ಬದುಕು…
ನಾವು ಬದುಕಿನೊಳಗೊ..
ನಮ್ಮಿಂದ ಬದುಕೊ…
ಎಂದೆಲ್ಲಾ ಚಿಂತಿಸದಿರು ಮನವೇ,
ನಡೆಸಿದಂತೆ ನಡೆಯಬೇಕು
ಮನ ನುಡಿಸಿದಂತೆ ನುಡಿಯಬಾರದು
ಎಲ್ಲವೂ ಒಳಗೆ.. ಒಳಗೆ.. ಒಳಗೆ..
ಸತ್ಯವ ಮಿಥ್ಯವೆಂದು ಭ್ರಮಿಸಬಹುದು
ಮಿಥ್ಯವೇ ಜೀವನವ ನಡೆಸಬಹುದು
ಚಕ್ರದ ಉರುಳುವಿಕೆಯೊಂದಿಗೆ
ಉರುಳುತ್ತಿರಬೇಕಷ್ಷೇ…
ಕೆಸರಲ್ಲಿದ್ದರು ಕಮಲ
ಅರಳದೆ ಉಳಿದೀತೆ?
ಕಾಡಾದರು ಮಲ್ಲಿಗೆಯ
ಸೌಗಂಧಕೆ ಕೊರತೆಯೇನಾದರು ಇದ್ದೀತೆ…
ಇಲ್ಲವಲ್ಲ…ಹಾಗೆಯೇ…
ನಮ್ಮ ಬದುಕು ನಮಗೆ
ಪ್ರೀತಿ ಕೊಡದವರ ನಡುವೆಯು
ನಮ್ಮತನದ ಉಳಿವಿಗಾಗಿ
ನಮ್ಮ ಬದುಕ ಗೆಲುವಿಗಾಗಿ
ಶ್ರಮಿಸೋಣ.
– ವಿದ್ಯಾ ವೆಂಕಟೇಶ್ , ಮೈಸೂರು
ಬದುಕ ನಡೆಸುವ ಬಗ್ಗೆ ಬರೆದ ಕವನ ಚೆನ್ನಾಗಿದೆ ಮೂಡಿ ಬಂದಿದೆ.ಅಭಿನಂದನೆಗಳು ಗೆಳತಿ.
ಮನದುಂಬಿದಾರೈಕೆಗೆ ಸವಂದನೆಗಳು
ತುಂಬಾ ಚೆನ್ನಾಗಿದೆ. ಎಲ್ಲೂ ನಿಲ್ಲದೆ, ಸೋಲದೆ, ಮುಂದೆ ಸಾಗುವ ಸಂದೇಶವನ್ನು ನೀಡುವ ಕವನ
ಕವನದಾಶಯ ಮನವ ಮುಟ್ಟಿದಕ್ಕೆ
ಧನ್ಯವಾದಗಳು
Nice….
ಸಹೃದಯರಿಗೆ ವಂದನೆಗಳು
Thumba arthagarbitha vadha kavana beku hennumakkalige enthadondhu spoorthi needuva kavana
ನಮಸ್ಕಾರ,
ಕವನದಾಶಯ ಮನವ ತಟ್ಟಿದ್ದಕ್ಕೆ
ಬಾವಾಭಿವಂದನೆಗಳು.
Very nice good luck
ಆತ್ಮೀಯವಾಗಿ ಧನ್ಯವಾದಗಳು
Thumb change bandede good luck
, ಧನ್ಯವಾದಗಳು ಮೇಡಂ
ಬದುಕಲ್ಲಿ ಬರುವ ಕಷ್ಟಗಳನ್ನು ಬಂದಂತೆ ಧೈರ್ಯದಿಂದ ಎದುರಿಸಿ ಮುನ್ನಡೆಯಲು ಪ್ರೇರೇಪಿಸುವ ಸಂದೇಶವನ್ನು ಸಾರುವ ಕವನ ಇಷ್ಟವಾಯ್ತು.
ಸಂದೇಶದ ಸಾರವನ್ನು ಅಥೈಸಿಕೊಂಡಿದಕ್ಜೆ ನಮನಗಳು,
ವಿದ್ಯಾ
ಬದುಕು ಬಂದಂತೆ ಸ್ವೀಕರಿಸಿ ಅದಕ್ಕೆ ನ್ಯಾಯ ಒದಗಿಸಲು , ಅನುಭವಿಸಲು ಕೊಟ್ಟ ಕರೆ ಈ ಕವನ. ಚೆನ್ನಾಗಿದೆ.
ಉತ್ತಮವಾದ ಕವನ ಧನ್ಯವಾದಗಳು
ಪ್ರಣಾಮಗಳು,,ಅಕ್ಕ.
ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತರುವ
ಎಲ್ಲರಿಗೂ ವಂದನೆಗಳು
ಕವನ ಮೆಚ್ಚುಗೆಯಾಯಿತು. ಕವನ ಆಶಯ ಸುಪರ್
Very meaningful and feel the depth in this lavanya.Keep up the good work.All the best.