ಗಜಲ್
ನಿರ್ಮೋಹದೊಡನೆ ವ್ಯಾಮೋಹವದು ಸಂಘರ್ಷಕ್ಕಿಳಿಯುತ್ತದೆ ಅರ್ಥವಿಲ್ಲದೆ
ನಿಲುಕದ ನಕ್ಷತ್ರಕ್ಕೆ ಜೀವ ಕೈ ಚಾಚುತ್ತದೆ ನಿರಾಸೆಯ ಅರಿವಿಲ್ಲದೆ
ಅವನು ಲೌಕಿಕಕ್ಕೆ ಎಳೆಯಲು ಪ್ರಯತ್ನಿಸುತ್ತಿರುತ್ತಾನೆ ಅನುಕ್ಷಣವು
ಅವಳು ಅಲೌಕಿಕದತ್ತ ಸಾಗುತ್ತಿರುವಳು ಬದುಕಿನ ಮೋಹವಿಲ್ಲದೆ
ಇವನು ಅನುರಾಗದ ಸವಿಫಲ ಉಣಲಿಕ್ಕಿ ದಾರಿ ನೋಡುವನು
ಇವಳೋ ಅನುಭಾವದ ಮೇರುಗಿರಿಯ ಏರುತ್ತಿದ್ದಾಳೆ ತಕರಾರಿಲ್ಲದೆ
ಅವನೇನೋ ಕೊಟ್ಟು ಪಡೆಯುವ ಸುಂದರ ದಾಂಪತ್ಯ ಸವಿಯ ಬಯಸುತ್ತಾನೆ
ಅವಳೋ ಮಾಯದ ಮದ್ದಳೆ ಸದ್ದಡಗಿಸಿ ಸಾಗಿಹಳು ತಕರಾರಿಲ್ಲದೆ
“ಜ್ಯೋತಿ”ಮೋಹ ಪಾಷದಲಿ ಸಿಲುಕಿ ಇಳೆಯ ಆಳರಸನಾದವನವನು
ಆಕೆಯೋ ದಿವ್ಯಾಂಬರ ತೊಟ್ಟು ಕದಳಿಯತ್ತ ಸಾಗಿದ್ದಾಳೆ ಆಯಾಸವಿಲ್ಲದೆ….
-ಜ್ಯೋತಿ ಬಿ ದೇವಣಗಾವ , ಯಾದಗಿರಿ
ವಚನಸಾಹಿತ್ಯದಲ್ಲಿ ಧ್ರುವತಾರೆ ಅಕ್ಕಮಹಾದೇವಿಯ ಅಧ್ಯಾತ್ಮ ದ ನಿಲುವಿನ ಪ್ರತಿಪಾದನೆ ಮಾಡಿ ರಚಿಸಿರುವ ಗಝಲ್ ಅರ್ಥಪೂರ್ಣ ವಾಗಿ ಮೂಡಿ ಬಂದಿದೆ.ಅಭಿನಂದನೆಗಳು ಮೇಡಂ.
ನಿಮ್ಮ ಪ್ರತಿಕ್ರಿಯೆಗೆ ಅನಂತ ವಂದನೆಗಳು
ಸೂಪರ್. ಬೆಳಕಿನತ್ತ ಹೊರಳುವಂತಿದೆ ಅವಳ ಬದುಕು.
ಅಕ್ಕಮಹಾದೇವಿಯ ಆಧ್ಯಾತ್ಮ ಬದುಕಿನ ಬಗೆಗಿನ ಅರ್ಥಪೂರ್ಣವಾದ ಗಝಲ್.