Author: Dr.Krishnaprabha M
ಸುರಹೊನ್ನೆಯ ಒಡತಿ ಶ್ರೀಮತಿ ಹೇಮಮಾಲಾ ಅವರು ಪ್ರಯೋಗಾರ್ಥವಾಗಿ ಹೂವು ಎಂಬ ಪದವನ್ನು ಥೀಮಿಗಾಗಿ ನೀಡಿದ್ದಾರೆ. ಹೂವುಗಳೆಂದರೆ ಎಲ್ಲರಿಗೂ ಇಷ್ಟ. ಗಿಡದಲ್ಲಿ ಅರಳಿ ನಗುವ ವಿವಿಧ ಬಣ್ಣದ/ಸುವಾಸನೆಯ ಹೂಗಳ ಅಂದ-ಚಂದ-ವಯ್ಯಾರ ಕಂಡು ಸಂತಸಪಡುವವರು ಹಲವರಾದರೆ ಹೂವನ್ನು/ಹೂಗಳನ್ನು ಮುಡಿದು ಸಂಭ್ರಮಿಸುವರು ಹೆಂಗಳೆಯರು. ಹೂವಿನ ಸುತ್ತ ಮುತ್ತ ಅದೆಷ್ಟು ಬಾಲ್ಯದ ಅನುಭವಗಳು!ಒಂದೊಂದು...
ಸರಿಯಾಗಿ 30 ವರ್ಷಗಳ ಹಿಂದಿನ ನೆನಪು. ಸ್ನಾತಕೋತ್ತರ ಪದವಿ ಶಿಕ್ಷಣದ ಸಲುವಾಗಿ ವಿದ್ಯಾರ್ಥಿನಿ ನಿಲಯದಲ್ಲಿ ಸೇರಿಕೊಂಡಿದ್ದೆ. ಅಲ್ಲಿಯ ತನಕ ಮನೆ ಬಿಟ್ಟು, ಮನೆಯೂಟ ಬಿಟ್ಟು ಗೊತ್ತಿಲ್ಲದ ನನಗೆ ಹಾಸ್ಟೆಲ್ ಊಟಕ್ಕೆ ಒಗ್ಗಿಕೊಳ್ಳಲು ಕಷ್ಟ ಆಗಿತ್ತು. ಬೆಳಗ್ಗಿನ ತಿಂಡಿಗೆ ವಾರದಲ್ಲಿ ಎರಡು ದಿನ ದೋಸೆ ಇರುತ್ತಿತ್ತು. ಅದೊಂದು ದಿನ,...
ನಮ್ಮ ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ನಾವು ಬದುಕಿದ್ದೇವೆ ಅನ್ನುವುದು ನಿಜ ಆದರೆ ಯಾವಾಗ ಸಾಯುತ್ತೇವೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಆದರೂ ಒಳ್ಳೆಯ ಆರೋಗ್ಯದಿಂದ ದೀರ್ಘ ಕಾಲ ಬಾಳಬೇಕೆಂಬುದು ಹೆಚ್ಚಿನವರ ಅಪೇಕ್ಷೆ ಆಗಿರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತೇವೆ....
ಬೆಳಿಗ್ಗೆ ಏಳುತ್ತಿದ್ದ ಹಾಗೆಯೇ ಬಾಲ್ಯದಲ್ಲಿ ನಾವಾಡುತ್ತಿದ್ದ ಒಂದು ಆಟದ ನೆನಪಾಯಿತು. ಮೊಬೈಲ್, ದೂರದರ್ಶನ ಇಲ್ಲದ ಕಾಲ. ಪಾಠದ ಜೊತೆ ಆಟಗಳಿಗೇನು ಕಡಿಮೆ ಇರಲಿಲ್ಲ. ಒಟ್ಟಿನಲ್ಲಿ ಸಮೃದ್ಧ ಬಾಲ್ಯ ಕಳೆದ ಅದೃಷ್ಟವಂತರು ನಾವೆಂದು ಎದೆ ತಟ್ಟಿ ಹೇಳಬಹುದು. ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಂಡು, ಅದಕ್ಕೆ ತಕ್ಕುದಾದ ಹಲವು ಆಟಗಳು. ಕಲ್ಲಾಟ, ಪಲ್ಲೆಯಾಟ,...
ಈ ತರಕಾರಿಯನ್ನು ತೆಳು ಬಿಲ್ಲೆಗಳಾಗಿ ಹೆಚ್ಚಿದ ನಂತರ ತುಪ್ಪದಲ್ಲಿ ಹುರಿದು ತಯಾರಿಸಿದ ಮಜ್ಜಿಗೆಹುಳಿಯನ್ನು ತಿನ್ನದೆ ಬರೋಬ್ಬರಿ 25 ವರ್ಷಗಳ ಮೇಲಾದರೂ ಆ ರುಚಿಯ ನೆನಪಿನ್ನೂ ಮಾಸಿಲ್ಲ. ಬೇಲಿಯ ನಡುವೆ, ಪೊದೆಗಳಲ್ಲಿ ಕಂಡುಬರುವ ಕಾಡುಬಳ್ಳಿ ಕಣ್ಣಿಗೆ ಬಿದ್ದಾಗ ಅದರಲ್ಲಿ ಕಾಯಿ ಇದೆಯೇ ಅಂತ ಹುಡುಕಿ, ಸಿಕ್ಕಿದರೆ ಅದನ್ನು ಹಸಿಯಾಗಿಯೇ...
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳು. ಪರೀಕ್ಶಾ ವ್ಯವಸ್ಥೆಯಲ್ಲಿ ಕೆಲವು ಹೊಸ ಬದಲಾವಣೆಗಳಿದ್ದವು. ಏನೇನು ಬದಲಾವಣೆಗಳಾಗಿವೆ ಅಂತ ಪರೀಕ್ಷೆಯ ಉಸ್ತುವಾರಿ ಹೊತ್ತಿದ್ದ ಉಪನ್ಯಾಸಕರು ವಿವರಿಸುತ್ತಿದ್ದರು. ಅದನ್ನು ಅರ್ಥೈಸಿಕೊಂಡ, ಸಹೋದ್ಯೋಗಿಯೊಬ್ಬರು ತನಗೆ ತಿಳಿದ ವಿಷಯವನ್ನು ಮರುದಿನ ಇನ್ನು ಕೆಲವರಿಗೆ ವಿವರಿಸುತ್ತಿದ್ದರು. ಹಾಗೆ ವಿವರಿಸುವಾಗ, ಧರಿಸಿದ್ದ ಮುಖಕವಚವನ್ನು ಸರಿಸಿ, ತನ್ನ ಬೆರಳನ್ನು...
ಕಾಲೇಜಿನ ಕೈತೋಟದಲ್ಲಿ ಅರಳಿದ್ದ ಆ ಹೂವನ್ನು ಜೀವನದಲ್ಲಿ ಮೊದಲ ಬಾರಿಗೆ ಕಂಡಿದ್ದೆ. ಗಿಡಸಮೇತ ಹೂವಿನ ಚಿತ್ರವನ್ನು ಕೈಲಿದ್ದ ಮೊಬೈಲಿನಲ್ಲಿ ಸೆರೆ ಹಿಡಿದು, “ಹೂವಿನ ಚೆಲುವಿಗೆ ಮನಸೋತೆ” ಎಂಬ ಶೀರ್ಷಿಕೆಯೊಂದಿಗೆ ಹಾಕಿದ ವಾಟ್ಸಾಪ್ ಸ್ಟೇಟಸ್ ನೋಡಿ “ಇದು ಯಾವ ಹೂವು?” ಎಂದು ಕೇಳಿದವರ ಪ್ರಶ್ನೆಗೆ ಉತ್ತರ ಹುಡುಕಲು ಅಂತರ್ಜಾಲ...
ಆ ದಿನ ತಂಬಾ ಸುಸ್ತಾಗಿತ್ತು. ಮರುದಿನ ತೆಗೆದುಕೊಳ್ಳಬೇಕಾದ ತರಗತಿಗೆ ತಯಾರಿ ಮಾಡಿಕೊಳ್ಳಬೇಕಿತ್ತು. ಆದರೂ ನಿದ್ರಾದೇವಿಯ ಕರೆಯ ಸೆಳೆತವೇ ಜಾಸ್ತಿಯಾಗಿ, ಬೆಳಿಗ್ಗೆ ಬೇಗ ಎದ್ದು ಓದಿದರಾಯ್ತು ಅಂದುಕೊಂಡು ರಾತ್ರಿ 9 ಘಂಟೆಗೇ ಮಲಗಿಬಿಟ್ಟೆ. ಇನ್ನೇನು ನಿದ್ದೆ ಬರುತ್ತಿದೆ ಅನ್ನುವಾಗಲೇ ನನ್ನ ಚರ ದೂರವಾಣಿ ಮೊಳಗಲಾರಂಭಿಸಿತು. ಇಷ್ಟು ಹೊತ್ತಿಗೆ ಕರೆ...
ಎಂದಿನಂತೆ ಆ ದಿನವೂ ಬೆಳಿಗ್ಗೆ ಕಾರು ಚಲಾಯಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಕಾಲೇಜಿನ ಸಮೀಪವೇ ಇರುವ ಒಂದು ಸಣ್ಣ ತರಕಾರಿ ಅಂಗಡಿ ತೆರೆಯುತ್ತಿದ್ದರು ಅದರ ಮಾಲೀಕರು. ನನ್ನ ಪಾಲಿಗೆ ಬಹು ಅಪರೂಪವಾಗಿದ್ದ ತಿಳಿ ಗುಲಾಬಿ ಬಣ್ಣ ಮಿಶ್ರಿತ ಬಿಳಿಯ ಜಂಬು ನೇರಳೆ ಹಣ್ಣುಗಳು ಸಣ್ಣ ಬುಟ್ಟಿಯಲ್ಲಿ ವಿರಾಜಮಾನವಾಗಿದ್ದವು. ಬಹುಶಃ...
ಹೂವುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಹೆಂಗಳೆಯರಿಗೆ ಹೂವುಗಳೆಂದರೆ ಅತೀವ ಪ್ರೀತಿ. “ಹೂವು ಚೆಲುವೆಲ್ಲಾ ತಂದೆಂದಿತು, ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಿತು” ಎಂಬ ಹಾಡೇ ಇದೆಯಲ್ಲವೇ? ನೋಡುಗರ ಕಣ್ಣುಗಳಿಗೆ ಸೌಂದರ್ಯ ಉಣಬಡಿಸುವ ಹೂವುಗಳ ವೈವಿಧ್ಯ ಲೋಕವೇ ಇದೆ. ಕೆಲವು ಹೂವುಗಳು ಬಣ್ಣ ಮಾತ್ರದಿಂದ ಗಮನ ಸೆಳೆದರೆ,...
ನಿಮ್ಮ ಅನಿಸಿಕೆಗಳು…