‘ನಮ್ಮಷ್ಟಕ್ಕೆ ನಾವು’
ಪಟ್ಟಣದಲ್ಲೀಗ ಗೆಳೆಯರೇ
ಸಿಕ್ಕುವುದಿಲ್ಲವಂತೆ..!
ನಮ್ಮ ಹಾಗೆ ಕಲೆಯಲು,
ಕೂಡಿ ಆಡಲು…
ಮಾತೂ ಕೂಡ ತುಟ್ಟಿಯಂತೆ
ಅಲ್ಲಿ..! ಮೊಬೈಲ್ ಗಳು
ಅದಕ್ಕೇ ಅಷ್ಟು ದುಬಾರಿ..!
ಸ್ನೇಹ ಮಂಟಪದ
ನೆರಳಿನಡಿ ಕೊಂಚ ಹೊತ್ತು
ನೆರಳಿನಡಿ ಕೊಂಚ ಹೊತ್ತು
ಕೂರುವ ಬಾ ಗೆಳೆಯ….
.
ಇಲ್ಲಿ ಸಮಯಕ್ಕೇನೂ
ಇಲ್ಲಿ ಸಮಯಕ್ಕೇನೂ
ಅವಸರವಿಲ್ಲ. ಅದೇ ಗದ್ದೆ ,ಹೊಲ,
ತೋಟಗಳು ಕಾದಾವು ನಮಗೆ..
.
ಇಕೋ, ಮನಸ್ಸು ಹಗುರಾಗಲು
ಇಕೋ, ಮನಸ್ಸು ಹಗುರಾಗಲು
ಎಷ್ಟು ಸಮಯ ಹಿಡಿಯುತಿದೆ..!
ಹಿಂದೆ ಹೀಗಿತ್ತೇನು..?
ಹಿಂದೆ ಹೀಗಿತ್ತೇನು..?
.
ಈಗೀಗ ನಗರದ ಗಾಳಿ ಹಳ್ಳಿಗೂ
ಈಗೀಗ ನಗರದ ಗಾಳಿ ಹಳ್ಳಿಗೂ
ಬೀಸುತ್ತಿದೆಯೇನೋ..!
ಬೇಸರಾಗಿದೆ ಮನಸಿಗೆ.
.
ಮುಖದ ಗೆರೆ ಕದಡುವಂತೆ
ಮುಖದ ಗೆರೆ ಕದಡುವಂತೆ
ನಗಲೂ ಬರದಲ್ಲ ನಮಗೆ?
ಮನಸ್ಸೊಳಗೇ ಬಿಮ್ಮು, ಹಮ್ಮು.
.
ಒಮ್ಮೆ ಪ್ರಯತ್ನಿಸೋಣ
ಒಮ್ಮೆ ಪ್ರಯತ್ನಿಸೋಣ
ಗೆಳೆಯ ಮನವರಳಿಸಿಕೊಂಡು
ನಗಲು.. ನಗಲು..
.
ನಕ್ಕು ಹಗುರಾಗುವ,
ನಕ್ಕು ಹಗುರಾಗುವ,
ನಮ್ಮಷ್ಟಕ್ಕೆ ನಾವು ಸಣ್ಣವರಾಗಿದ್ದಾಗ
ನಕ್ಕಂತೆ.. ವಿನಾಕಾರಣ..!
.
ನಗರದ ಗಾಳಿ ಹಳ್ಳಿಗಳೆಡೆಗೆ
ನಗರದ ಗಾಳಿ ಹಳ್ಳಿಗಳೆಡೆಗೆ
ಬೀಸುವುದು ಬೇಡವಾಗಿದೆ ನನಗೆ,
ನಿನಗೆ ಹೇಗೆ…. ?
.
.
– ವಸುಂಧರಾ ಕೆ. ಎಂ., ಬೆಂಗಳೂರು
,
ಚೆಂದಿದೆ ವಸುಂಧರಾ
ಸ್ಮಿತಾ ಜೀ
ಸುಂದರ ಕವನ.
ಧನ್ಯವಾದಗಳು..