ಬೆಳಕು-ಬಳ್ಳಿ

ದೇವರೆಲ್ಲಿದ್ದಾನೆ?

Share Button

ಹುಡುಕಿದೆ ಆ ನನ್ನ ದೇವರ!
ಗುಡಿಯ ಕಂಬಗಳಲಿ
ಶಿಲೆಯ ಕಂಗಳಲಿ
ದಾಸರ ಪದಗಳಲಿ
ತೀರ್ಥದ ಧಾರೆಯಲಿ
ಪ್ರಸಾದದ ಕಣದಲಿ
ಭಕ್ತ ಜನರ ಭಕ್ತಿಯಲಿ

ಕಣ್ಣು ಮುಚ್ಚಿದ ಮರುಕ್ಷಣ
ಪಿಸುಗುಟ್ಟಿತು ಧ್ವನಿಯೊಂದು
‘ಅಲೆಯಬೇಡ ಅಲೆಮಾರಿ
ಇರುವೆ ನಾ ಸದಾ ನಿನ್ನಲ್ಲೇ
ಧರ್ಮದಲಿ, ಕರ್ಮದಲಿ
ನಿನ್ನ ಪಾಪ ಪುಣ್ಯದಲಿ
ಮಾತಿನ ಧಾಟಿಯಲಿ
ನಿನ್ನ ಹಾವ ಭಾವದಲಿ
ಪರಿಶುದ್ಧ ನಗುವಿನಲಿ
ನಿರ್ಮಲ ಹೃದಯದಲಿ!’

-ಮಾಲಿನಿ ವಾದಿರಾಜ್‌

6 Comments on “ದೇವರೆಲ್ಲಿದ್ದಾನೆ?

  1. ಒಳಗಿರುವ ದೇವರನ್ನು ಹೊರಗೆ ಹುಡುಕುವ ನಮಗೆ ಸೂಕ್ತ ಸಂದೇಶವನ್ನು ನೀಡುವ ಭಾವ ಹೊತ್ತ ಪುಟ್ಟ ಸುಂದರ ಕವನ.

Leave a Reply to Nagarathna BR Cancel reply

 Click this button or press Ctrl+G to toggle between Kannada and English

Your email address will not be published. Required fields are marked *