ಹುಡುಕಿದೆ ಆ ನನ್ನ ದೇವರ!
ಗುಡಿಯ ಕಂಬಗಳಲಿ
ಶಿಲೆಯ ಕಂಗಳಲಿ
ದಾಸರ ಪದಗಳಲಿ
ತೀರ್ಥದ ಧಾರೆಯಲಿ
ಪ್ರಸಾದದ ಕಣದಲಿ
ಭಕ್ತ ಜನರ ಭಕ್ತಿಯಲಿ
ಕಣ್ಣು ಮುಚ್ಚಿದ ಮರುಕ್ಷಣ
ಪಿಸುಗುಟ್ಟಿತು ಧ್ವನಿಯೊಂದು
‘ಅಲೆಯಬೇಡ ಅಲೆಮಾರಿ
ಇರುವೆ ನಾ ಸದಾ ನಿನ್ನಲ್ಲೇ
ಧರ್ಮದಲಿ, ಕರ್ಮದಲಿ
ನಿನ್ನ ಪಾಪ ಪುಣ್ಯದಲಿ
ಮಾತಿನ ಧಾಟಿಯಲಿ
ನಿನ್ನ ಹಾವ ಭಾವದಲಿ
ಪರಿಶುದ್ಧ ನಗುವಿನಲಿ
ನಿರ್ಮಲ ಹೃದಯದಲಿ!’

-ಮಾಲಿನಿ ವಾದಿರಾಜ್


ಅರ್ಥಪೂರ್ಣ ವಾದ ಕವನ..ಗುಡ್
ಚಂದದ ಕವನ
ಸೂಚ್ಯವಾಗಿಯೂ ಸೊಗಸಾಗಿಯೂ ಇದೆ
ನನ್ನ ಅನಿಸಿಕೆ ಕೂಡ ಇದೆ ಆಗಿದೆ
ಒಳಗಿರುವ ದೇವರನ್ನು ಹೊರಗೆ ಹುಡುಕುವ ನಮಗೆ ಸೂಕ್ತ ಸಂದೇಶವನ್ನು ನೀಡುವ ಭಾವ ಹೊತ್ತ ಪುಟ್ಟ ಸುಂದರ ಕವನ.
ದೇವರು ಮೇಲಿರುವ ಆಗಸದಲ್ಲಿಲ್ಲ
ನಿನ್ನ ಹೃದಯದಲ್ಲಿ ನೆಲೆಯಾಗಿರುವ
ಚೆಂದದ ಕವನ