ಬೆಳಕು-ಬಳ್ಳಿ

ನಾ ಬರೆದ‌ ಕವನ ..

Share Button

ನಾ ಬರೆದ ‌ಕವನ
ನನ್ನದಲ್ಲ –  ನನ್ನದು ಮಾತ್ರವಲ್ಲ
ನನ್ನಂತೆ ಇರುವ ಮನಸುಗಳದು

ನೋವಿಗೆ‌ ಕಂಬನಿ ಹರಿಸುವುದ ಬಿಟ್ಟು
ನನ್ನಂತೆ ಕವನ ಕಟ್ಟಿ
ನೋವ ಮರೆಯುವ ಗುಟ್ಟು
ತಿಳಿಯದ ಮೃದು ಮನದ ಮಾನಿನಿಯರು,
ಅದಕ್ಕೆಂದೆ ನಾ ಬರೆವೆ‌ ಕವನಗಳಾ,,,

ಈ ಕವನಗಳು ನನ್ನದಲ್ಲ
ನನ್ನದು ಮಾತ್ರವಲ್ಲ,,,

ನನ್ನ ದನಿ ನನ್ನದಲ್ಲ
”  ದ್ವನಿ ” ಎತ್ತಲಾರದವರ
ಮನದಾಳದಿ ಹುದುಗಿದ‌ ದನಿ
ನನ್ನಿಂದ ಧ್ವನಿಸುತ್ತಿದೆ

ನಿಮ್ಮ ಹೃದಯ ಮುಟ್ಟಲು
ಮನದ ಬಾಗಿಲು ತಟ್ಟುತ್ತಿದೆ

ಯಾರದೋ ಎದೆಯಾಳದ ವೇದನೆ
ಯಾರದೋ ಹೃದಯದ‌ ಸಂವೇದನೆ
ಕವನಗಳಾಗಿ  ನಿಮ್ಮದೆಯ ತಲುಪಲು
ನಿಮ್ಮ ಮನದ ಬಾಗಿಲು ತಟ್ಟುತ್ತಿದೆ

– ವಿದ್ಯಾ ವೆಂಕಟೇಶ್

5 Comments on “ನಾ ಬರೆದ‌ ಕವನ ..

  1. ನೀವು ಬರೆದ ಕವನ ಬಹಳ ಸೊಗಸಾಗಿದೆ. ಹೌದು ಹಲವರ ಅಂತರಂಗದ ದನಿಯಾಗಿದೆ.

  2. ಮನವ ಹೊಗಲು ಎದೆ ಬಾಗಿಲು ತಟ್ಟಿದ ಸೊಗಸಾದ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *