ಉತ್ತರ
ಪ್ರೀತಿಸಲು
ಪುರುಸೊತ್ತಿಲ್ಲದವರು ಸ್ವಾಮಿ ನಾವು
ದೊಡ್ಡ ದೊಡ್ಡ ಮನೆ ಕಟ್ಟುತ್ತೇವೆ
ಬಾಳಲು ಸಂಭಂದಗಳ
ಉಳಿಸಿ ಕೊಂಡಿರುವುದಿಲ್ಲ
ಯಾರಿಗಾಗಿ ಮನೆ…
ಯಾರಿಗಾಗಿ ಬದುಕು….
ಪ್ರೀತಿ ಭಾವವ ಅನುಭವಿಸದ ಮೇಲೆ…
ಪ್ರೀತಿಸಲು ಪುರುಸೊತ್ತಿಲ್ಲದ ಮೇಲೆ…
ಪ್ರೀತಿಗಾಗಿ ಸಮಯ ನೀಡದ ಮೇಲೆ…
ಪ್ರೀತಿಗಾಗಿ ಮನ ಮಿಡಿಯದ ಮೇಲೇ…
ಅದು ಎಂತಹ ಬಾಳು ?
ನಮ್ಮದು ಎಂತಹ ಹೃದಯ ?
ಪುರುಸೊತ್ತು ಮಾಡಿಕೊಂಡು
ನಿಮ್ಮ ಅಂತರಂಗವನ್ನು ಪ್ರಶ್ನಿಸಿಕೊಳ್ಳಿ
ಉತ್ತರವನ್ನು ಹುಡುಕಿ ಕೊಳ್ಳಿ
-ವಿದ್ಯಾ ವೆಂಕಟೇಶ್
ವಾಸ್ತವ ಜಗತ್ತಿನ ಅತ್ಯಂತ ದಾರುಣ ಪರಿಸ್ಥಿತಿ
ಧನ್ಯವಾದಗಳು
ಪ್ರಿತಿಯ ಮನಸುಗಳು ಇರಲಿ
ಧನ್ಯವಾದಗಳು
ಯಾಂತ್ರಿಕ ಬದುಕಿನ ವಿಷಾದಕರ ವಾಸ್ತವ
ವಂದನೆಗಳು
ಬಹಳ ಅರ್ಥಪೂರ್ಣವಾದ ಕವನ
ಆತ್ಮೀಯ ವಂದನೆಗಳು
ವಾಸ್ತವ ಬದುಕಿನ ಸುಂದರ ಚಿತ್ರ ಈ ಕವನ . ಅಭಿನಂದನೆಗಳು ಗೆಳತಿ.
ಬದುಕಿನ ನೈಜ ಚಿತ್ರಣ ನಿಮ್ಮ ಕವನದಲ್ಲಿದೆ
ತುಂಬಾನೇ ಚೆನ್ನಾಗಿದೆ .ಕವನ
ಪ್ರೀತಿ ಇಲ್ಲದ ಮೇಲೆ.. ಪುರುಸೊತ್ತೂ ಇಲ್ಲದ ಮೇಲೆ ಯಾಕಾಗಿ ಜೀವನ? ಬಹಳ ಅರ್ಥಪೂರ್ಣವಾದ, ಇಂದಿನ ಧಾವಂತದ ಜೀವನದ ಪರಿಗೆ ಸರಿಯಾಗಿಯೇ ಬೊಟ್ಟು ಮಾಡಿ ತೋರಿಸಿದ ರೀತಿ ಇಷ್ಟವಾಯ್ತು. ಸರಳ ಸುಂದರ ಕವನ…ಧನ್ಯವಾದಗಳು.
ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ.ಉತ್ಕರ ಹುಡಕಲೂ ಪುರುಸೊತ್ತಿಲ್ಲ ನಮಗೆ