ಗಜಲ್
ಕನ್ನಡಿಗೆ ಅದೇಕೆ ನಿನ್ನ ಚಲುವಿನ ಪುರಾವೆ ಕೇಳುವೆ ನನ್ನೊಮ್ಮೆ ಕೇಳು
ಜೋಡಿ ದೀಪಂಗಳಲಿ ನಗೆಯ ನದಿ ಹರಿಸುವೆ ಇನ್ನೊಮ್ಮೆ ಕೇಳು
ಇರುಳ ಕರೆತರಲು ಸಂಜೆಯದೋ ಪಡುವಣಕೆ ಅವಸರದ ಓಟ
ಸ್ಫಟಿಕಜಲದೊಳು ಬಿಂಬವಿರಿಸಿ ಮೈಮರೆಯುವೆ ಯನ್ನೊಮ್ಮೆ ಕೇಳು
ತಟ್ಟನೆ ತಿರುಗದಿರು ಎನ್ನ ಕಣ್ಣೋಟ ಮಾಟದ ಸೊಬಗ ಹೀರಿ ಬಿಟ್ಟಾತು
ಮೊಗದಲಿಹ ನಸುನಗೆಗೆ ನಾನೇ ಕಾರಣವೇ ನಿನ್ನೋಮ್ಮೆ ಕೇಳು
ಬೆದರದಿರು ಹರಿಣಿಯೆ ತುಸುವೇ ಅಲೆದಾಡು ಬನದಂಗಳದೊಳು
ಎನ್ನ ಕಣ್ಬಾಣಕೆ ಗುರಿಯಾಗುವ ಇರಾದೆಯ ಮುನ್ನೊಮ್ಮೆ ಕೇಳು
ತೊಯ್ದಾಡುತಿದೆ ವಿರಹದಲಿ ಎದೆಯಾಸರೆಯ ‘ಚಿಜ್ಜ್ಯೋತಿ’
ಯಾರಿಗಾಗಿ ಉದುರಿಹವು ಹನಿಗಳೆಲ್ಲ ಕಡೆಗಣ್ಣೊಮ್ಮೆ ಕೇಳು.
–ಜ್ಯೋತಿ ಬಿ ದೇವಣಗಾವ.
ಸಿಹಿ ಸಿಹಿಯಾದ ಸಾಲುಗಳು
ಧನ್ಯವಾದ
ಚೆಲುವೆಯ ಚೆಲುವಿನ ವರ್ಣನೆ
ಧನ್ಯವಾದ ನಿಮಗೆ
ಕೊನೆ ಪ್ಯಾರಾ ಸೊಗಸಾಗಿದೆ.
ಧನ್ಯವಾದ
…….ಸೊಗಸಾಗಿದೆ….ಶುಭಾಕಾಂಕ್ಷೆಗಳು….
ಸುಂದರ ಹೆಣ್ಣೊಬ್ಬಳ ಮನದೊಳಗಿನ ಹೊಯ್ದಾಟವು ಬಹಳ ಸೊಗಸಾಗಿ ಮೂಡಿಬಂದ ಸುಂದರ ಗಝಲ್.