Author: Vasundhara K.M.

2

 ‘ಬಾಲಂಗೋಚಿ’

Share Button

ಹಾರುವುದು ಎತ್ತರಕೇರಿದವರ ಬಾಲ ಹಿಡಿದು ಒಂದು ಬಾಲಂಗೋಚಿ..!! ಮೇಲೇರಿದೆನೆಂಬ ಗರ್ವದಲಿ ಹಾರಾಡುವುದು ಬುಡವಿಲ್ಲದೆ, ತಲೆಯಿಲ್ಲದೆ… . ಗಾಳಿಗೆ ಪಟಪಟ ಬಡಿಯುತ ಬಡಬಡ ಹುರುಳಿಲ್ಲದ ಮಾತಾಡುತ… . ಇತ್ತ ಅತ್ತ ಸಂದಿಗೊಂದಿ ತೂರುತ, ತನ್ನಸ್ತಿತ್ವ ಸಾಬೀತುಗೊಳಿಸುವ ಜರೂರತ್ತಿನಲಿ … . ಹಾರಾಡಿದೆ ಸಮಯದ ಬೊಂಬೆ…!!., –ವಸುಂಧರಾ ಕೆ. ಎಂ.,...

4

ಒಂದು ಮರದಿಂದ ಕಲಿಯಬೇಕಿದೆ….

Share Button

ಕತ್ತಲೆಯ ಗರ್ಭದಲ್ಲಿ ಹುಗಿದು ಹಾಕಿದರೂ, ಕಾದು ಕಾದು ಸಮಯಕ್ಕೆ ಸರಿಯಾಗಿ ಮೇಲೆದ್ದು ಬರುವ  ಬಗೆಯನು…. , ಕಡಿಯುವ, ಕತ್ತಿ ಸವರುವ ಮಂದಿ ಪಕ್ಕದಲ್ಲಿದ್ದರೂ; ತಂಪು ಗಾಳಿ ತೂಗಿಕೊಂಡು, ಹಕ್ಕಿ ಅಳಿಲುಗಳ ಬಳಿಗೆ ಕರೆಯುವ ಒಲವನು…. . ‘ಕಳೆ’ಯ ಗೆಳೆತನದೊಡನೆ ಕಳೆಯದೇ ಬಾಳಲು; ಮೇಯಲು ಬರುವ ಪಶುಗಳ ಸಾಲುಸಾಲಿನ ನಡುವೆ...

4

ಆಗುವಾಸೆ…..

Share Button

ಹಕ್ಕಿಯಾಗಲೆ ಆಗಸವನಳೆಯಲು, ಚುಕ್ಕಿಯಾಗಲೆ ಆಗಸವನಾಳಲು? ಅಳೆವ ಆಳ್ವ ಮಾತಂತಿರಲಿ, ಹಾಳಾಗದೆ ಉಳಿಯಬೇಕು.. ಮೋಡವಾಗಲೆ ಮಳೆ ಸುರಿಸಲು, ಆವಿಯಾಗಿ ಸಾಗರನ ಎದೆಯಿಂದ? ಹನಿಯಾಗುವುದು, ಮಳೆಯಾಗುವುದು ಅಂತಿರಲಿ, ನದಿಯಾಗಿ ಉಳಿಯಬೇಕು… ಹೂವಾಗಲೆ ಜಗದ ಮೆಚ್ಚುಗೆಗೆ, ಹಣ್ಣಾಗಲೇ ಮತ್ತೆ ರುಚಿಯ ಹೆಚ್ಚುಗೆಗೆ? ಹೂವಾಗಿ ಹಣ್ಣು ಆಗುವುದು ಅಂತಿರಲಿ ಮಾಗಬೇಕು – ಮರವಾಗಬೇಕು.....

4

ಒಂದು ಚಹಾ ಕುಡಿದ ಹಾಗೆ

Share Button

ನಿನ್ನೊಲುಮೆಯೆಂದರೆ, ಒಂದು ಚಹಾ ಕುಡಿದ ಹಾಗೆ.. ಗುಟುಕರಿಸಿ ನಾಲಗೆ ಮೇಲುಳಿದ ಸಕ್ಕರೆಯ ಸಿಹಿ, ಬಾಯ್ತುಂಬಿ ಅಡರುವ ಏಲಕ್ಕಿಯ ಘಮ ಘಮ.. ನಿನ್ನೊಲುಮೆ ಎಂದರೆ, ನಡುಗುವ ಚಳಿಗೆ ಅಂಗೈ ನಡುವೆ ಚಹಾದ ಬಟ್ಟಲು ಹಿಡಿದಾಗ ತಾಕುವ ಬಿಸಿಯ ಬಿಸುಪದು ವಿರಹದಲಿ ಕಾಡುವ ನೆನಪಿನ ಧಗೆ… ನಿನ್ನೊಲುಮೆ ಎಂದರೆ, ಉರಿಬೆಂಕಿಯ...

2

ನಿಮ್ಮ ಉಸಾಬರಿಗೆ ನಮಗೆ ಮನಸ್ಸಿಲ್ಲ..!

Share Button

, ನಿಮ್ಮ ಯಾವುದಕ್ಕೂ ಮನಸ್ಸಿಲ್ಲ ನಮಗೆ. ಸೀತೆ ನಿನಗೇನಾಯ್ತು, ದ್ರುಪದೆ ಏಕೆ ಹೀಗಾಯ್ತು…? ಹೀಗೆಲ್ಲವನು ನಾವು ಕೇಳಬೇಕೆಂದು ಬಯಸಬೇಡಿರಿ, ಕ್ಷಮಿಸಿ. . ಪಯಣಿಸಲು ನೂರು ದಾರಿಗಳು ತೆರೆದೇ ಇದ್ದರೂ, ಟಿಕೇಟು ತೆಗೆದುಕೊಂಡು ಬರುವ ಗಂಡಸು ಮಕ್ಕಳಿಗಾಗಿ, ಅವಕಾಶಗಳ ಹೆಬ್ಬಾಗಿಲ ಬಳಿ ಸರದಿಯಂತೆ ಕಾದು ಕುಳಿತ ಮುಗ್ಧರ ಉಸಾಬರಿಯೇ ನಮಗೆ ಬೇಕಿಲ್ಲ.. ....

2

ಸ್ವಪ್ನದ ಸುಪ್ತ ಕನವರಿಕೆ

Share Button

ಮಬ್ಬು ಕತ್ತಲಿನಲಿ ಎದ್ದು ಹುಡುಕಾಡುವುದು ಜೀವ, ನಿದ್ದೆ ಕಣ್ಣಿನಿಂದ ತಪ್ಪಿಸಿಕೊಂಡ ಸ್ವಪ್ನವು ಅದೆಲ್ಲಿ  ಹೋಯಿತು ಈಗಲೀಗ..?! . ಅನುಗಾಲದ ಒಲವನು ಧಾರೆ ಎರೆಯುವ ಮಾತುಗಳನಾಡುತ್ತಾ ನಿಲ್ಲಿಸಿಕೊಳಬೇಕಿತ್ತು ಮತ್ತೊಂದರೆ ಕ್ಷಣವಾದರೂ, ಬರಲಾರದಿರುವ ಹುಸಿ ಶಂಕೆಯಾದರೂ ಕಾಡುತ್ತಿರಲಿಲ್ಲ ಆಗಲೀಗ… . ಮಾಯಕದ ಸುಳಿಯಲೊಂದು ಕನಸು ಮೋಡಿ ಹಾಕಿತ್ತು ಹೊರಗೆ ಕಾಣದಂತೆ,...

3

ಅಮ್ಮನಾಗಿ ಉಳಿದೂ ಬೆಳೆಯುವುದೆಂದರೆ…, 

Share Button

 ‘ಈ ಶತಮಾನದ ಮಾದರಿ ಹೆಣ್ಣೆಂದು’ ಎಷ್ಟೇ ತುತ್ತೂರಿ ಊದಿಕೊಂಡರೂ ಅನಾದಿ ಜವಾಬ್ದಾರಿಗಳನ್ನು  ನಿರ್ವಹಿಸುವುದರ ಜೊತೆಯಲ್ಲೇ ಪ್ರಸ್ತುತಕ್ಕೆ ತನ್ನನ್ನು ಸಮರ್ಥವಾಗಿ ಸಾಬೀತುಪಡಿಸಿಕೊಳ್ಳುವ ತುರ್ತು ಇಂದಿನ ಹೆಣ್ಣಿಗಿದೆ.ಅದರಲ್ಲಿಯೂ ವೃತ್ತಿ ಪ್ರವೃತ್ತಿಗಳೊಂದಿಗೆ ತಾಯ್ತನದ ಜವಾಬ್ದಾರಿಗಳನ್ನು ನಿರ್ವಹಿಸಬೇಕಿರುವ ಎಳೆಯ ಅಥವಾ ಮಧ್ಯವಯಸ್ಸಿನ ಅಮ್ಮನಿಗಿರುವ ಸವಾಲು ನೂರಾರಿವೆ.   ಈಗಿನ ಅಮ್ಮ ಒಂದೆರಡು ತಲೆಮಾರಿನ...

4

‘ಮರಳಿ ಬಾ, ಮತ್ತೊಂದವತಾರದಲಿ’

Share Button

ಹೇ ದೇವಾ… ಹತ್ತವತಾರಗಳಲಿ ಮತ್ತೊಮ್ಮೆಯೂ ಹೆಣ್ಣಾಗದ ನಿನಗೆ ಬೇಕು – ಹೊಸದೊಂದವತಾರ ; ಹೆಣ್ಣ ಅರಿಯಲು. ನಿನ್ನ ನಾಟಕ ಶಾಲೆಗೆ ನೀನೇ ಸೂತ್ರ, ನಿನ್ನದೇ ಮುಖ್ಯ ಪಾತ್ರ. ಉಳಿದ ಖಾಲಿಯ ತುಂಬಲು ತಂದ ಹಾಗಿದೆ ಇತರೆ ಸ್ತ್ರೀ ಪಾತ್ರ.. ಒಂದೊಂದು ಗುಣಗಳಿಗೆ ಬೇಕಾಯ್ತು ಒಬ್ಬೊಬ್ಬ ದೇವ ! ಸೃಷ್ಟಿಗೊಬ್ಬ ಸ್ಥಿತಿಗೊಬ್ಬ ಲಯಕ್ಕೊಬ್ಬ..,  ಅಬ್ಬಬ್ಬಾ..!! ಹೆಣ್ಣಿಗೆ ಬೇಕಿಲ್ಲ...

4

‘ನಮ್ಮಷ್ಟಕ್ಕೆ ನಾವು’

Share Button

ಪಟ್ಟಣದಲ್ಲೀಗ ಗೆಳೆಯರೇ ಸಿಕ್ಕುವುದಿಲ್ಲವಂತೆ..! ನಮ್ಮ ಹಾಗೆ ಕಲೆಯಲು, ಕೂಡಿ ಆಡಲು… ಮಾತೂ ಕೂಡ ತುಟ್ಟಿಯಂತೆ ಅಲ್ಲಿ..! ಮೊಬೈಲ್ ಗಳು ಅದಕ್ಕೇ ಅಷ್ಟು ದುಬಾರಿ..! ಸ್ನೇಹ ಮಂಟಪದ ನೆರಳಿನಡಿ ಕೊಂಚ ಹೊತ್ತು ಕೂರುವ ಬಾ ಗೆಳೆಯ…. . ಇಲ್ಲಿ ಸಮಯಕ್ಕೇನೂ ಅವಸರವಿಲ್ಲ. ಅದೇ ಗದ್ದೆ ,ಹೊಲ, ತೋಟಗಳು ಕಾದಾವು ನಮಗೆ.....

Follow

Get every new post on this blog delivered to your Inbox.

Join other followers: