ಒಂದು ಗೀಗೀ ಪದ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಲಗ್ನ ಶುರು ಮಾಡಲಿಕ್ಕ
ಪೂಜಿ ಮಾಡಿಸ್ಕೊಂಡು ಮತ್ತ ಹೋಗದಕ್ಕ
ಗೀಯ ಗೀಯ ಗಾಗಿಯ ಗೀಯ…….
.
ಕರೆಂಟನ್ನೋ ಒಂದು ದೊಡ್ಡ ಸಕ್ತಿ ಬಂದೈತಂತ
ಅದರಾಗೆ ಎಷ್ಟೊ ಪರಿ ಯಂತ್ರ ಓಡ್ತಾವಂತ
ಮಿಕ್ಸರ್ ಗ್ರೈಂಡರ್ ಅನ್ನೋವು ಎಲ್ಲ ಮಾಡ್ತಾವಂತ
ಕುಟ್ಟಿ ರುಬ್ಬಿ ಬೀಸಿ ಎಲ್ಲ ತಾವೇ ಕೊಡ್ತಾವಂತ
ಕೇಳೋರೆ ಇಲ್ಲವಂತ……
ಯಾರನ್ನ………?
ನಮ್ಮನ್ ಕೇಳೋರೇ ಇಲ್ಲವಂತ….ತ….ತತ….
ಗೀಯ ಗೀಯ ಗಾಗಿಯ ಗೀಯ…….
.
.
ಅಟ್ಟದ್ ಮ್ಯಾಲ ಹಿತ್ತಲದಾಗ ನಮಗೀಗ ಜಾಗ ಅಂತ
ಕೆಲವು ಕಡಿ ಪ್ರದರ್ಶನದ ಒಳಗೂ ಇಡತಾರಂತ
ನಮ್ಮ ಜೊತಿ ಕೆಲ್ಸ ಮಾಡಾಕ್ ಆಯಾಸ ಆಗತ್ತಂತ
ಸಮಯ ಸಹನಿ ಎಲ್ಲಾನೂ ಕಡಿಮಿ ಆಗ್ಯಾವಂತ
ಯಂತ್ರ ಆಗ್ಯಾರಂತ……
ಯಾರಪ್ಪಾ…….?
ಮಂದಿ ಯಂತ್ರ ಆಗ್ಯಾರಂತ…..ತ…….ತತ…
ಗೀಯ ಗೀಯ ಗಾಗಿಯ ಗೀಯ……..
.
ಪ್ಯಾಟೆನಾಗು ಹಳ್ಳಿನಾಗು ನಮ್ಮನ್ ಮರ್ತಾರಂತ
ಈಗಿನ್ ಪೀಳೀಗಿಗ್ ನಮ್ಮ ಗುರ್ತಾನೇ ಇಲ್ಲವಂತ
ಲಗ್ನ ಬಂದಾಗ ಮಾತ್ರ ನಮ್ಮ ನೆನಪಾಗ್ತದಂತ
ಉದ್ದಿನ ಮುಹೂರ್ತಕ್ಕ ನಾವೇ ಬೇಕಾಗ್ತದಂತ
ಹೌದಾ………!
ಹೆಸರು ಏನು ಅಂತ……ಹೇಳಿ ನಿಮ್ಮ ಹೆಸರು ಏನು ಅಂತ
………..
ಒನಕೆ ಒರಳು ಬೀಸೋಕಲ್ಲು ಅಂತ……..ತ…….ತತ…..
ಗೀಯ ಗೀಯ ಗಾಗಿಯ ಗೀಯ…….
– ಮೋಹಿನಿ ದಾಮ್ಲೆ ( ಭಾವನಾ )
Wow…Super…
.