ಸ್ವಗತ
ಜಗತ್ತಿಗಾಗಿ ಬರೆಯಲಿಲ್ಲ
ಜನರಿಗಾಗಿ ಬರೆಯಲಿಲ್ಲ
ನನ್ನೊಳಗಿನ ನನಗಾಗಿ
ಬರೆಯುತ್ತಿರುವೆ,
ನನಗೆ ನಾನು ತಿಳಿಯಬೇಕಿತ್ತು
ನನ್ನನ್ನು ನಾನು ತಿದ್ದಿಕೊಳ್ಳಬೇಕಿತ್ತು
ನನಗೆ ನಾನು ನಿರೂಪಿಸಿಕೊಳ್ಳಬೇಕಿತ್ತು
ಸೋಲುಗಳ ಹಂಚಿಕೊಳ್ಳಲು
ಗೆಲುವುಗಳ ಬಣ್ಣಿಸಿಕೊಳ್ಳಲು
ಕಾಣಿಸಲಾಗದ ಕಂಬನಿಯ
ಕರಗಿಸಿಕೊಳ್ಳಲು
ನನಗಾಗಿ ನಾನು ಬರೆಯುತ್ತಿರುವೆ
ಯಾರನ್ನೋ ಮೆಚ್ಚಿಸುವ ಬಯಕೆಯಿಲ್ಲ
ಛಂದಸ್ಸು ಗಣಗಳ ಪರಿಚಯವಿಲ್ಲ
ಪ್ರಶಸ್ತಿಗಳ ಹಂಗಿಲ್ಲ
ಹೃದಯ ಹಾಡುತ್ತದೆ
ಹಾಳೆ ತುಂಬುತ್ತದೆ
ನನ್ನೊಳಗಿನ
ಭಾವಾದಾತ್ಮಕ್ಕೆ ತೃಪ್ತಿ ಯಾಗಿಸಲು
ನಾ ಬರೆಯುತ್ತಿರುವೆ
– ವಿದ್ಯಾ ವೆಂಕಟೇಶ್
ಅದ್ಭುತ.. ಬರೆಯುತ್ತಿರಿ ಯಾವಾಗಲೂ ನಿಮಗಾಗಿ ನಿಮ್ಮ ಆತ್ಮ ಸಂತೋಷಕ್ಕಾಗಿ
ಧನ್ಯವಾದಗಳು
ವಾವ್…. ನನ್ನೊಳಗು ಇದೇ ಭಾವ
ಬಹುತೇಕ ಭಾವಗಳ ಬಣ್ಣ ಒಂದೇ ಅಗಿರುತ್ತದೆ ಅಲ್ಲವಾ,,,,
ವಿದ್ಯಾ
ಹೌದು ಗೆಳತಿ ಸತ್ಯವಾದ ಅಭಿಪ್ರಾಯ..ಇದು ನಮ್ಮೊಳಗೆ ಇದ್ದಾಗ ಬೇರೆಯವರ ಅಭಿಪ್ರಾಯ ಅನಿಸಿಕೆಗಳ ಗೊಡವೆ ನಮಗಿರದೆ ನಿರಾಳವಾಗಿರುತ್ತೇವೆ.ಚಂದದ ಕವನ.
Very nice
Very verygood
ಧನ್ಯವಾದಗಳು
ಎದೆಭಾರದ ಒತ್ತಡದಲ್ಲಿ ಹೊರಬಂದ ನಿಮ್ಮ ಈ ಕವಿತೆ ಅಪ್ತವಾಗಲಿದೆ ನನ್ನಂತೆ ಎಲ್ಲರಿಗೂ.ಅಭಿನಂದನೆಗಳು ನಿಮಗೆ
ಅಪಾರ ಧನ್ಯವಾದಗಳು
ಹೌದು…ಆತ್ಮ ಸಂತೋಷಕ್ಕಾಗಿ ಬರೆಯುವುದು ಹೆಚ್ಚು ಅರ್ಥವತ್ತಾಗಿರುತ್ತದೆ. ಹಿರಿ ಕವಿ ಶಿವರುದ್ರಪ್ಪನವರ “ಎದೆ ತುಂಬಿ ಹಾಡುವೆನು..” ನೆನಪಾಯ್ತು.
ಧನ್ಯವಾದಗಳು ಮೇಡಂ
ವಿದ್ಯಾ