ಚಿಕ್ಕಪುಟ್ಟ ವಿಷಯಕ್ಕೂ ಅರಿತು ಅರಿಯದೆಯೋ
ನಾವು ಜಗಳ ಆಡುವುದು ಎಷ್ಟೊಂದು ಸುಲಭ
ಪ್ರತಿದಿನ ಇನ್ನೊಬ್ಬರೊಂದಿಗೆ ಹೊಂದಿಕೊಂಡು
ಜೀವನದಿ ಮುಂದೆ ಸಾಗುವುದು ಎಷ್ಟೊಂದು ಕಷ್ಟ
ಸಂಕೀರ್ಣತೆಯಿಂದ ಕೂಡಿದ ನಮ್ಮ ಬದುಕಿನಲಿ
ಹುಡುಕಲಾಗದು ಮನದೊಳಗಿನ ಪ್ರೀತಿಯ
ಬರೀ ಮಾತಲ್ಲಿ ಹೇಳಲಾಗದು ಒಲವ ಪರಿಯ
ಆರಿಯಲಾಗದು ಮೌನದ ಹಿಂದಿನ ಶಕ್ತಿಯ
ತಲುಪಲಾಗದು ಮನದ ಅಂತರಾಳದ ನೆಲೆಯ
ಗುರುತಿಸಲಾಗದೇ ಹೋದರೆ ಒಲವ ಬೆಲೆಯ
ಚಿಕ್ಕ ಪುಟ್ಟ ವಿಷಯ ಆಗಬಾರದು ಸಂಕೀರ್ಣ
ಖುಷಿಯ ಕ್ಷಣಗಳು ಆಗುವುದು ಅಪೂರ್ಣ
ಯಾರೂ ಇಲ್ಲ ಈ ಜಗದೊಳಗೆ ಪರಿಪೂರ್ಣ
ಹೊಂದಿಕೊಂಡರೆ ಮಾತ್ರ ಇಷ್ಟಾರ್ಥ ಸಂಪೂರ್ಣ
ಬದುಕು ಆಗಬಾರದು ಎಂದಿಗೂ ಅಪೂರ್ಣ
ಕ್ಷುಲ್ಲಕ ಕಾರಣವನ್ನು ಮರೆತು ಬದುಕಬೇಕು
ಪ್ರೀತಿ ಆತ್ಮೀಯತೆಯನ್ನು ಬಿತ್ತಿ ಬೆಳೆಯಬೇಕು
ಅಸಹನೆಯ ಬಿಟ್ಟು ಸಹನೆಯ ಹೊಂದಬೇಕು
ಒಬ್ಬರನ್ನೊಬ್ಬರು ಪರಸ್ಪರ ಸದಾ ಗೌರವಿಸಬೇಕು
ಇರುವುದ ಮರೆತು ಹುಡುಕುವುದ ಬಿಡಬೇಕು
-ನಾಗರಾಜ ಜಿ.ಎನ್.ಬಾಡ,ಕುಮಟ

