ಸ್ವಪ್ನದ ಸುಪ್ತ ಕನವರಿಕೆ
ಮಬ್ಬು ಕತ್ತಲಿನಲಿ ಎದ್ದು
ಹುಡುಕಾಡುವುದು ಜೀವ,
ನಿದ್ದೆ ಕಣ್ಣಿನಿಂದ ತಪ್ಪಿಸಿಕೊಂಡ
ಸ್ವಪ್ನವು ಅದೆಲ್ಲಿ ಹೋಯಿತು
ಈಗಲೀಗ..?!
.
ಅನುಗಾಲದ ಒಲವನು ಧಾರೆ
ಎರೆಯುವ ಮಾತುಗಳನಾಡುತ್ತಾ
ನಿಲ್ಲಿಸಿಕೊಳಬೇಕಿತ್ತು ಮತ್ತೊಂದರೆ
ಕ್ಷಣವಾದರೂ, ಬರಲಾರದಿರುವ
ಹುಸಿ ಶಂಕೆಯಾದರೂ ಕಾಡುತ್ತಿರಲಿಲ್ಲ
ಆಗಲೀಗ…
.
ಮಾಯಕದ ಸುಳಿಯಲೊಂದು ಕನಸು
ಮೋಡಿ ಹಾಕಿತ್ತು ಹೊರಗೆ ಕಾಣದಂತೆ,
ಮುಳುಗು ಹಾಕಿ ಮೇಲೆದ್ದಾಗ
ಚಕ್ರರತ್ನದ ಅಲೆಅಲೆಗಳೂ ತೇಲಿ
ದಡವ ಮುಟ್ಟುವಷ್ಟರಲ್ಲಿ
ಮಂಗಮಾಯ…
.
ಸಪನವೆಂದರೆ ಸೊಗಸು, ಕನಸೆಂದರೊಂದು
ಮೋಹ.. ಬಾಯಾರಿಕೆಯಲಿ ತುಟಿ
ಸವರಿಕೊಂಡ ಜೇನ ಹನಿಯಂತೆ,
ಒಡಲಾಳದ ದಾಹ ಹಾಗೇ
ಉಳಿದುಬಿಟ್ಟಂತಾಯಿತು ಕನಸು ಹಾರಿದಾಗ..
.
ನಾಳೆಯೂ ಬದುಕುವ ಆಸೆಯಲಿ
ಇಂದಿನ ಕನವರಿಕೆಗೆ ಉಸಿರು
ಹುಡುಕಾಡುವುದು ಜೀವ,
ನಿದ್ದೆ ಕಣ್ಣಿನಿಂದ ತಪ್ಪಿಸಿಕೊಂಡ
ಸ್ವಪ್ನವು ಅದೆಲ್ಲಿ ಹೋಯಿತು
ಈಗಲೀಗ..?!
.
ಅನುಗಾಲದ ಒಲವನು ಧಾರೆ
ಎರೆಯುವ ಮಾತುಗಳನಾಡುತ್ತಾ
ನಿಲ್ಲಿಸಿಕೊಳಬೇಕಿತ್ತು ಮತ್ತೊಂದರೆ
ಕ್ಷಣವಾದರೂ, ಬರಲಾರದಿರುವ
ಹುಸಿ ಶಂಕೆಯಾದರೂ ಕಾಡುತ್ತಿರಲಿಲ್ಲ
ಆಗಲೀಗ…
.
ಮಾಯಕದ ಸುಳಿಯಲೊಂದು ಕನಸು
ಮೋಡಿ ಹಾಕಿತ್ತು ಹೊರಗೆ ಕಾಣದಂತೆ,
ಮುಳುಗು ಹಾಕಿ ಮೇಲೆದ್ದಾಗ
ಚಕ್ರರತ್ನದ ಅಲೆಅಲೆಗಳೂ ತೇಲಿ
ದಡವ ಮುಟ್ಟುವಷ್ಟರಲ್ಲಿ
ಮಂಗಮಾಯ…
.
ಸಪನವೆಂದರೆ ಸೊಗಸು, ಕನಸೆಂದರೊಂದು
ಮೋಹ.. ಬಾಯಾರಿಕೆಯಲಿ ತುಟಿ
ಸವರಿಕೊಂಡ ಜೇನ ಹನಿಯಂತೆ,
ಒಡಲಾಳದ ದಾಹ ಹಾಗೇ
ಉಳಿದುಬಿಟ್ಟಂತಾಯಿತು ಕನಸು ಹಾರಿದಾಗ..
.
ನಾಳೆಯೂ ಬದುಕುವ ಆಸೆಯಲಿ
ಇಂದಿನ ಕನವರಿಕೆಗೆ ಉಸಿರು
ಹಂಚಿಕೊಳ್ಳುವಾಗ ಒಂದು ಕನಸಾದರೂ
ಖುಷಿಗೆ ಬೀಳಬೇಕಲ್ಲಾ..
.
ಏನೂ ಕಾರಣವಿರದೆ ಸ್ವಪ್ನವು
ಏನೂ ಕಾರಣವಿರದೆ ಸ್ವಪ್ನವು
ಮರೆಯಾಗುವುದೆಂದರೇನು..!
ಒಲವನು ತುಂಬಿಕೊಡದೆ ಉದಾಸೀನ
ಮಾಡಿದೆನೆಂದು ವಿದಾಯ ಹೇಳಿತೆ..? ಅಥವಾ
ಕಾಯುವಿಕೆಯು ಮತ್ತೊಂದು ಸ್ವಪ್ನವೇ..!
.
.
-ವಸುಂಧರಾ ಕೆ ಎಂ., ಬೆಂಗಳೂರು
ಚೆಂದದ ಕವನ… ಕಾಯುವಿಕೆಯು ಮತ್ತೊಂದು ಸ್ವಪ್ನವೇ..ಹೌದು ಅನಿಸಿತು 🙂
ಬಹು ಅರ್ಥಪೂರ್ಣ..