ಅಸ್ತಿತ್ವ
ನಿನ್ನ ಮನದ
ಸುತ್ತ ಸುಳಿದು ಸೆಳೆವುದು
ಮೋಹಗಳ ಮಾಯ ಜಿಂಕೆ
ಮಾನಿನಿಯರೆ ಜೋಕೆ,,,,
ವಶವಾದೆಯಾದರೆ ನೀನದಕೆ
ನೀನಾಗುವೆ ಸೀತೆ,,!
ಅರೆಗಳಿಗೆಯ
ಚಂಚಲತೆಗೆ ತೆತ್ತಬೆಲೆ,,,,,,,,!
ಲೋಕೋದ್ಧಾರಕ ರಾಮನ
ಮಡದಿಯಾದರು ಮೆರೆಯಲಾಗಲಿಲ್ಲ
ಲವಕುಶರ ತಾಯಿಯಾದರು
ಸಿರಿಯ ತೊರೆಯಬೇಕಾಯಿತ್ತಲ್ಲ,,,,
ಮಮತೆಯ ಮರೆಯಬೇಕಾಯಿತ್ತಲ್ಲ,,,,
ಹಲ ರೂಪದಲ್ಲಿ ಬಲೆ ಬೀಸಿ
ಕಾಯುವುದು ವಿಧಿ,,,,,
ನಿನ್ನ ಬೀಳಿಸಲು,
ಕೆಣಕಿ ಕೆದಕಿ ಕರೆಯುವುದು
ನಿನ್ನ ಸೋಲಿಸಲು,
ಎಚ್ಚರ ತಪ್ಪಿದೆಯಾದರೆ
ನಿನ್ನನ್ನು ನೀನು ಮರೆತಂತೆ,,,,!
ನಿನ್ನ ಅಸ್ತಿತ್ವ
ನಿನ್ನ ತೊರೆದಂತೆ,,,,!
– ವಿದ್ಯಾ ವೆಂಕಟೇಶ್
ಮನ ಮುದ ನಿಡಿದ ಕವನ
ವಂದನೆಗಳು
ವಿದ್ಯಾ
ಅರ್ಥಪೂರ್ಣವಾದ ಕವಿತೆ.ಅಭಿನಂದನೆಗಳು ಸೋದರಿ.
ಧನ್ಯವಾದಗಳು
ಅಕ್ಕಾ
ವಿದ್ಯಾ
ಸುಂದರವಾಗಿದೆ ಕವಿತೆ
ಧನ್ಯವಾದಗಳು
Beautifully said!!!
ಧನ್ಯವಾದಗಳು
ಚೆಂದದ ಕವನ
ಧನ್ಯವಾದಗಳು ಮೇಡಂ
ಅರೆಘಳಿಗೆ ಮೈ ಮರೆತರೂ ವನಿತೆಯು ತೆರಬೇಕಾದ ಬೆಲೆ ಎಷ್ಟೆಂದು ತಿಳಿಸುವ ಸೊಗಸಾದ ಭಾವನಾತ್ಮಕ ಕವನ.
ಇದು ಕಲ್ಪನೆಯಿಂದ ಬರೆದ ಕವನವಲ್ಲ,
ನಿಜ ಜೀವನದಲ್ಲಿ ನಾ ಕಂಡ ಸತ್ಯ ಕತೆಯಿಂದ ಮೂಡಿ ಬಂದ ಕವನ