ಬೆಳಕು-ಬಳ್ಳಿ

ಇರುವುದ ಬಿಟ್ಟು

Share Button

ಚಿಕ್ಕಪುಟ್ಟ ವಿಷಯಕ್ಕೂ ಅರಿತು ಅರಿಯದೆಯೋ
ನಾವು ಜಗಳ ಆಡುವುದು ಎಷ್ಟೊಂದು ಸುಲಭ
ಪ್ರತಿದಿನ ಇನ್ನೊಬ್ಬರೊಂದಿಗೆ ಹೊಂದಿಕೊಂಡು
ಜೀವನದಿ ಮುಂದೆ ಸಾಗುವುದು ಎಷ್ಟೊಂದು ಕಷ್ಟ
ಸಂಕೀರ್ಣತೆಯಿಂದ ಕೂಡಿದ ನಮ್ಮ ಬದುಕಿನಲಿ

ಹುಡುಕಲಾಗದು ಮನದೊಳಗಿನ ಪ್ರೀತಿಯ
ಬರೀ ಮಾತಲ್ಲಿ ಹೇಳಲಾಗದು ಒಲವ ಪರಿಯ
ಆರಿಯಲಾಗದು ಮೌನದ ಹಿಂದಿನ ಶಕ್ತಿಯ
ತಲುಪಲಾಗದು ಮನದ ಅಂತರಾಳದ ನೆಲೆಯ
ಗುರುತಿಸಲಾಗದೇ ಹೋದರೆ ಒಲವ ಬೆಲೆಯ

ಚಿಕ್ಕ ಪುಟ್ಟ ವಿಷಯ ಆಗಬಾರದು ಸಂಕೀರ್ಣ
ಖುಷಿಯ ಕ್ಷಣಗಳು ಆಗುವುದು ಅಪೂರ್ಣ
ಯಾರೂ ಇಲ್ಲ ಈ ಜಗದೊಳಗೆ ಪರಿಪೂರ್ಣ
ಹೊಂದಿಕೊಂಡರೆ ಮಾತ್ರ ಇಷ್ಟಾರ್ಥ ಸಂಪೂರ್ಣ
ಬದುಕು ಆಗಬಾರದು ಎಂದಿಗೂ ಅಪೂರ್ಣ

ಕ್ಷುಲ್ಲಕ ಕಾರಣವನ್ನು ಮರೆತು ಬದುಕಬೇಕು
ಪ್ರೀತಿ ಆತ್ಮೀಯತೆಯನ್ನು ಬಿತ್ತಿ ಬೆಳೆಯಬೇಕು
ಅಸಹನೆಯ ಬಿಟ್ಟು ಸಹನೆಯ ಹೊಂದಬೇಕು
ಒಬ್ಬರನ್ನೊಬ್ಬರು ಪರಸ್ಪರ ಸದಾ ಗೌರವಿಸಬೇಕು
ಇರುವುದ ಮರೆತು ಹುಡುಕುವುದ ಬಿಡಬೇಕು

-ನಾಗರಾಜ ಜಿ.ಎನ್.ಬಾಡ,ಕುಮಟ

8 Comments on “ಇರುವುದ ಬಿಟ್ಟು

  1. ಹುಡುಕುವುದ ಬಿಡಬೇಕು

    ಕೊನೆಯ ಸಾಲು ಅರ್ಥಗರ್ಭಿತ, ಒಂದಲ್ಲ ಒಂದನ್ನು ಹುಡುಕುವುದೇ ಜೀವನದ ವ್ಯರ್ಥ ಸಾಧನೆಯಾಗುವ
    ಹೊತ್ತಲಿ ಈ ತಿಳಿವು ಅಮೂಲ್ಯ.

    ಒಳಗೆ ಪಯಣಿಸದೇ ಹೊರಗೆ
    ಹುಡುಕಿಕೊಂಡು ಹೊರಡುವ ಮಂದಿ ಅದೆಷ್ಟೋ

    ನಿಮ್ಮ ಈ ಸಾಲು ನನಗೆ ಪ್ರೇರಣೆಯಾಗಿದೆ.

  2. ಇರುವುದೆಲ್ಲವ ಬಿಟ್ಟು ಇಲ್ಲದುದ ಹುಡುಕುವುದೆ ಇಂದು ಮಾನವನ ಜೀವನವೆನಿಸಿದೆ. ಉತ್ತಮ ಸಂದೇಶವನ್ನು ಹೊತ್ತ ಕವನ ಚೆನ್ನಾಗಿದೆ.

Leave a Reply to ವಿದ್ಯಾ Cancel reply

 Click this button or press Ctrl+G to toggle between Kannada and English

Your email address will not be published. Required fields are marked *