Author: Dr.Krishnaprabha M
ಕೆಲವು ವರ್ಷಗಳ ಹಿಂದಿನ ಘಟನೆ. ನನ್ನ ಯಜಮಾನರ ಜೊತೆ ಹೋಟೆಲ್ಲಿಗೆ ಹೋಗಿದ್ದೆ. ತಿಂಡಿ-ಕಾಫಿ ಸೇವನೆಯಾದ ನಂತರ ಹೋಟೆಲ್ಲಿನ ಹೊರಗೆ ಬಂದು ನಿಂತಿದ್ದೆ. ಯಜಮಾನರಿನ್ನೂ ಬಿಲ್ ಮೊತ್ತವನ್ನು ಪಾವತಿಸುತ್ತಿದ್ದರು. ಆಗ ಓರ್ವ ವ್ಯಕ್ತಿ ಮುಗುಳ್ನಗುತ್ತಾ ನನ್ನ ಹತ್ತಿರ ಬಂದು “ಓ, ಟೀಚರ್ ನಮಸ್ಕಾರ” ಅನ್ನುತ್ತಾ ವಂದಿಸಿದಾಗ ನಾನೂ ಪ್ರತಿವಂದಿಸಿದೆ....
ಕಳೆದು ಹೋದ ದಿನಗಳು ನಮ್ಮ ಜೀವನದಲ್ಲಿ ಮತ್ತೆ ಮರುಕಳಿಸದು. ಬಾಲ್ಯದ ಆ ದಿನಗಳು, ಶಾಲೆಯಲ್ಲಿ ಸಹಪಾಠಿಗಳ ಜೊತೆ ಆಟ, ಪಾಠ, ಓಟ, ನಲಿವು, ಮುನಿಸು ಎಲ್ಲವುಗಳ ಜೊತೆ ಕಳೆದ ಮಧುರ ನೆನಪುಗಳು ಆಪ್ಯಾಯಮಾನ. ಕೆಲವೊಮ್ಮೆ ಯಾವುದೋ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿ ಕೋಪ ಮಾಡುವುದು, ಸ್ವಲ್ಪ ಹೊತ್ತಿನ ನಂತರ...
ಇಂಗು,ತೆಂಗು ಇದ್ದರೆ ಮಂಗನೂ ಚೆನ್ನಾಗಿ ಅಡುಗೆ ಮಾಡುತ್ತದೆ ಅನ್ನುವ ಮಾತು ಪ್ರತೀತಿಯಲ್ಲಿದೆ. ಮನೆಯಲ್ಲಿ ಒಂದೇ ಬಗೆಯ ತರಕಾರಿ ಇದ್ದರೂ ಅದರ ಯಾವ ಭಾಗವನ್ನೂ ಎಸೆಯದೆ ರುಚಿಕರವಾದ ತರಹೇವಾರಿ ಪದಾರ್ಥ ತಯಾರಿಸಬಹುದು. ಅಂತಹ ಜಾತಿಗೆ ಸೇರಿದ ತರಕಾರಿಗಳಲ್ಲಿ ಸೌತೆಕಾಯಿ ಸೇರಿದೆ. ದಕ್ಷಿಣ ಕನ್ನಡದವರ ಬಾಯಲ್ಲಿ ಇದು ಸೌತೆಕಾಯಿ...
“ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ…..” ಹಾಡನ್ನು ಗುನುಗುತ್ತಾ ಒಗೆಯಬೇಕಿದ್ದ ಬಟ್ಟೆಗಳನ್ನು ವಾಶಿಂಗ್ ಮೆಷೀನಿಗೆ ಹಾಕುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಎಡ ಅಂಗೈಯ ಬಳಿ ಸೂಜಿಯಿಂದ ಚುಚ್ಚಿದಂತೆ ಅನ್ನಿಸಿತು. ಏನಾಯ್ತಪ್ಪಾ ಅಂದ್ಕೊಂಡು ತಟ್ಟನೆ ನೋಡಿದಾಗ ಕಣಜಿಗವೊಂದು ಹಾರಿ ಹೋಗುತ್ತಿದ್ದುದನ್ನು ಕಂಡೆ. ಗಾಬರಿ ಆಗಲಿಲ್ಲ ನಂಗೆ. ಯಾಕೆ ಗೊತ್ತಾ? ಈ...
ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಘಟನೆ. ಅದೊಂದು ದಿನ ಬೆಳಿಗ್ಗೆ ಸ್ಟಾಫ್ ರೂಮಿನಲ್ಲಿ ಓದುತ್ತಾ ಕುಳಿತಿದ್ದೆ. ಎರಡು ದಿನಗಳಿಂದ ತರಗತಿಗಳಿಗೆ ಗೈರುಹಾಜರಾಗಿದ್ದ ನನ್ನ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ Calender ಪುಸ್ತಕದಲ್ಲಿ ನನ್ನ ಸಹಿ ಪಡೆಯಲು ಬಂದಿದ್ದ. ತಲೆ ನುಣ್ಣಗೆ ಬೋಡು ಹೊಡೆಸಿಕೊಂಡಿದ್ದ ಅವನ ಹತ್ತಿರ ಕೇಳಿದೆ...
ಜನವರಿ 23 ವಿಶ್ವ ಕೈಬರಹ ದಿನ. ಬರೆಯುವ ಸಾಮಗ್ರಿಗಳ ಉತ್ಪಾದಕರ ಸಂಘ (Writing Instrument Manufacturers Association)ದವರು 1977 ರಲ್ಲಿ ಈ ದಿನವನ್ನು ಆಚರಿಸಲಾರಂಭಿಸಿದರು. ಕೈಬರಹಕ್ಕೆ ಅದರದೇ ಆದ ಸಾಮರ್ಥ್ಯ ಹಾಗೂ ಪಾವಿತ್ರ್ಯತೆಯಿದೆ. ಕೈಯಿಂದ ಬರೆಯುವ ಪ್ರಕ್ರಿಯೆಯು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ ಅಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ...
ಸುಮಾರು ಎರಡು ವರ್ಷಗಳ ಹಿಂದಿನ ಘಟನೆ. ನನ್ನ ಸಂಬಂಧಿಕರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದೆ. ಊಟಕ್ಕೆ ತಯಾರಿಸಿದ್ದ ಪದಾರ್ಥಗಳಲ್ಲಿ ಸೊಪ್ಪಿನ ತಂಬುಳಿಯೂ ಇತ್ತು. ನನಗೋ ಸೊಪ್ಪಿನ ತಂಬುಳಿಯೆಂದರೆ ಪಂಚಪ್ರಾಣ. ಯಾವ ಸೊಪ್ಪಿನ ತಂಬುಳಿ ಎಂದು ವಿಚಾರಿಸಿದಾಗ ರಕ್ತಕಾಂತಿ ಸೊಪ್ಪೆಂದರು. ಮೊದಲ ಬಾರಿಗೆ ಆ ಹೆಸರು ಕೇಳಿದ್ದೆ. ಆ ಬಳಿಕ...
ನೋಡನೋಡುತ್ತಿದ್ದಂತೆ 2019 ಮುಗಿದೇ ಹೋಯಿತು. ಪ್ರತಿಸಲದಂತೆ ಹತ್ತು-ಹಲವು ನಿರೀಕ್ಷೆಗಳು. ಈ ವರ್ಷ ಒಳ್ಳೆಯದಾಗಿರಲಿ ಎಂಬ ಆಶಯದೊಂದಿಗೆ 2019ರ ಜೊತೆಗೆ ಹೆಜ್ಜೆಗಳನ್ನು ಹಾಕಿದ್ದೆ. ಈ ವರ್ಷದಲ್ಲಿ ನನಗೆ ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ದುಃಖ. ಮನಸ್ಸಿಗೆ ನೆಮ್ಮದಿ, ಸಂತಸ ನೀಡಿದ ಕ್ಷಣಗಳು ಹಲವಾದರೆ ಪ್ರೀತಿಪಾತ್ರರನ್ನು ಕಳೆದುಕೊಂಡ ಬೇಸರ ಇನ್ನೊಂದೆಡೆ. ನನ್ನ...
ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಪ್ರತಿಷ್ಟಿತ ಬ್ಯಾಂಕೊಂದು ಗೃಹಸಾಲ ಮೇಳವೊಂದನ್ನು ಹಮ್ಮಿಕೊಂಡಿತ್ತು. ಅಲ್ಲಿಗೆ ಬರುವ ಜನರಿಗೆ ಮನರಂಜನೆ ಸಿಗಲೆಂದೋ ಏನೋ, ಚಲನಚಿತ್ರ ಹಾಡುಗಳ ಗಾಯನ ಸ್ಪರ್ಧೆಯನ್ನು ಕೂಡಾ ಏರ್ಪಡಿಸಲಾಗಿತ್ತು. ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗ ಹಾಗೂ ಆರನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳನ್ನು...
ಅದೊಂದು ಹಣ್ಣಿನ ಗಿಡ. ಸಣ್ಣ ಗಾತ್ರದ ಮರವೆಂದರೂ ಅಡ್ಡಿಯಿಲ್ಲ. ಬಹುಶಃ ಯಾರೂ ಅದನ್ನು ಅಲ್ಲಿ ನೆಟ್ಟದ್ದಲ್ಲ ಅನ್ನಿಸುತ್ತದೆ. ಆ ಮರಕ್ಕೆ ಮನಸೋ ಇಚ್ಛೆ ಬೆಳೆಯೋ ಸ್ವಾತಂತ್ರ್ಯವೂ ಇಲ್ಲ ಏಕೆಂದರೆ ಆ ಮರದ ಎಡಗಡೆಗೆ ಪಾಗಾರ ಗೋಡೆ, ಮುಂದುಗಡೆ ರಸ್ತೆ, ಎತ್ತರಕ್ಕೆ ಬೆಳೆದರೆ ತಾಗುವ ವಿದ್ಯುತ್ ತಂತಿಗಳು....
ನಿಮ್ಮ ಅನಿಸಿಕೆಗಳು…