ತಪ್ಪಲಿಲ್ಲ ಹೆಣ್ಣಿನ ಮೇಲಿನ ಅತ್ಯಾಚಾರ, ಹೆಣ್ಣಿನಿಂದೆಲ್ಲವನ್ನು ಪಡೆಯುತ್ತಾರೆ, ಮತ್ತೆ ಮುಂದುವರಿಯದಂತೆ ತಡೆಯುತ್ತಾರೆ, ಬೆಳೆಯದಂತೆ ಬಂಧಿಸಿಡ ಬಯಸುತ್ತಾರೆ, ಬರೆಯುತ್ತಲೇ...
ಬದುಕು…
ನಾವು ಬದುಕಿನೊಳಗೊ.. ನಮ್ಮಿಂದ ಬದುಕೊ… ಎಂದೆಲ್ಲಾ ಚಿಂತಿಸದಿರು ಮನವೇ, ನಡೆಸಿದಂತೆ ನಡೆಯಬೇಕು ಮನ ನುಡಿಸಿದಂತೆ ನುಡಿಯಬಾರದು ಎಲ್ಲವೂ ಒಳಗೆ.. ಒಳಗೆ.. ಒಳಗೆ.. ಸತ್ಯವ ಮಿಥ್ಯವೆಂದು ಭ್ರಮಿಸಬಹುದು ಮಿಥ್ಯವೇ ಜೀವನವ ನಡೆಸಬಹುದು ಚಕ್ರದ ಉರುಳುವಿಕೆಯೊಂದಿಗೆ ಉರುಳುತ್ತಿರಬೇಕಷ್ಷೇ… ಕೆಸರಲ್ಲಿದ್ದರು ಕಮಲ ಅರಳದೆ ಉಳಿದೀತೆ? ಕಾಡಾದರು ಮಲ್ಲಿಗೆಯ ಸೌಗಂಧಕೆ ಕೊರತೆಯೇನಾದರು ಇದ್ದೀತೆ…...
ನಿಮ್ಮ ಅನಿಸಿಕೆಗಳು…