ಆಗುವಾಸೆ…..
ಹಕ್ಕಿಯಾಗಲೆ ಆಗಸವನಳೆಯಲು,
ಚುಕ್ಕಿಯಾಗಲೆ ಆಗಸವನಾಳಲು?
ಅಳೆವ ಆಳ್ವ ಮಾತಂತಿರಲಿ,
ಹಾಳಾಗದೆ ಉಳಿಯಬೇಕು..
ಮೋಡವಾಗಲೆ ಮಳೆ ಸುರಿಸಲು,
ಆವಿಯಾಗಿ ಸಾಗರನ ಎದೆಯಿಂದ?
ಹನಿಯಾಗುವುದು, ಮಳೆಯಾಗುವುದು
ಅಂತಿರಲಿ, ನದಿಯಾಗಿ ಉಳಿಯಬೇಕು…
ಹೂವಾಗಲೆ ಜಗದ ಮೆಚ್ಚುಗೆಗೆ,
ಹಣ್ಣಾಗಲೇ ಮತ್ತೆ ರುಚಿಯ ಹೆಚ್ಚುಗೆಗೆ?
ಹೂವಾಗಿ ಹಣ್ಣು ಆಗುವುದು ಅಂತಿರಲಿ
ಮಾಗಬೇಕು – ಮರವಾಗಬೇಕು..
ಆಗಬೇಕು ಆಗುತಿರಬೇಕು ಕೌತುಕದ
ಬದುಕಿನಲಿ ಸಾಗುತಿರಬೇಕು ಮುಂದೆ
ಮುಂದೆ ಸಾಗಬೇಕು ಗುರಿಯ ಸೇರಬೇಕು
ಕುರಿಮಂದೆ ಮಾತ್ರ ಎಂದಿಗೂ ಆಗುವುದು ಬೇಡ.
–ವಸುಂಧರಾ ಕೆ ಎಂ., ಬೆಂಗಳೂರು
ಕುರಿಮಂದೆಯಾಗದಂತೆ ನೋಡಿಕೊಳ್ಳೋಣ……
ವಾ…..ವ್ Beautiful lines
ಒಂದು ಸುಂದರವಾದ ಭರವಸೆ ತುಂಬುವಂತಹ ಸಂದೇಶ ಇದೆ ನಿಮ್ಮ ಸಾಲುಗಳಲ್ಲಿ
ಸೊಗಸಾದ ಅರ್ಥಪೂರ್ಣ ಕವನ.
ಸೊಗಸಾದ ಕವನ.