ನಮಗಿರಬೇಕು ನಮ್ಮದೇ ವಿಳಾಸ
ಮಾಡಬಾರದು ಕೆಟ್ಟವರ ಸಹವಾಸ
ತೋರಬೇಕು ನಾವಿಲ್ಲಿ ಪ್ರೀತಿ ವಿಶ್ವಾಸ
ಹೊಂದಿರಬೇಕು ನೆಮ್ಮದಿಯ ನಿವಾಸ
ವಿಳಾಸವೇ ಇರದ ಊರಲ್ಲಿ ಇದ್ದೂ
ಇಲ್ಲದಂತೆ ಇದ್ದರೆ ಪ್ರಯೋಜನವೇನು
ವಿಕಾಸವೇ ಹೊಂದದ ಕೆಲಸದಲ್ಲಿ
ನಿರಂತರ ದುಡಿದು ಜಡ್ಡುಗಟ್ಟಿದರೇನು
ಎಲ್ಲೇ ಇರಲಿ ಇರಬೇಕೊಂದು ಗಟ್ಟಿ ನೆಲೆ
ಸಿಗಲೇ ಬೇಕು ಬದುಕಿಗೊಂದು ಪುಟ್ಟ ಬೆಲೆ
ಹೊಟ್ಟೆ ತುಂಬಿಸಲು ಉರಿಯಬೇಕು ಒಲೆ
ಹಾಗಾದರಷ್ಟೇ ಉಳಿವುದು ನೆಮ್ಮದಿಯ ಸೆಲೆ
ನಾಳೆಗಳಿಗಿರಬೇಕು ನಮ್ಮದೇ ಆದ ಕನಸು
ನನಸಾಗಿಸಲು ಮಾಡಬೇಕು ದೃಢ ಮನಸು
ಆಗಷ್ಟೇ ಆಗುವುದು ಈ ಜೀವನ ಸೊಗಸು
ಇಲ್ಲದೇ ಹೋದರೆ ಆಗುವುದು ಹಗಲುಗನಸು

ನಾಗರಾಜ್ ಜಿ.ಎನ್.ಬಾಡ ,ಕುಮಟ

