ಅರ್ಥ ವ್ಯಾಪ್ತಿ ಪರಿಭಾಷೆ ಮೀರಿ
ವ್ಯಾಖ್ಯಾನಿಸುವುದು ದುಸ್ತರ
ಸವಾಲು ಪ್ರಶ್ನೆಗಳನ್ನೆಲ್ಲ ಹಾಕಿ
ಬರೆಸಿಕೊಳ್ಳುವುದು ಉತ್ತರ
ಕೆಲವೊಂದು ಸಂಬಂಧಗಳೇ ಹಾಗೆ
ಹೆಸರಿಸಲಾಗದಷ್ಟು ಎತ್ತರ
ಇನ್ನೂ ಕೆಲವು ಸಂಬಂಧಗಳು
ಬರೀ ಹೆಸರಿಗಷ್ಟೇ ಹತ್ತಿರ
ಪ್ರೀತಿ ವಿಶ್ವಾಸ ಅನುಬಂಧಗಳು
ಹಾಗೆ ಕಡಲಿನಷ್ಟೇ ವಿಸ್ತಾರ
ಆದ ಪಡೆದವನು ತಾನೇ ಅರಸ
ಏರಿ ಸಾಗುವನು ಸುಖದ ತೇರ
ಹಣ ಸಂಪತ್ತುಗಳಿಗಿಂತ ಮಿಗಿಲು
ಭಾವ ಬಂಧನಗಳವು ಬಂಧುರ
ಕೊಟ್ಟು ಪಡೆವಾಟದಲಿ ನಷ್ಟವೇ ಇಲ್ಲ
ಬಾಳವನದ ಸುಮಗಳಿವು ಸುಂದರ

ಸುಜಾತಾ ರವೀಶ್, ಮೈಸೂರು


ಸೂಪರ್ ಸುಂದರ ಚಿತ್ರಗಳೊಂದಿಗೆ ನನ್ನ ಕವನವನ್ನು ಪ್ರಕಟಿಸಿದ ಸಂಪಾದಕಿಯವರಾದ ಹೇಮಮಾಲಾ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಸುಜಾತಾ ರವೀಶ್
ಸರಳ ಸುಂದರ ಕವನ ಪೂರಕ ಚಿತ್ರ.. ಮನಕ್ಕೆ.. ಮುದ ತಂದಿತು…