Author: Jyothi Basavaraja , jyothisdesai1@gmail.com
ಗಜಲ್
ನಿರ್ಮೋಹದೊಡನೆ ವ್ಯಾಮೋಹವದು ಸಂಘರ್ಷಕ್ಕಿಳಿಯುತ್ತದೆ ಅರ್ಥವಿಲ್ಲದೆ ನಿಲುಕದ ನಕ್ಷತ್ರಕ್ಕೆ ಜೀವ ಕೈ ಚಾಚುತ್ತದೆ ನಿರಾಸೆಯ ಅರಿವಿಲ್ಲದೆ ಅವನು ಲೌಕಿಕಕ್ಕೆ ಎಳೆಯಲು ಪ್ರಯತ್ನಿಸುತ್ತಿರುತ್ತಾನೆ ಅನುಕ್ಷಣವು ಅವಳು ಅಲೌಕಿಕದತ್ತ ಸಾಗುತ್ತಿರುವಳು ಬದುಕಿನ ಮೋಹವಿಲ್ಲದೆ ಇವನು ಅನುರಾಗದ ಸವಿಫಲ ಉಣಲಿಕ್ಕಿ ದಾರಿ ನೋಡುವನು ಇವಳೋ ಅನುಭಾವದ ಮೇರುಗಿರಿಯ ಏರುತ್ತಿದ್ದಾಳೆ ತಕರಾರಿಲ್ಲದೆ ಅವನೇನೋ ಕೊಟ್ಟು ಪಡೆಯುವ...
ಅಸ್ತಿತ್ವ
ಅದೆಷ್ಟು ಆಯುಧಗಳ ಒಗ್ಗೂಡಿಸುತ್ತಲೆ ಇರುವಿರಿ ನನ್ನ ಅಸ್ತಿತ್ವ ಅಳಿಸಲು ಕಥೆ ಪುರಾಣ ಶಾಸ್ತ್ರಗಳನ್ನೆಲ್ಲ ಶಸ್ತ್ರವಾಗಿಸಿಕೊಂಡದ್ದು ಹಳತಾಯಿತು ನನ್ನ ಅಸ್ತಿತ್ವ ಅಳಿಸಲು ಪಾವಿತ್ರ್ಯತೆ ಅಂಧಶ್ರದ್ಧೆ ನಂಬಿಕೆಗಳ ಶೃಂಕಲೆ ತೊಡಿಸಿದಿರಿ ಮೈಮನಕ್ಕೆ ನನ್ನ ಅಸ್ತಿತ್ವ ಅಳಿಯಲು ಹಿಂಸೆ ಅತ್ಯಾಚಾರಗಳಗೈದು ದುರ್ಬಲಗೊಳಿಸಿ ಅಬಲೆ ನಾನೆಂದು ನಂಬಿಸಿದಿರಿ ನನ್ನ ಅಸ್ತಿತ್ವ ಅಳಿಸಲು ನ್ಯಾಯ...
ತೊಲಗಿಬಿಡು ಕಿರೀಟರೂಪಿ
ಕಾಣದೆ ಕಾಡುತ್ತಿರುವೆ ನೀನು ನೀ ಅಪ್ಪಿದಮೇಲೆ ಸೆಣಸುವರು ನಾವು ತಪ್ಪು ನಿನ್ನದಲ್ಲ ನಮ್ಮದೇ ರತ್ನಗಂಬಳಿ ಹಾಸಿ ಆಹ್ವಾನಿಸಿದವರು ನಾವು ಮದ್ದಿರದೆ ಮೆರೆಯುತ್ತಿರುವೆ ಕಿರೀಟ ರೂಪಿ ಸಿಕ್ಕ ಸಿಕ್ಕದ್ದು ತಿಂದು ನಿನ್ನ ಕರೆತಂದ ಪಾಪಿ ನರಳುತ್ತಿವೆ ಜೀವಗಳು ಯಾವ ಬೇಧವಿಲ್ಲದೆ ಅಮಾಯಕರು ಬಲಿಯಾಗುತ್ತಿರುವರು ಪ್ರಮಾದವಿಲ್ಲದೆ ದಿನಗೂಲಿಗೆ ಹಸಿವಿನ ಸಂಕಟ...
ಸ್ವಾರ್ಥ ಸರಿಯೇ?
ನಿಷ್ಠಾವಂತರಿಗೆ ಕಾಲವಿಲ್ಲ ಲಂಚಕೋರರ ಸಾಮ್ರಾಜ್ಯದೊಳು ಸತ್ಯವಂತರಿಗೆ ಜಾಗವಿಲ್ಲ ಹುಸಿನುಡಿಗರ ಜಾಗದೊಳು ಬಾನಿಂದ ಮಳೆ ಸುರಿಸಲು ಭೂಮಿ ನೀಡಿತೆ ಲಂಚ ತನ್ನ ಕಿರಣಗಳ ತಾ ವಿಸ್ತರಿಸಲು ರವಿ ಬೇಡಿದ್ದೇನು ಕೊಂಚ ಸೃಷ್ಟಿ ತನ್ನ ಕಾರ್ಯಗಳ ನಿಷ್ಠೆಯಿಂದ ಮಾಡುತ್ತಿರಲು ಇಲ್ಲೆ ಹುಟ್ಟಿದ ಹುಲು ಮಾನವನಿಗೆ ಈ ದರಿದ್ರ ತೆವಲು ಗಳಿಸಿದ್ದನ್ನೆಲ್ಲಾ...
ನಿಮ್ಮ ಅನಿಸಿಕೆಗಳು…